ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಗಿಲಿಗೆ ದಿನಸಿ; ಫ್ಲಿಪ್‌ ಕಾರ್ಟ್, ವಿಶಾಲ್ ಮಾರ್ಟ್‌ ಒಪ್ಪಂದ

|
Google Oneindia Kannada News

ಬೆಂಗಳೂರು, ಮೇ 19 : ಜನರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಫ್ಲಿಪ್‌ ಕಾರ್ಟ್ ಮತ್ತು ವಿಶಾಲ್ ಮೆಗಾ ಮಾರ್ಟ್ ಒಪ್ಪಂದ ಮಾಡಿಕೊಂಡಿವೆ. ಭಾರತದ 26 ನಗರದಲ್ಲಿ ಜಂಟಿಯಾಗಿ ವಸ್ತುಗಳನ್ನು ಸರಬರಾಜು ಮಾಡಲಿವೆ.

Recommended Video

ಕರ್ನಾಟಕದಲ್ಲಿ ಒಂದೇ ದಿನಕ್ಕೆ 149 ಕೊರೊನಾ‌ ಕೇಸ್!! | Suresh Kumar

ಮಂಗಳವಾರ ಫ್ಲಿಪ್ ಕಾರ್ಟ್ ವಿಶಾಲ್ ಮೆಗಾ ಮಾರ್ಟ್ ಜೊತೆಗಿನ ಒಪ್ಪಂದದ ಬಗ್ಗೆ ಘೋಷಣೆ ಮಾಡಿದೆ. ವಿಶಾಲ್ ಮಾರ್ಟ್ ಅಗತ್ಯ ವಸ್ತುಗಳ ಆರ್ಡರ್ ತೆಗೆದುಕೊಳ್ಳಲಿದೆ. ಫ್ಲಿಪ್ ಕಾರ್ಟ್ ಅದನ್ನು ಜನರ ಮನೆ ಬಾಗಿಲಿಗೆ ಪೂರೈಕೆ ಮಾಡುವ ವ್ಯವಸ್ಥೆ ನೋಡಿಕೊಳ್ಳಲಿದೆ.

ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ ವಲಸಿಗರಿಗೆ ಎರಡು ತಿಂಗಳ ಕಾಲ ಉಚಿತ ಆಹಾರ ಧಾನ್ಯ

ವಿಶಾಲ್ ಮೆಗಾ ಮಾರ್ಟ್ ದೇಶದಲ್ಲಿ 365ಕ್ಕೂ ಅಧಿಕ ಸ್ಟೋರ್‌ಗಳನ್ನು ಹೊಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳ ಅನ್ವಯ ವಿವಿಧ ವಸ್ತುಗಳು ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ... ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ...

Essentials Home Delivery Flipkart Partnership With Vishal Mega Mart

ಫ್ಲಿಪ್ ಕಾರ್ಟ್ ಅಪ್ಲಿಕೇಶನ್ ಮೂಲಕ ಜನರು ಬೇಡಿಕೆ ಸಲ್ಲಿಸಿದಾಗ ಹತ್ತಿರದ ವಿಶಾಲ್‌ ಮಾರ್ಟ್‌ನಿಂದ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ಸುರಕ್ಷಿತವಾಗಿ ತಲುಪಿಸಲಾಗುತ್ತದೆ. ಇದರಿಂದ ಜನರು ಮನೆಯಲ್ಲಿಯೇ ಶಾಪಿಂಗ್ ಮಾಡಬಹುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಲಿದೆ.

ಮಾಸ್ಕ್‌ ಹಾಕದಿದ್ದರೆ, ದಿನಸಿ, ಪೆಟ್ರೋಲ್ ನೀಡುವುದಿಲ್ಲ! ಮಾಸ್ಕ್‌ ಹಾಕದಿದ್ದರೆ, ದಿನಸಿ, ಪೆಟ್ರೋಲ್ ನೀಡುವುದಿಲ್ಲ!

ಫ್ಲಿಪ್ ಕಾರ್ಟ್‌ನಲ್ಲಿ ವಿಶಾಲ್‌ ಮಾರ್ಟ್‌ನ ಸ್ಟೋರ್ ಲಭ್ಯವಾಗುವಂತೆ ಬದಲಾವಣೆ ಮಾಡಲಾಗಿದೆ. ಜನರು ಗೋಧಿ, ಅಕ್ಕಿ, ಎಣ್ಣೆ, ಸೋಪು, ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಬೇಡಿಕೆ ಸಲ್ಲಿಸಬಹುದಾಗಿದೆ. ವಾಣಿಜ್ಯ ವಲಯದಲ್ಲಿ ಈ ಒಪ್ಪಂದ ಹೊಸ ಲೆಕ್ಕಾಚಾರ ಹುಟ್ಟು ಹಾಕಿದೆ.

ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಪಾಟ್ನಾ, ಗೌಹಾತಿ, ಜೈಪುರ, ವಾರಣಾಸಿ, ಲಕ್ನೋ, ಕಾನ್ಪುರ, ನೋಯ್ಡಾ, ಪಣಜಿ ಸೇರಿದಂತೆ ಭಾರತದ 26 ನಗರದಲ್ಲಿ ಫ್ಲಿಪ್ ಕಾರ್ಟ್ ಮತ್ತು ವಿಶಾಲ್ ಮಾರ್ಟ್‌ನ ಜಂಟಿ ಸೇವೆ ಲಭ್ಯವಿದೆ. ಇನ್ನೂ 240ಕ್ಕೂ ಹೆಚ್ಚು ನಗರದಲ್ಲಿ ಸೇವೆ ವಿಸ್ತರಣೆ ಮಾಡಲು ಪ್ರಯತ್ನ ನಡೆದಿದೆ.

English summary
Flipkart announced partnership with Vishal mega mart. Essentials items will be delivered to home in the 26 city's of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X