ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EEPFO ನಾಳೆ ಮಹತ್ವದ ಸಭೆ: ಪಿಎಫ್ ಮೇಲಿನ ಬಡ್ಡಿ ದರ ನಿರ್ಧಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಬುಧವಾರ (ಸೆಪ್ಟೆಂಬರ್ 9) ರಂದು ಮಹತ್ವದ ಸಭೆ ನಡೆಸಲಿದೆ. ಈ ಸಭೆಯಲ್ಲಿ ಬಡ್ಡಿ ದರ ನಿಗದಿ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.

2019-20ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಶೇ. 8.5 ರಷ್ಟು ಬಡ್ಡಿಯನ್ನು ನಿಗದಿಪಡಿಸಲಾಗಿದೆ. ಆದರೆ ಇದುವರೆಗೂ ಈ ಕುರಿತು ಅಧಿಸೂಚನೆ ನೀಡಲಾಗಿಲ್ಲ. ಇಂತಹುದರಲ್ಲಿ ಈ ವಿಳಂಬದ ಕುರಿತು ಚರ್ಚೆ ನಡೆಸಲಾಗುವ ಸಾಧ್ಯತೆ ಇದೆ. ನಾಳೆ ನಡೆಯುವ ಸಭೆಯಲ್ಲಿ ಬಡ್ಡಿದರಗಳ ಘೋಷಣೆಯ ಮೇಲೆ ಅಂತಿಮ ತೀರ್ಮಾನದ ಸಾಧ್ಯತೆ ಇದೆ.

 ಪಿಎಫ್‌ ಖಾತೆಯಿಂದ ಆನ್‌ಲೈನ್ ಮೂಲಕ ಹಣ ಹಿಂಪಡೆಯಲು ಸುಲಭ ಮಾರ್ಗ ಪಿಎಫ್‌ ಖಾತೆಯಿಂದ ಆನ್‌ಲೈನ್ ಮೂಲಕ ಹಣ ಹಿಂಪಡೆಯಲು ಸುಲಭ ಮಾರ್ಗ

ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್‌ 5ರಂದು ನಡೆದ EPFOನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಸಭೆಯಲ್ಲಿ 2019-20ರ ಅವಧಿಗಾಗಿ EPF ಮೇಲಿನ ಬಡ್ಡಿ ದರವನ್ನು ಶೇ.8.50ರಷ್ಟು ಶಿಫಾರಸ್ಸು ಮಾಡಲಾಯಿತು. ಏಳು ವರ್ಷದಲ್ಲಿ ಅತಿ ಕಡಿಮೆ ಬಡ್ಡಿ ದರ ಇದಾಗಿದ್ದು ಶೇ.0.15 ರಷ್ಟು ಕಡಿಮೆಯಾಗಿದೆ.

EPFO Board Meeting Scheduled On Wednesday: PF Interest Rate Will Decide

ಆದರೆ ಸಿಬಿಟಿ ತೆಗೆದುಕೊಂಡ ಈ ನಿರ್ಣಯವನ್ನು ಕೇಂದ್ರ ಹಣಕಾಸು ಸಚಿವಾಲಯದ ಅನುಮತಿಗೆ ಕಳುಹಿಸಿದ್ದರೂ, ಇದುವರೆಗೆ ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿಲ್ಲ.

2019-20ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ಶೇ .8.5 ರಷ್ಟು ಬಡ್ಡಿದರವನ್ನು ಅಂಗೀಕರಿಸುವಲ್ಲಿ ವಿಳಂಬವಾಗುವ ವಿಷಯ ಬುಧವಾರ ನಿಗದಿಯಾಗಿರುವ ಇಪಿಎಫ್‌ಒ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ.

"ವಿಳಂಬವು ಇಪಿಎಫ್‌ಒ ಮೇಲೆ ಸಹ ಪರಿಣಾಮ ಬೀರುತ್ತಿದೆ. ಏಕೆಂದರೆ ಅದು ಮೇಲ್ವಿಚಾರಣೆ ಮತ್ತು ಇತರ ಇಪಿಎಫ್ ಹಿಂತೆಗೆದುಕೊಳ್ಳುವ ಪ್ರಕರಣಗಳನ್ನು ಶೇಕಡಾ 8.65 ರಷ್ಟು ಹೆಚ್ಚಿನ ದರದಲ್ಲಿ ಇತ್ಯರ್ಥಪಡಿಸುತ್ತಿದೆ'' ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ಇಪಿಎಫ್ ಬಡ್ಡಿದರವನ್ನು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಇಪಿಎಫ್‌ಒನ ಆರು ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಬಹುದು.

English summary
EPFO Meeting Scheduled on wednesday and The issue of delay in ratification of 8.5 Percent rate of interest for 2019-20 is likely to be raised on the meeting of epfo meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X