ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಪಿಎಫ್‌ಒ ಅಚ್ಚರಿಯ ನಿರ್ಧಾರ: ಪಿಎಫ್ ಬಡ್ಡಿದರದಲ್ಲಿ ಬದಲಾವಣೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಆದಾಯ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2019-20ರ ಔಪಚಾರಿಕ ವಲಯದ ಕಾರ್ಮಿಕರಿಗೆ ಬಡ್ಡಿದರದಲ್ಲಿ ದಿಗ್ಬ್ರಮೆಗೊಳಿಸುವ ರೀತಿಯಲ್ಲಿ ಬುಧವಾರ ನಿರ್ಧಾರವನ್ನು ಪ್ರಕಟಿಸಿದೆ.

ಇಪಿಎಫ್‌ಒ ತನ್ನ ಚಂದಾದಾರರಿಗೆ 2019-20ನೇ ಸಾಲಿನಲ್ಲಿ ಶೇಕಡಾ 8.5 ರಷ್ಟು ಬಡ್ಡಿದರವನ್ನು ನೀಡಲಿದೆ. ಮಾರ್ಚ್‌ನಲ್ಲಿ ಅದು ನಿರ್ಧರಿಸಿದ ಶೇಕಡಾ 8.5 ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?

"ಉಳಿದ ಶೇಕಡಾ 0.35ರಷ್ಟು ಬಡ್ಡಿಯನ್ನು ಇಪಿಎಫ್‌ಒನ ಈಕ್ವಿಟಿ ಹೂಡಿಕೆಗಳ ವಿಮೋಚನೆಯ ನಂತರ ಡಿಸೆಂಬರ್‌ನಲ್ಲಿ ಸಲ್ಲುತ್ತದೆ" ಎಂದು ಇಪಿಎಫ್‌ಒನ ಕೇಂದ್ರ ಮಂಡಳಿಯ ಟ್ರಸ್ಟಿಗಳ (ಸಿಬಿಟಿ) ಸದಸ್ಯ ಹೇಳಿದ್ದಾರೆ.

EPFO to credit lower interest rate of 8.5% to subscribers for FY20

''ಇಪಿಎಫ್‌ಒ ತನ್ನ ಚಂದಾದಾರರಿಗೆ ಶೇಕಡಾ 8.5 ರಷ್ಟು ಬಡ್ಡಿದರವನ್ನು ಒಂದೇ ಸಮಯದಲ್ಲಿ ನೀಡಿದರೆ 2019-20ರಲ್ಲಿ 2,500 ಕೋಟಿ ರೂ.ಗಳ ಕೊರತೆಯನ್ನು ಎದುರಿಸುತ್ತಿದೆ'' ಎಂದು ಹೆಸರು ಹೇಳಲಿಚ್ಚಿಸದ ಸದಸ್ಯರೊಬ್ಬರು ಹೇಳಿದ್ದಾರೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಇಪಿಎಫ್‌ಒ ಕೇಂದ್ರ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಶೇಕಡಾ 8.5 ರ ಬಡ್ಡಿದರವು ಈಗಾಗಲೇ ಏಳು ವರ್ಷಗಳ ಕನಿಷ್ಠವಾಗಿತ್ತು ಮತ್ತು ಹಿಂದಿನ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ತನ್ನ ಚಂದಾದಾರರಿಗೆ ಶೇಕಡಾ 8.65 ರಷ್ಟು ಆದಾಯವನ್ನು ಸಲ್ಲುತ್ತದೆ.

ಒಂದು ವೇಳೆ ಈ ವರ್ಷದ ಡಿಸೆಂಬರ್‌ನಲ್ಲಿ ಉಳಿದ ಶೇ. 0.35ರಷ್ಟು ಬಡ್ಡಿದರವನ್ನು ಇಪಿಎಫ್‌ಒಗೆ ನೀಡಲು ಸಾಧ್ಯವಾಗದಿದ್ದರೆ, ಇದು 1977-78ರ ನಂತರ ನಿಧಿಯ ಚಂದಾದಾರರಿಗೆ ದೊರೆಯುವ ಅತ್ಯಂತ ಕಡಿಮೆ ಆದಾಯವಾಗಿರುತ್ತದೆ. ಇಪಿಎಫ್‌ಒ 1977-78ರಲ್ಲಿ ಶೇಕಡಾ 8 ರಷ್ಟು ಬಡ್ಡಿದರವನ್ನು ನೀಡಿತ್ತು.

English summary
EPFO decided to pay 8.5% interest for FY20 in two instalments, cites Covid impact. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X