ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭಾವ್ಯ ಬ್ಯಾಂಕ್ ಮುಷ್ಕರ: ಇದೇ ವಾರಾಂತ್ಯದಿಂದ 5 ದಿನ ಬ್ಯಾಂಕ್ ರಜೆ

ಸಂಭಾವ್ಯ ಬ್ಯಾಂಕ್ ಮುಷ್ಕರ: ಇದೇ ವಾರಾಂತ್ಯದಿಂದ 5ದಿನ ಬ್ಯಾಂಕ್ ರಜೆ

|
Google Oneindia Kannada News

Recommended Video

ಡಿಸೆಂಬರ್ 21ರಿಂದ ಡಿಸೆಂಬರ್ 26ರವರೆಗೆ ಬ್ಯಾಂಕ್ ಗಳು ಬಂದ್ ಆಗು ಸಾಧ್ಯತೆ | Oneindia Kannada

ಮುಂಬೈ, ಡಿ 16: ವಿವಿಧ ಬ್ಯಾಂಕ್ ಯೂನಿಯನ್ ಗಳು ಬೇರೆ ಬೇರೆ ದಿನಾಂಕದಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಕ್ರಿಸ್ಮಸ್ ಸುತ್ತಮುತ್ತ ಒಟ್ಟು ಐದು ದಿನ ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಇದೇ ಶುಕ್ರವಾರ, ಡಿಸೆಂಬರ್ 21ರಿಂದ 26ರ ವರೆಗೆ, ಒಂದು ವೇಳೆ, ಬ್ಯಾಂಕ್ ನೌಕರರ ಒಕ್ಕೂಟದ ನಡುವೆ ನಡೆಯುವ ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ, ಸಾಲು ಸಾಲು ಆರುದಿನ (ಒಂದು ದಿನ ಹೊರತು ಪಡಿಸಿ) ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ. (ಬ್ಯಾಂಕ್ ಉದ್ಯೋಗಿ ಕದ್ದಿದ್ದು 84 ಲಕ್ಷ ರುಪಾಯಿ, ಎಲ್ಲವೂ ನಾಣ್ಯಗಳೇ)

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಶುಕ್ರವಾರ (ಡಿ 21) ಪ್ರತ್ಯೇಕವಾಗಿ ಮುಷ್ಕರಕ್ಕೆ ಕರೆನೀಡಿದೆ. ಇದಲ್ಲದೇ, UFBU (ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್) ಡಿಸೆಂಬರ್ 26ರಂದು ಬಂದ್ ಗೆ ಕರೆನೀಡಿದೆ.

Employees Union Strike, possibility of 5 days bank closing from Dec21

ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್ ವಿಲೀನ ವಿರೋಧಿಸಿ, 26ರಂದು ಬಂದ್ ಗೆ ಕರೆನೀಡಲಾಗಿದ್ದು, 21ರಂದು, ವೇತನ ತಾರತಮ್ಯ ಸೇರಿದಂತೆ, ವಿವಿಧ ಬೇಡಿಕೆಗಳನ್ನಿಟ್ಟು ಮುಷ್ಕರಕ್ಕೆ ಕರೆನೀಡಲಾಗಿದೆ.

ಹಾಗಾಗಿ, ಒಂದು ದಿನ ರಜೆ ಹಾಕಿದರೆ (ಡಿ 24) ಆರು ದಿನ ರಜೆಯ ಸವಿಯನ್ನು ನೌಕರರು ಅನುಭವಿಸಬಹುದಾಗಿದೆ. (ಒಂದು ದಿನದ ಮುಷ್ಕರಕ್ಕೆ ಕರೆನೀಡಿದ ಬ್ಯಾಂಕ್ ಯೂನಿಯನ್ ಒಕ್ಕೂಟ)

ಡಿ 21: ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಕರೆನೀಡಿರುವ ಮುಷ್ಕರ
ಡಿ 22: ನಾಲ್ಕನೇ ಶನಿವಾರ
ಡಿ 23: ಭಾನುವಾರ
ಡಿ 24: ವರ್ಕಿಂಗ್ ಡೇ
ಡಿ 25: ಕ್ರಿಸ್ಮಸ್ ರಜೆ
ಡಿ 26: UFBU ಕರೆನೀಡಿರುವ ಮುಷ್ಕರ

English summary
Various employees union called strike, possibility of 5 days bank closing from Dec 21 to Dec 26. This is including Christmas, fourth Saturday and Sunday holiday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X