ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ

|
Google Oneindia Kannada News

ನವದೆಹಲಿ, ಡಿಸೆಂಬರ್ 20: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ನಿಯಮಗಳನ್ನು ಮತ್ತೊಮ್ಮೆ ಬದಲಾವಣೆ ಮಾಡಲಾಗಿದೆ.

ಪ್ರೊವಿಡೆಂಟ್ ಫಂಡ್ ಹೊಸ ನಿಯಮದಡಿ 60 ವರ್ಷಕ್ಕಿಂತ ಮೊದಲು ಶೇಕಡಾ 100ರಷ್ಟು ಪಿಎಫ್ ಹಣವನ್ನು ಡ್ರಾ ಮಾಡುವಂತಿಲ್ಲ. ನಿವೃತ್ತಿಗೂ ಮುನ್ನ ನೀವು ನಿಮ್ಮ ಪಿಎಫ್ ನ ಎಲ್ಲ ಹಣವನ್ನು ಡ್ರಾ ಮಾಡಲು ಸಾಧ್ಯವಿಲ್ಲ.

ಯಾವುದೇ ವ್ಯಕ್ತಿ 60 ವರ್ಷಕ್ಕಿಂತ ಮೊದಲೇ ಕೆಲಸ ಬಿಟ್ಟರೂ ಆತ ಶೇಕಡಾ 75ರಷ್ಟು ಪಿಎಫ್ ಹಣವನ್ನು ಮಾತ್ರ ಹಿಂಪಡೆಯಬಹುದಾಗಿದೆ.

ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಹೇಗೆ?ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಹೇಗೆ?

ಸದ್ಯ ಪಿಎಫ್ ನ ಶೇಕಡಾ 100ರಷ್ಟು ಹಣವನ್ನು ನೌಕರ ಪಡೆಯಬಹುದಾಗಿತ್ತು. ಭವಿಷ್ಯ ನಿಧಿ ಖಾತೆ (ಪಿಎಫ್)ಯಿಂದ ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ನಿರ್ಧರಿಸಿದೆ.

ಇಪಿಎಫ್ಒ ಎಲ್ಲ ನೌಕರರ ಪಿಎಫ್ ನಿಧಿಯನ್ನು ನೋಡಿಕೊಳ್ಳುತ್ತದೆ. ಇದ್ರಲ್ಲಿ 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಉದ್ಯೋಗಿಗಳು ತಮ್ಮ ಖಾತೆಯಲ್ಲಿನ ಬಾಕಿ ಶೇ. 25 ಹಣವನ್ನು ಎರಡು ತಿಂಗಳ ನಿರುದ್ಯೋಗದ ನಂತರ ಪಡೆಯಬಹುದಾಗಿದೆ ಅಥವಾ ಸಂಪೂರ್ಣ ಹಣವನ್ನು ಪಡೆದು ಖಾತೆ ಮುಚ್ಚಲು ಕೂಡ ಅವಕಾಶ ನೀಡಲು ಇಪಿಎಫ್​ಒ ಮುಂದಾಗಿದೆ.

ಪಿಎಫ್ ಲೆಕ್ಕಾಚಾರ ಹೇಗೆ?

ಪಿಎಫ್ ಲೆಕ್ಕಾಚಾರ ಹೇಗೆ?

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ.

ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

ನಿರುದ್ಯೋಗಿಗಳ ವಿಥ್ ಡ್ರಾ ನಿಯಮ

ನಿರುದ್ಯೋಗಿಗಳ ವಿಥ್ ಡ್ರಾ ನಿಯಮ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ತನ್ನ ನಿಯಮಗಳನ್ನು ಬದಲಾಯಿಸಿದ್ದು, ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಕೊಂಚ ನೆಮ್ಮದಿ ತಂದಿದೆ.

ಒಂದು ತಿಂಗಳ ನಿರುದ್ಯೋಗದ ಬಳಿಕ ಬೇರೆ ಕಡೆ ಕೆಲಸ ಸಿಕ್ಕಲ್ಲಿ ಸದಸ್ಯರು ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ನೀಡಬಹುದಾಗಿದೆ. ಮಾಸಿಕ ಪಿಎಫ್ ಅದರಲ್ಲಿಯೇ ಜಮೆಯಾಗಲಿದೆ. ಸದ್ಯದ ನಿಯಮದಂತೆ ಎರಡು ತಿಂಗಳ ನಿರುದ್ಯೋಗದ ಬಳಿಕ ಮಾತ್ರ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿನ ಹಣ ಪಡೆಯಲು ಅವಕಾಶವಿದೆ

ಇಪಿಎಫ್ ವರ್ಗಾವಣೆ ಈಗ ಸುಲಭ

ಇಪಿಎಫ್ ವರ್ಗಾವಣೆ ಈಗ ಸುಲಭ

ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಅದರೆ, ಇಪಿಎಫ್ ವರ್ಗಾವಣೆ ಹಾಗೂ ವಿಥ್ ಡ್ರಾ ಮಾಡಲು ಕೆಲ ಸಮಯ ಹಿಡಿಯುತ್ತದೆ. UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನವನ್ನೂ ನೀಡಲಾಗಿದೆ.

ಉದ್ಯೋಗದಾತರರ ಅಪ್ಪಣೆ ಬೇಕಿಲ್ಲ

ಉದ್ಯೋಗದಾತರರ ಅಪ್ಪಣೆ ಬೇಕಿಲ್ಲ

ಉದ್ಯೋಗದಾತರ(ಎಂಪ್ಲಾಯರ್) ದೃಢೀಕರಣ ಪಡೆಯದೇ ವಂತಿಗೆದಾರರು( ಎಂಪ್ಲಾಯ್) ತಮ್ಮ ಪಿಂಚಣಿ ಮೊತ್ತವನ್ನು ನಿಗದಿಪಡಿಸಬಹುದಾಗಿದೆ. 1995ರ ಪಿಂಚಣಿ ಯೋಜನೆ ಪ್ರಕಾರ, ವಂತಿಗೆದಾರರು ಪಿಂಚಣಿ ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರ ದೃಢೀಕರಣ ಪಡೆದು ಸಲ್ಲಿಸಬೇಕಿತ್ತು. ಆದರೆ ಈಗ ಇದು ಮತ್ತಷ್ಟು ಸುಲಭವಾಗಲಿದೆ

English summary
According to the new rule, a member of EPF can now withdraw up to three-quarters of his/her account. This will be a non-refundable advance, which means that a member can withdraw money without closing his account and will not have to refund the money withdrawn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X