ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಕೋಟ್ಯಂತರ ಮೊತ್ತ ನೆರವು ನೀಡಿದ ಕ್ರಿಪ್ಟೋ ಕರೆನ್ಸಿ ಸ್ಥಾಪಕ

|
Google Oneindia Kannada News

ನವದೆಹಲಿ, ಮೇ 13: ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಎದುರಾಳಿ ಇಥೆರಿಯಂ ಸ್ಥಾಪಕ ವಿಟಾಲಿಕ್ ಬುಟೆರಿನ್ ಅವರು ಭಾರತಕ್ಕೆ ನೆರವಾಗಿದ್ದಾರೆ. ಸರಿ ಸುಮಾರು 1.14 ಬಿಲಿಯನ್ ಡಾಲರ್ ಮೌಲ್ಯದ ಮೀಮ್ ಕಾಯಿನ್ ದೇಣಿಗೆಯಾಗಿ ನೀಡಿದ್ದಾರೆ. ಇದರ ಮೌಲ್ಯ ಸುಮಾರು 8,800 ಕೋಟಿ ರು ಗೂ ಅಧಿಕ ಎನ್ನಬಹುದು.

ಇಲಾನ್ ಮಾಸ್ಕ್ ಬೆಂಬಲಿತ ಡೋಜ್ ಕಾಯಿನ್ ವಿರುದ್ಧವಾಗಿ ವಿನ್ಯಾಸಗೊಂಡ ಶಿಬಾ ಇನು (ಸಾಕು ನಾಯಿಯ ಥೀಮ್ ) ಮೀಮ್ ಕಾಯಿನ್ ನಲ್ಲಿ ಹೆಚ್ಚಿನ ಮೊತ್ತ ಇದೆ. 27 ವರ್ಷ ವಯಸ್ಸಿನ ಇಥೆರಿಯಂ ಕಾಯಿನ್ ಸ್ಥಾಪಕ ಬುಟೆರಿನ್ ಅವರು 500 ಇಥೆರಿಯಂ ಕಾಯಿನ್ ಹಾಗೂ 50 ಟ್ರಿಲಿಯನ್ ಶಿಬಾ ಇನು ಸೇರಿಸಿ 1.12 ಬಿಲಿಯನ್ ಡಾಲರ್ ಮೊತ್ತವನ್ನು ಕೋವಿಡ್ ಕ್ರಿಪ್ಟೋ ಪರಿಹಾರ ನಿಧಿಗೆ ನೀಡಿದ್ದಾರೆ. ಸಂದೀಪ್ ನೈಲ್ವಾಲ್ ರೂಪಿಸಿರುವ ಈ ನಿಧಿ, ಕ್ರಿಪ್ಟೋ ಕರೆನ್ಸಿ ಮೂಲಕ ದೇಣಿಗೆ ನೀಡುವವರಿಗೆ ಇರುವ ಅಧಿಕೃತ ನಿಧಿ ಎನಿಸಿಕೊಂಡಿದೆ.

Ethereum founder Vitalik Buterin donates $1.14 billion meme coins to Covid-hit India

ಆದರೆ, ಭಾರತದಲ್ಲಿ ಡಿಜಿಟಲ್ ದುಡ್ಡು ಕ್ರಿಪ್ಟೋ ಕರೆನ್ಸಿಗೆ ಇನ್ನೂ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಬ್ಯಾಕಿಂಗ್ ವ್ಯವಸ್ಥೆ ಇಲ್ಲದೆ ಈ ರೀತಿ ಭಾರಿ ಮೊತ್ತವನ್ನು ವಿನಿಮಯ ಮಾಡುವುದು ಕಷ್ಟಕರ. ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಬ್ರೆಟ್ ಲೀ, ಉದ್ಯಮಿ ಬಾಲಾಜಿ ಶ್ರೀನಿವಾಸನ್ ಅವರು ಕೂಡಾ ಕ್ರಿಪ್ಟೋ ಕರೆನ್ಸಿ ಮೂಲಕ ದೇಣಿಗೆ ನೀಡಿದ್ದಾರೆ.

ಮೇ 13 ರಂದು ಬಿಟ್ ಕಾಯಿನ್ ಮೌಲ್ಯ ಕುಸಿದಿದ್ದು $48,223.58ನಷ್ಟಿದೆ. ಕಳೆದ 24 ಗಂಟೆಗಳಲ್ಲಿ 10.82 ರಷ್ಟು ಮೌಲ್ಯ ಕಳೆದುಕೊಂಡಿದೆ. ಆದರೆ, ಇಥೆರಿಯಂ 9.61ರಷ್ಟು ಮೌಲ್ಯ ಕಳೆದುಕೊಂಡರೂ ಈ ವಾರದಲ್ಲಿ 4.26% ಏರಿಕೆ ಕಂದು 3.660 ಡಾಲರ್ ನಷ್ಟಿದೆ. ಇನ್ನು ಶಿಬಾ ಇನು(SHIB) 7,692,917,606ಡಾಲರ್ ಮೌಲ್ಯ ಹೊಂದಿದ್ದು, 1.86 ರಷ್ಟು ಕುಸಿತ ಕಂಡಿದೆ.

English summary
The billionaire founder of Ethereum, Vitalik Buterin, donated cryptocurrency worth over $1 billion to India's Covid-19 relief fund on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X