ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್‌ವೇಸ್ ಷೇರು ಮಾರಾಟ: ಖರೀದಿಗೆ ಭಾರತೀಯರ ನಿರಾಸಕ್ತಿ

|
Google Oneindia Kannada News

ನವದೆಹಲಿ, ಮೇ 11: ಸಾಲ ತೀರಿಸಲಾಗದೆ ದಿವಾಳಿಯಾಗಿರುವ ಜೆಟ್ ಏರ್‌ವೇಸ್ ವಿಮಾನಯಾನ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಲು ಯಾವ ಕಂಪೆನಿಗಳೂ ಮುಂದೆ ಬರುತ್ತಿಲ್ಲ.

ಜೆಟ್ ಏರ್‌ವೇಸ್‌ನಲ್ಲಿ ಶೇ 24ರಷ್ಟು ಷೇರುಗಳನ್ನು ಹೊಂದಿರುವ ಸೌದಿ ಮೂಲದ ಇತಿಹಾದ್ ಏರ್‌ವೇಸ್, ಬಿಡ್ಡಿಂಗ್ ಅವಧಿಯಲ್ಲಿ ಇದುವರೆಗೂ ಹೆಚ್ಚುವರಿ ಷೇರುಗಳ ಖರೀದಿಗೆ ಪಾಲ್ಗೊಂಡಿರುವ ಏಕೈಕ ಬಿಡ್ಡರ್ ಆಗಿದೆ. ಜೆಟ್ ಏರ್‌ವೇಸ್‌ನ ಶೇ 75ರಷ್ಟು ಷೇರುಗಳನ್ನು ಸಾಲದಾರ ಬ್ಯಾಂಕುಗಳು ಮಾರಾಟಕ್ಕೆ ಇರಿಸಿವೆ.

ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್ ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್

ಸಾಲದಾರರ ಪರವಾಗಿ ಬಿಡ್ಸ್ ಆಹ್ವಾನ ಮಾಡಿದ್ದ ಎಸ್‌ಬಿಐ ನೀಡಿದ್ದ ಅಂತಿಮ ಗಡುವಿನ ಕೊನೆಯ ಕ್ಷಣದಲ್ಲಿ ಇತಿಹಾದ್ ಬಿಡ್ ಸಲ್ಲಿಸಿದೆ. ಇದಕ್ಕೂ ಮುನ್ನ ಆಸಕ್ತಿ ವ್ಯಕ್ತಪಡಿಸುವಿಕೆ ಪ್ರಕ್ರಿಯೆ (ಇಒಐ) ಮೂಲಕ ಟಿಪಿಜಿ ಕ್ಯಾಪಿಟಲ್, ಇಂಡಿಗೋ ಪಾರ್ಟ್‌ನರ್ಸ್ ಮತ್ತು ಎನ್‌ಐಐಎಫ್‌ಗಳನ್ನು ಆಯ್ಕೆ ಮಾಡಿ ನಾಲ್ಕು ಕಂಪೆನಿಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

etihad airways pjsc lone stake bidder of Jet airways sbi lenders

ಈಗ ಬಿಡ್ ಸಲ್ಲಿಸಿರುವ ಏಕೈಕ ಸಂಸ್ಥೆ ಇತಿಹಾದ್, ಷೇರು ಖರೀದಿಸಲು ಸಾಲಮನ್ನಾದ ಕಡ್ಡಾಯ ಕ್ರಮದ ಜತೆಗೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ಬೆಳವಣಿಗೆಗಳನ್ನು ಇತಿಹಾದ್ ಖಚಿತಪಡಿಸಿದ್ದು, ಜೆಟ್ ಏರ್‌ವೇಸ್‌ನ ಅಲ್ಪ ಪ್ರಮಾಣದ ಷೇರುಗಳ ಮೇಲೆ ಮರುಹೂಡಿಕೆ ಮಾಡಲು ಷರತ್ತುಬದ್ಧ ಆಸಕ್ತಿ ವ್ಯಕ್ತಪಡಿಸಿರುವುದಾಗಿ ಹೇಳಿದೆ.

ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ

ಭಾರತದ ಪ್ರಮುಖ ಬಂಡವಾಳ ಹೂಡಿಕೆದಾರರೊಂದಿಗೆ ಇತಿಹಾದ್ ಕಳೆದ 15 ತಿಂಗಳಿನಿಂದ ಮಾತುಕತೆ ನಡೆಸುತ್ತಿದ್ದು, ಜೆಟ್ ಏರ್‌ವೇಸ್‌ಅನ್ನು ಉಳಿಸಲು ಸತತ ಪ್ರಯತ್ನ ಮಾಡುತ್ತಿದೆ. ಇತಿಹಾದ್ ಇದರ ಏಕೈಕ ಹೂಡಿಕೆದಾರನಾಗಲು ಸಾಧ್ಯವಿಲ್ಲ. ಇತರೆ ಅಗತ್ಯಗಳಿಗಾಗಿ ಹೆಚ್ಚುವರಿ ಸೂಕ್ತ ಹೂಡಿಕೆದಾರರು ಬೇಕಿದ್ದಾರೆ ಎಂದು ಇತಿಹಾದ್ ಏರ್‌ಲೈನ್ಸ್ ಸಂಸ್ಥೆ ತಿಳಿಸಿದೆ.

ದಿನದಲ್ಲಿ 650 ವಿಮಾನಗಳ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ಈಗ ಶೂನ್ಯದಿನದಲ್ಲಿ 650 ವಿಮಾನಗಳ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ಈಗ ಶೂನ್ಯ

ಇದರಿಂದ ಇತಿಹಾದ್, ಜೆಟ್ ಏರ್‌ವೇಸ್‌ನ ಗರಿಷ್ಠ ಶೇ 49ರಷ್ಟು ಷೇರುಗಳೊಂದಿಗೆ ಅಲ್ಪ ಹೂಡಿಕೆಯ ಪಾಲುದಾರನಾಗಿ ಉಳಿಯಲಿದ್ದರೆ, ಅದರ ಬಹುಪಾಲು ಹೂಡಿಕೆಯನ್ನು ಭಾರತೀಯರೇ ಮಾಡಬೇಕಿರುತ್ತದೆ.

English summary
Etihad Airways submitted a binding bid to take additional minority stake in Jet Airways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X