ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಪಿಎಫ್: 2020ಕ್ಕೆ ಘೋಷಿಸಲಾದ 8.5% ಬಡ್ಡಿ ದರ ಕಡಿತವಾಗುವ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂನ್ 26: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹಣಕಾಸು ವರ್ಷ 2020 ಕ್ಕೆ ಘೋಷಿಸಲಾದ 8.5% ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆ ಇದೆ.

Recommended Video

ನಾನು ಇಂದಿರಾಗಾಂಧಿ ಮೊಮ್ಮೊಗಳು ಯಾವ ಕ್ರಮ ಬೇಕಾದ್ರು ಕೈಗೊಳ್ಳಿ | Priyanka Gandhi | Oneindia Kannada

ಕೊರೊನಾವೈರಸ್‌ದಿಂದಾಗಿ ಇಪಿಎಫ್ಒ ಹೂಡಿಕೆಗಳ ಮೇಲಿನ ಆದಾಯ ಮತ್ತು ಹಣದ ಹರಿವಿನ ಪ್ರಮಾಣ ತಗ್ಗಿರುವುದರಿಂದ ಬಡ್ಡಿ ದರವನ್ನು ಕಡಿಮೆಗೊಳಿಸಬಹುದು. ಈ ಮೂಲಕ ಅದರ 60 ಮಿಲಿಯನ್ (ಆರು ಕೋಟಿ) ಚಂದಾದಾರರ ನಿವೃತ್ತಿ ಉಳಿತಾಯದ ಮೇಲಿನ ಪಾವತಿಯನ್ನು ಕಡಿಮೆ ಮಾಡುತ್ತದೆ.

EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?EPS ಯೋಜನೆಯಡಿ ಯಾರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ?

ಆರ್ಥಿಕ ವರ್ಷ 2020ರ ಗಳಿಕೆಯ ಆಧಾರದ ಮೇಲೆ ಬಡ್ಡಿದರವನ್ನು ಘೋಷಿಸಲಾಯಿತು, ಆದರೆ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಚಂದಾದಾರರಿಗೆ ಪಾವತಿಸಲಾಗುವುದು.

EPFO May Slash FY20s Interest Rate

ಘೋಷಿತ ಬಡ್ಡಿಯನ್ನು ಪಾವತಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ಇಪಿಎಫ್‌ಒದ ಹಣಕಾಸು, ಹೂಡಿಕೆ ಮತ್ತು ಲೆಕ್ಕಪರಿಶೋಧನಾ ಸಮಿತಿ (ಎಫ್‌ಐಎಸಿ) ಶೀಘ್ರದಲ್ಲೇ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ ಮೊದಲ ವಾರದಲ್ಲಿ ಘೋಷಿಸಲಾದ 8.5% ಬಡ್ಡಿದರವನ್ನು ಹಣಕಾಸು ಸಚಿವಾಲಯ ಇನ್ನೂ ಅನುಮೋದಿಸಿಲ್ಲ. ಹಣಕಾಸು ಸಚಿವಾಲಯವು ಅನುಮೋದಿಸಿದ ನಂತರವೇ ಕಾರ್ಮಿಕ ಸಚಿವಾಲಯವು ದರವನ್ನು ತಿಳಿಸಬಹುದು.

"ಕಳೆದ ವರ್ಷ ಘೋಷಿಸಿದ ಬಡ್ಡಿದರದ ಆಧಾರದ ಮೇಲೆ ಹಣವನ್ನು ವಿತರಿಸುವುದು ಇಪಿಎಫ್‌ಒಗೆ ಕಷ್ಟಕರವಾಗಿರುತ್ತದೆ. ಏಕೆಂದರೆ ಹಣದ ಹರಿವು ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ವಿತರಣೆಯ ಸಮಯದಲ್ಲಿ ಅದರ ಹಣವನ್ನು ದಿವಾಳಿಯಾಗುವುದು ಸುಲಭವಲ್ಲ" ಎಂದು ಚರ್ಚೆಯ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಇತ್ತಿಚೆಗಷ್ಟೇ ಕೇಂದ್ರ ಸರ್ಕಾರ ಕೋವಿಡ್ -19 ಬಿಕ್ಕಟ್ಟಿನ ಪರಿಣಾಮದ ಬಗ್ಗೆ ನೌಕರರು ಮತ್ತು ಉದ್ಯೋಗದಾತರಿಗೆ ಸಹಾಯ ಮಾಡಲು ಸರ್ಕಾರವು ಭವಿಷ್ಯ ನಿಧಿ ಸಂಬಂಧಿತ ಪರಿಹಾರ ಕ್ರಮಗಳನ್ನು ಮಾರ್ಚ್‌ನಿಂದ ಘೋಷಿಸಿದೆ. ಭವಿಷ್ಯ ನಿಧಿ ಕೊಡುಗೆಯನ್ನು ನೌಕರರು ಮತ್ತು ಉದ್ಯೋಗದಾತರಿಗೆ ಮೂರು ತಿಂಗಳವರೆಗೆ ಮೂಲ ವೇತನದ 12 ಪರ್ಸೆಂಟ್‌ರಿಂದ 10 ಪರ್ಸೆಂಟ್‌ಗೆ ಇಳಿಸಲಾಗಿದೆ.

English summary
The EPFO may reduce the 8.5% interest rate declared for FY20 due to declining return on investments and tepid cash flow, lowering the payout on retirement savings of its 60 million subscribers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X