ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೆಲ್ಲೆಡೆ 1000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಕೇಂದ್ರ: ಮೊಇವಿಂಗ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ವಿದ್ಯುತ್ ಚಾಲಿತ ವಾಹನಗಳ (EV) ಚಾರ್ಜಿಂಗ್ ಮೂಲ ಸೌಕರ್ಯಗಳ ಭಾರತದ ಪ್ರಮುಖ ಕಂಪನಿಯಾಗಿರುವ ಇವಿಆರ್‍ಇ (EVRE), ನಗರದಲ್ಲಿನ ವಾಹನಗಳ ಸಂಚಾರ / ಬಳಕೆಗೆ ಸಂಬಂಧಿಸಿದ ತಂತ್ರಜ್ಞಾನ ಆಧಾರಿತ ವಾಹನಗಳ ಭಾರತದ ಪ್ರಮುಖ ನವೋದ್ಯಮವಾಗಿರುವ ಮೊಇವಿಂಗ್ (MoEVing) ಪಾಲುದಾರಿಕೆ ಆರಂಭಿಸಿರುವುದಾಗಿ ಇಂದು ಇಲ್ಲಿ ಪ್ರಕಟಿಸಿವೆ.

ಈ ಪಾಲುದಾರಿಕೆಯ ಅಡಿಯಲ್ಲಿ, ಇವಿಆರ್‍ಇ ಮುಂದಿನ ಆರು ತಿಂಗಳೊಳಗೆ ದೇಶದಾದ್ಯಂತ 1,000 ವಿದ್ಯುತ್‍ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಇವುಗಳನ್ನು ಮೊಇವಿಂಗ್ ಮತ್ತು ಇತರ ವಿದ್ಯುತ್‍ಚಾಲಿತ ವಾಹನಗಳ ಮಾಲೀಕರು ಬಳಸಿಕೊಳ್ಳಲಿದ್ದಾರೆ. ದೀರ್ಘಾವಧಿಯ ಪಾಲುದಾರಿಕೆಯು ನವೀನ ವ್ಯವಹಾರ ಮಾದರಿಯನ್ನು ಆಧರಿಸಿರುತ್ತದೆ.

ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾರ್ಗದರ್ಶನ ನೀಡಲು ಕೈಪಿಡಿವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾರ್ಗದರ್ಶನ ನೀಡಲು ಕೈಪಿಡಿ

ಎರಡೂ ಕಂಪನಿಗಳಿಗೆ ಸೇರಿದ ಚಾರ್ಜಿಂಗ್ ಕೇಂದ್ರಗಳನ್ನು ಪರಸ್ಪರ ಬಳಕೆ ಮಾಡಬಹುದು. ಉದಾಹರಣೆಗೆ, ಪ್ರಸ್ತುತ ಬೆಂಗಳೂರಿನಲ್ಲಿ, ಮೊಇವಿಂಗ್, ಇವಿಆರ್‍ಇನ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಬಳಸುತ್ತಿದೆ ಮತ್ತು ಇದಕ್ಕೆ ಸಮಾನಾಂತರವಾಗಿ, ಇವಿಆರ್‍ಇ ಕೂಡ ಬೆಂಗಳೂರಿನಲ್ಲಿ ಮೊಇವಿಂಗ್ ಚಾರ್ಜಿಂಗ್ ಕೇಂದ್ರಗಳನ್ನು ಬಳಸುತ್ತಿದೆ.

ಬೆಂಗಳೂರಿನಲ್ಲಿ 200 ಚಾರ್ಜಿಂಗ್ ಕೇಂದ್ರ

ಬೆಂಗಳೂರಿನಲ್ಲಿ 200 ಚಾರ್ಜಿಂಗ್ ಕೇಂದ್ರ

ಇವಿಆರ್‍ಇ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯು ಹಂತ ಹಂತವಾಗಿ ನಡೆಯಲಿದೆ. ಬೆಂಗಳೂರಿನಲ್ಲಿ 200, ಹೈದರಾಬಾದ್‍ನಲ್ಲಿ 200 ಮತ್ತು ಉಳಿದವುಗಳನ್ನು ಕೊಲ್ಕತ್ತಾ, ಚೆನ್ನೈ, ದೆಹಲಿ ಎನ್‍ಸಿಆರ್, ಚಂಡೀಗಡ, ಪುಣೆ ಮತ್ತು ಮುಂಬೈಗಳಲ್ಲಿ ಕ್ರಮೇಣ ಸ್ಥಾಪಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ, ಇವಿಆರ್‍ಇ ಮತ್ತು ಮೊಇವಿಂಗ್ ಒಟ್ಟಾಗಿ ಕೆಲಸ ಮಾಡಲಿವೆ. ಮೇಲೆ ಉಲ್ಲೇಖಿಸಿರುವ ನಗರಗಳಾದ್ಯಂತ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಮಹಾನಗರಗಳಲ್ಲಿ ವಾಣಿಜ್ಯ ಉದ್ದೇಶದ ವಿದ್ಯುತ್‍ಚಾಲಿತ ವಾಹನಗಳ ಬಳಕೆ ಹೆಚ್ಚಿಸುವುದನ್ನು ಹಾಗೂ ಅಗತ್ಯ ಬೆಂಬಲ ನೀಡುವುದನ್ನು ಈ ಮೂಲಸೌಕರ್ಯವು ಖಚಿತಪಡಿಸಲಿದೆ.

ಇವಿಆರ್‍ಇಗೆ ನಿರ್ವಹಣೆ ಜವಾಬ್ದಾರಿ

ಇವಿಆರ್‍ಇಗೆ ನಿರ್ವಹಣೆ ಜವಾಬ್ದಾರಿ

ಈ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ವಿನ್ಯಾಸ, ತಯಾರಿಕೆ, ಸ್ಥಾಪನೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಇವಿಆರ್‍ಇ ಹೊತ್ತುಕೊಂಡಿದೆ, ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಎಲ್ಲಾ ಚಾರ್ಜರ್‍ಗಳ ತಂತ್ರಜ್ಞಾನವು ಇವಿಆರ್‍ಇ ಒಡೆತನದಲ್ಲಿ ಇರಲಿದೆ. ಬೇಡಿಕೆ, ಸಮರ್ಪಕ ಪೂರೈಕೆ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹಣಕಾಸಿನ ಸೌಲಭ್ಯಕ್ಕೆ ಸಂಪರ್ಕ ಸಾಧಿಸಲು ಸಂಯೋಜಿತ ವಿಧಾನವನ್ನು ಅನುಸರಿಸಲಾಗುವುದು. ಈ ಪಾಲುದಾರಿಕೆಯಲ್ಲಿ ಮೊಇವಿಂಗ್, ಹೆಚ್ಚಿನ ಬಳಕೆಗಾಗಿ ಇವಿಆರ್‍ಇ ಚಾರ್ಜಿಂಗ್ ಕೇಂದ್ರಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಈ ಜಾಲದ ವಿಸ್ತರಣೆ ಮತ್ತು ಬಳಕೆಯು ದೂರಸಂಪರ್ಕ ಉದ್ಯಮಕ್ಕೆ ಸಮನಾಗಿದ್ದು, ದೂರಸಂಪರ್ಕ ಉದ್ಯಮದಂತೆಯೇ ಚಾರ್ಜಿಂಗ್ ಮೂಲಸೌಕರ್ಯ ಜಾಲವನ್ನು ಬಳಸಿಕೊಳ್ಳಬಹುದು. ಇದರಿಂದ ಒಟ್ಟಾರೆ ಅಳವಡಿಕೆ ಮತ್ತು ಬಳಕೆ ಹೆಚ್ಚಿಸಬಹುದಾಗಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ದಿನ 1 ಲಕ್ಷ ಬುಕ್ಕಿಂಗ್ಓಲಾ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ದಿನ 1 ಲಕ್ಷ ಬುಕ್ಕಿಂಗ್

ಮೊಇವಿಂಗ್‍ನ ಸಂಸ್ಥಾಪಕ ವಿಕಾಸ್ ಮಿಶ್ರಾ

ಮೊಇವಿಂಗ್‍ನ ಸಂಸ್ಥಾಪಕ ವಿಕಾಸ್ ಮಿಶ್ರಾ

ಮೊಇವಿಂಗ್‍ನ ಸಂಸ್ಥಾಪಕ ಮತ್ತು ಸಿಇಒ ವಿಕಾಶ್ ಮಿಶ್ರಾ ಅವರು ಮಾತನಾಡಿ, 'ಚಾರ್ಜಿಂಗ್ ಮೂಲಸೌಕರ್ಯ ವಿಸ್ತರಣೆಯು ದೂರಸಂಪರ್ಕ ಜಾಲದ ವಿಸ್ತರಣೆ ವಿಧಾನವನ್ನು ಅನುಸರಿಸಬೇಕು. ಚಾರ್ಜ್ ಮಾಡುವ ಮೂಲಸೌಕರ್ಯಗಳ ಲಭ್ಯತೆಯು ಭಾರತದಲ್ಲಿ ವಿದ್ಯುತ್‍ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಲು ನೆರವಾಗಲಿದೆ. ಇವಿಆರ್‍ಇ ಜೊತೆಗಿನ ಈ ಪಾಲುದಾರಿಕೆಯು ದೊಡ್ಡ ವಿದ್ಯುತ್‍ಚಾಲಿತ ವಾಹನಗಳಿಗೆ ಸಂಬಂಧಿಸಿದಂತೆ ಒಂದು ರೋಚಕ ಪ್ರಯತ್ನವಾಗಿದೆ. ನಾವು ಮತ್ತು ಇವಿಆರ್‍ಇ ನಿರ್ಮಿಸುವ ಚಾರ್ಜಿಂಗ್ ಮೂಲಸೌಕರ್ಯವನ್ನು ಇಬ್ಬರೂ ಪಾಲುದಾರರು ಪರಸ್ಪರ ಬಳಸಿಕೊಳ್ಳಲಿದ್ದಾರೆ. ಈ ಪಾಲುದಾರಿಕೆಯು ನಮ್ಮ ವಿದ್ಯುತ್‍ಚಾಲಿತ ವಾಹನಗಳ ಬಳಕೆಯನ್ನು ಅತ್ಯುತ್ತಮವಾಗಿ ವಿಸ್ತರಿಸಲು ಮತ್ತು ಚಾಲಕರಿಗೆ ಚಾರ್ಜಿಂಗ್ ಮೂಲಸೌಕರ್ಯವು ಸುಲಭವಾಗಿ ದೊರೆಯುವುದನ್ನು ಖಾತರಿಪಡಿಸಲಿದೆ. ಈ ಪಾಲುದಾರಿಕೆಯು ಭಾರತದಲ್ಲಿ ವಿದ್ಯುತ್‍ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸಲು ಆದರ್ಶಪ್ರಾಯವಾಗಿದೆ' ಎಂದು ಹೇಳಿದ್ದಾರೆ.

ಇವಿಆರ್‍ಇನ ಸಹ-ಸಂಸ್ಥಾಪಕ ಕೃಷ್ಣ ಕೆ ಜಸ್ತಿ

ಇವಿಆರ್‍ಇನ ಸಹ-ಸಂಸ್ಥಾಪಕ ಕೃಷ್ಣ ಕೆ ಜಸ್ತಿ

ಈ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ 'ಇವಿಆರ್‍ಇ'ನ ಸಹ-ಸಂಸ್ಥಾಪಕ ಮತ್ತು ಸಿಇಒ ಕೃಷ್ಣ ಕೆ ಜಸ್ತಿ ಅವರು, 'ದೇಶದ ಒಟ್ಟಾರೆ ವಾಹನಗಳ ಬಳಕೆಯಲ್ಲಿ ವಿದ್ಯುತ್‍ಚಾಲಿತ ವಾಹನಗಳ ಬಳಕೆಯು ಆದ್ಯತೆಯ ಸಂಗತಿಯಾಗಿ ಗರಿಷ್ಠ ಪಾಲು ಹೊಂದಬೇಕಾಗಿದೆ. ದೇಶದಾದ್ಯಂತ ಇದೇ ಮೊದಲ ಬಾರಿಗೆ ಜಾರಿಗೆ ಬಂದಿರುವ ಈ ಪಾಲುದಾರಿಕೆಯೊಂದಿಗೆ, ಮೊಇವಿಂಗ್ ಮತ್ತು ಇವಿಆರ್‍ಇ ಸಹಯೋಗದಲ್ಲಿ ಆದರ್ಶ ವಿದ್ಯುತ್ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಾಗಲಿದೆ. ಇದು ಅಂತಿಮವಾಗಿ ಇಂಗಾಲದ (Co2 ) ಹೊರಸೂಸುವಿಕೆಯನ್ನು ವಾರ್ಷಿಕ 5.4 ದಶಲಕ್ಷ ಟನ್‍ಗಳಷ್ಟು ಕಡಿಮೆ ಮಾಡಲು ಮತ್ತು ವಾರ್ಷಿಕವಾಗಿ 2.4 ದಶಲಕ್ಷ ಲೀಟರ್‍ನಷ್ಟು ಪಳೆಯುಳಿಕೆ ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಪಾಲುದಾರಿಕೆಯ ಮೂಲಕ, ನಾವು 'ಇವಿಆರ್‍ಇ'ನಲ್ಲಿ, ವಿದ್ಯುತ್‍ಚಾಲಿತ ವಾಹನಗಳ ಬಳಕೆದಾರರಿಗೆ ಆಟೊಮೇಷನ್ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತೇವೆ' ಎಂದು ಹೇಳಿದ್ದಾರೆ.

English summary
EVRE, India’s leading EV Charging Infrastructure player, announced today its partnership with MoEVing, India’s leading tech enabled electric fleet startup for urban mobility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X