ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರ ವರ್ಗಕ್ಕೆ ಬಂಪರ್ ಕೊಡುಗೆ: ಭವಿಷ್ಯನಿಧಿ ಬಡ್ಡಿದರ ಹೆಚ್ಚಳಕ್ಕೆ ಚಿಂತನೆ

|
Google Oneindia Kannada News

ನವದೆಹಲಿ, ಜನವರಿ 2: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಯು (ಇಪಿಎಫ್ಓ) ಬಡ್ಡಿದರವನ್ನು ಪ್ರಸ್ತುತದ ಶೇ 8.55ರ ಮಟ್ಟಕ್ಕಿಂತ ಹೆಚ್ಚಾಗುವ ಸಂಭವವಿದೆ ಎಂದು ವರದಿಯೊಂದು ತಿಳಿಸಿದೆ.

ಮುಂಬರುವ ಹಣಕಾಸು ವರ್ಷದಲ್ಲಿ ಬಡ್ಡಿದರ ಹೆಚ್ಚಳವಾಗುವ ಉತ್ತಮ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

4 ಬ್ಯಾಂಕುಗಳಿಗೆ 10 ಸಾವಿರ ಕೋಟಿ ತುಂಬಿದ ಕೇಂದ್ರ ಸರ್ಕಾರ 4 ಬ್ಯಾಂಕುಗಳಿಗೆ 10 ಸಾವಿರ ಕೋಟಿ ತುಂಬಿದ ಕೇಂದ್ರ ಸರ್ಕಾರ

ಒಂದು ವೇಳೆ ಬಡ್ಡಿದರದಲ್ಲಿ ಏರಿಕೆ ಮಾಡಲು ಸಾಧ್ಯವಾಗದೆ ಇದ್ದರೂ, ಹಣದುಬ್ಬರದಲ್ಲಿ ತೀವ್ರ ಕುಸಿತ ಆದರೂ ಈಗಿರುವ ಬಡ್ಡಿದರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

EPFO may hike interest rate on employees provident fund FY 2019

ವಾರ್ಷಿಕ ಆಂತರಿಕ ಪರಾಮರ್ಶೆ ನಡೆಸಿರುವ ಇಪಿಎಫ್‌ಓ, ಬಡ್ಡಿದರ ಏರಿಕೆಯ ಬಗ್ಗೆ ಚಿಂತನೆ ನಡೆಸಿದ್ದು ಅದರ ಮಿತಿ ಮತ್ತು ಜಾರಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ ಇಂಧನ ದರ ಕುಸಿತ: ಈಗ 9 ತಿಂಗಳಲ್ಲೇ ಅತ್ಯಧಿಕ ಕಡಿಮೆ ಮೊತ್ತ

'2019ರ ಹಣಕಾಸು ವರ್ಷಕ್ಕೆ ಬಡ್ಡಿದರವನ್ನು ಶೇ 8.55ಕ್ಕಿಂತ ಹೆಚ್ಚಿಸುವ ಬಗ್ಗೆ ಪರಾಮರ್ಶಿಸಲಾಗುತ್ತಿದೆ. ಬಡ್ಡಿದರದ ಇಳಿಕೆ ಈ ಸಂದರ್ಭದಲ್ಲಿ ಮಾಡಲಾಗುವುದಿಲ್ಲ. ಅಂತಿಮ ಲೆಕ್ಕಾಚಾರ ಮತ್ತು ಲೆಕ್ಕಪರಿಶೋಧನೆ ಇನ್ನೂ ನಡೆಯುತ್ತಿದೆ ಇಪಿಎಫ್‌ಓ ಕೇಂದ್ರ ಟ್ರಸ್ಟಿ ಮಂಡಳಿಯ ಸದಸ್ಯ ಪ್ರಭಾಕರ ಬಾನಸುರೆ ತಿಳಿಸಿದ್ದಾರೆ.

ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?ಹೊಸ ಕೇಬಲ್ ನೀತಿ ಜಾರಿ, 100 ಚಾನೆಲ್ ಗೆ ಎಷ್ಟು ರೇಟಾಗುತ್ತೆ?

ಒಂದು ವೇಳೆ ಹಾಲಿ ಇರುವ ದರವನ್ನು ಬದಲಿಸದೆ ಇದ್ದರೂ ಮುಂದಿನ ಹಣಕಾಸು ವರ್ಷದಲ್ಲಿನ ಉಳಿತಾಯ ಯೋಜನೆಗಳಿಗೆ ಅದು ಕೊಡುಗೆಯಾಗಿಯೇ ಉಳಿಯಲಿದೆ.

ಇದು ಸಂಘಟಿತ ವಲಯದ 60 ಮಿಲಿಯನ್‌ಗೂ ಅಧಿಕ ಉದ್ಯೋಗಿಗಳಿಗೆ ಉತ್ಸಾಹ ತುಂಬಲಿದೆ. 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ವೇತನ ವರ್ಗಕ್ಕೆ ಕೊಡುಗೆಯಾಗಲಿದೆ.

English summary
The Employees' Provident Fund Organisation (EPFO) may raise interest rates from 8.55 percent from the Financial year 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X