ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಬುಟ್ಟಿಗೆ ಬಿತ್ತಾ ಯುರೋಪ್..? ಡ್ರ್ಯಾಗನ್ ಉರುಳಿಸಿದೆ ‘ದಾಳ’

|
Google Oneindia Kannada News

ಜಗತ್ತು ಸಂಕಷ್ಟದಲ್ಲಿದೆ, ಕೊರೊನಾ ಕೋಲಾಹಲದಲ್ಲಿ ಜಗತ್ತಿನ ಆರ್ಥಿಕತೆ ಕೊಚ್ಚಿ ಹೋಗಿದೆ. ಅದರಲ್ಲೂ ಯುರೋಪ್ ರಾಷ್ಟ್ರಗಳು ಅಕ್ಷರಶಃ ಬೀದಿಗೆ ಬೀಳುವ ಅಪಾಯ ಎದುರಾಗಿದೆ. ಇಂತಹ ಹೊತ್ತಲ್ಲೇ ತಮ್ಮ ಶತಮಾನದ ಗೆಳೆಯ ಅಮೆರಿಕದ ಕಡೆ ಮುಖ ಮಾಡಬೇಕಿದ್ದ ಯುರೋಪ್ ರಾಷ್ಟ್ರಗಳು ಈಗ ತಮ್ಮ ವರಸೆ ಬದಲಿಸಿವೆ.

2014ರಿಂದಲೂ ಮೂಲೆಗೆ ಬಿದ್ದಿದ್ದ ಯುರೋಪ್ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ಬಂದು ನಿಲ್ಲುವ ಲಕ್ಷಣ ಗೋಚರಿಸಿದೆ. ಇತ್ತೀಚೆಗೆ ಬ್ರಿಟನ್ ಜೊತೆಗೆ 'ಬ್ರೆಕ್ಸಿಟ್' ಒಪ್ಪಂದ ಮಾಡಿಕೊಂಡ ಯುರೋಪ್ ಒಕ್ಕೂಟ ಇನ್ನೇನು ಕೆಲವೇ ತಿಂಗಳಲ್ಲಿ ಚೀನಾ ಜೊತೆಗೂ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.

ಕೋಟಿ ಕೋಟಿ ಜನರಿಗೆ 'ಕೊರೊನಾ’ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆಕೋಟಿ ಕೋಟಿ ಜನರಿಗೆ 'ಕೊರೊನಾ’ ವ್ಯಾಕ್ಸಿನ್ ನೀಡುವ ಕಾರ್ಯಕ್ಕೆ ಚಾಲನೆ

ಈ ಒಪ್ಪಂದ ನಡೆದು ಹೋದರೆ ಚೀನಾ ಪಾಲಿಗೆ ಯುರೋಪ್ 'ಅಕ್ಷಯಪಾತ್ರೆ' ಆಗುವುದು ಗ್ಯಾರಂಟಿ. ಏಕೆಂದರೆ ಅಮೆರಿಕದ ಜೊತೆಗಿನ ಗುದ್ದಾಟದಲ್ಲಿ ಕಳೆದುಕೊಂಡಿರುವ ವ್ಯಾಪಾರವನ್ನು ಯುರೋಪ್‌ ನೆಲದಲ್ಲಿ ಗಿಟ್ಟಿಸುವ ಖತರ್ನಾಕ್ ಐಡಿಯಾ ಡ್ರ್ಯಾಗನ್ ಚೀನಾದ್ದಾಗಿದೆ. ಚೀನಾ ಮಾಡಿರುವ ಖತರ್ನಾಕ್ ಪ್ಲಾನ್ ಈಡೇರಲು ಇನ್ನೊಂದೇ ಹೆಜ್ಜೆ ಬಾಕಿ ಉಳಿದಿದೆ.

ರಷ್ಯಾ ಸ್ನೇಹಿತ, ಅಮೆರಿಕ ಶತ್ರು..!

ರಷ್ಯಾ ಸ್ನೇಹಿತ, ಅಮೆರಿಕ ಶತ್ರು..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ.

ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಕಾರಣಕ್ಕೆ ಯುರೋಪ್ ಹೊಸ ಗೆಳೆಯನ ಹುಟುಕಾಟದಲ್ಲಿ ತೊಡಗಿತ್ತು. ಹೊಸ ಗೆಳೆಯನಾಗಿ ಚೀನಾ ಇದೀಗ ಯುರೋಪ್‌ಗೆ ಹತ್ತಿರವಾಗುತ್ತಿದೆ. ಅತ್ತ ರಷ್ಯಾ ಸ್ನೇಹಿತನೂ ಆಗಿರುವ ಚೀನಾ ಮುಂದೆ ಯಾವ ನಿಲುವನ್ನು ತಳೆಯುತ್ತೆ ಎಂಬುದೇ ಕುತೂಹಲ ಕೆರಳಿಸಿದೆ.

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

‘ಅಮೆರಿಕ ಹೆಸರು ಹಾಳುಮಾಡಿದ ಟ್ರಂಪ್’

ಅಕ್ಟೋಬರ್‌ನಲ್ಲಿ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಒಬಾಮಾ, ಟ್ರಂಪ್ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಹೆಸರು ಕೆಡಲು ಟ್ರಂಪ್ ಕಾರಣ ಎಂದಿದ್ದರು. ಅಲ್ಲದೆ ಇದುವರೆಗೂ ಜಗತ್ತಿಗೆ ತೊಂದರೆ ಆದರೆ ವಾಷಿಂಗ್ಟನ್ ಕಡೆಗೆ ಮುಖ ಮಾಡಿ ನಿಲ್ಲುತ್ತಿದ್ರು. ಅವರಿಗೆ ಮಾಸ್ಕೋ ಬೇಕಿರಲಿಲ್ಲ. ಆದರೆ ಟ್ರಂಪ್ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಅಮೆರಿಕದ ಸ್ನೇಹಿತರು ಅತಂತ್ರರಾಗಿ ನಿಲ್ಲುವ ಸ್ಥಿತಿಯನ್ನು ಟ್ರಂಪ್ ಬೇಕಂತಲೇ ಸೃಷ್ಟಿಸಿದ್ದಾರೆ ಎಂದಿದ್ದರು.

ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!ಭಾರತಕ್ಕೆ ಬೈಡನ್ ಬಲ, ನಡುಗುತ್ತಿದೆ ಚೀನಿಯರ ಬುಡ..!

ವಿರೋಧಿಗಳಿಗೆ ನಾವು ಸೋಲಬೇಕಿದೆ..!

ವಿರೋಧಿಗಳಿಗೆ ನಾವು ಸೋಲಬೇಕಿದೆ..!

ಅಮೆರಿಕ ವಿರೋಧಿಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಅಮೆರಿಕದ ಹೆಸರು ಕೆಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಲಾಬಿ ಬಗ್ಗೆಯೂ ಇದೇ ಕಾರ್ಯಕ್ರಮದಲ್ಲಿ ಒಬಾಮಾ ಪ್ರಸ್ತಾಪಿಸಿದ್ದರು. ಅಮೆರಿಕ ಶಕ್ತಿ ಕುಗ್ಗಿಸಲು ಕುತಂತ್ರಗಳು ನಡೆಯುತ್ತಿವೆ, ಟ್ರಂಪ್ ಆಡಳಿತದಲ್ಲಿ ಇದಕ್ಕೆ ತಕ್ಕಂತಹ ಬೆಳವಣಿಗೆ ನಡೆದಿದೆ. ಇದು ಮುಂದುವರಿದರೆ ಭವಿಷ್ಯದಲ್ಲಿ ಅಮೆರಿಕ ದೊಡ್ಡ ಅಪಾಯ ಎದುರಿಸಲಿದೆ ಎಂದು ಒಬಾಮಾ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಅಲ್ಲದೆ ಟ್ರಂಪ್ ಮಾಡಿಕೊಂಡಿರುವ ಎಡವಟ್ಟುಗಳನ್ನೂ ಒಬಾಮಾ ತಿಳಿಸಿದ್ದರು.

‘ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?‘ಕೊರೊನಾ' ನಡುವೆ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ..?

ಚೀನಾ ಬಂದರೆ ಕಷ್ಟ ಕಷ್ಟ..!

ಚೀನಾ ಬಂದರೆ ಕಷ್ಟ ಕಷ್ಟ..!

ಒಂದು ಕಡೆ ಒಬಾಮಾ ಆರೋಪ, ಮತ್ತೊಂದು ಕಡೆ ಯುರೋಪ್ ನಡೆ ಗಮನಿಸಿದರೆ ಟ್ರಂಪ್ ವರ್ತನೆ ಅಮೆರಿಕದ ಅಂತಾರಾಷ್ಟ್ರೀಯ ಸಂಬಂಧ ಹಾಳು ಮಾಡಿರುವುದು ಪಕ್ಕಾ. ಪರಿಸ್ಥಿತಿ ಹೀಗಿರುವಾಗ ಚೀನಾ ತನ್ನ ವಿರೋಧಿಗಳನ್ನ ಬಗ್ಗುಬಡಿಯಲು ಯುರೋಪ್‌ಗೆ ಹತ್ತಿರವಾಗುತ್ತಿರಬಹುದು. ಪ್ರಮುಖವಾಗಿ ಭಾರತ ಮತ್ತು ಯುರೋಪ್ ಸ್ನೇಹ ಗಟ್ಟಿಯಾಗಿದೆ. ಆದರೆ ಚೀನಾ ಇದೀಗ ಯುರೋಪ್‌ಗೆ ಹತ್ತಿರವಾಗುತ್ತಿರುವುದು ಆತಂಕ ಮೂಡಿಸಿದೆ. ಅದರಲ್ಲೂ ಅಮೆರಿಕ ತನ್ನ ಅತ್ಯಾಪ್ತ ಗೆಳೆಯನನ್ನು ಕಳೆದುಕೊಳ್ಳುವ ದುಖಃದಲ್ಲಿದ್ದಾನೆ. ಸದ್ಯದ ಪರಿಸ್ಥಿತಿಯಲ್ಲಿ ಯುರೋಪ್‌ಗೆ ಚೀನಾ ಸ್ನೇಹ ಬೇಕಾಗಿದ್ದು, ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲವೂ ಬದಲಾಗುವ ಸಾಧ್ಯತೆಯೂ ದಟ್ಟವಾಗಿದೆ.

English summary
After the Brexit deal with Britain, now European union thinking to sign about big trade deal with china.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X