ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಉದ್ಯೋಗಿಗಳಿಗೆ ಮುಂದಿನ ವರ್ಷ ವೇತನ ಹೆಚ್ಚಳ ಸಾಧ್ಯತೆ: ಕಾರಣವೇನು?

|
Google Oneindia Kannada News

ನವದೆಹಲಿ, ಜು.24: ಮುಂದಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಉದ್ಯೋಗಿಗಳು ದೊಡ್ಡ ವೇತನ ಹೆಚ್ಚಳವನ್ನು ಕಾಣುತ್ತಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೇಮಕಾತಿದಾರರು, ಸಂಸ್ಥೆಗಳು ಲಾಕ್‌ಡೌನ್‌ಗಳಿಂದ ಹೊರಬರುವ ನಿರೀಕ್ಷೆಯಿದೆ. ಅರ್ಜಿದಾರರ ಪೂರೈಕೆ ಬೇಡಿಕೆಯಲ್ಲಿ ಹಿಂದುಳಿದಿದೆ ಎಂದು ತಿಳಿಸಿದ್ದಾರೆ.

ಮೈಕೆಲ್ ಪೇಜ್ ಮತ್ತು ಅಯಾನ್ ಪಿಎಲ್‌ಸಿ ಪ್ರಕಾರ, ಏಪ್ರಿಲ್ 2022 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ವೇತನದ ಚೆಕ್‌ ಸುಮಾರು 8% ರಷ್ಟು ಏರಿಕೆಯಾಗಬಹುದು. ಅದು ಪ್ರಸಕ್ತ ವರ್ಷಕ್ಕೆ ಊಹಿಸಲಾದ 6% -8% ಸಮೀಕ್ಷೆಗಳಿಗಿಂತ ಹೆಚ್ಚಾಗಿದೆ.

ಶೇ.80 ರಷ್ಟು ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದ ಐಟಿ ದೈತ್ಯ ವಿಪ್ರೋ: ಸೆ. 1 ರಿಂದ ಜಾರಿಶೇ.80 ರಷ್ಟು ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದ ಐಟಿ ದೈತ್ಯ ವಿಪ್ರೋ: ಸೆ. 1 ರಿಂದ ಜಾರಿ

ಭಾರತವು ಐತಿಹಾಸಿಕವಾಗಿ ಯಾವಾಗಲೂ ಏಷ್ಯಾದ ಅತ್ಯಧಿಕ ವೇತನ ಹೆಚ್ಚಳವನ್ನು ವರದಿ ಮಾಡಿದೆ. ಕನಿಷ್ಠ ಮುಂದಿನ ಎರಡು ವರ್ಷಗಳವರೆಗೆ ಹಾಗೆ ವೇತನ ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ದಶಕದ ಹಿಂದಿನ ಎರಡು-ಅಂಕಿಯ ಹಣದುಬ್ಬರ ಕಡಿಮೆಯಾದ ನಂತರ ವೇತನ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಪ್ರಮಾಣವು ಕ್ಷೀಣಿಸುತ್ತಿದೆ.

 Employees In India May See Bigger Pay Rises Next Fiscal Year, Why?

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಗ್ರಾಹಕರ ಬೆಲೆಗಳು ಮತ್ತೆ ಏರಿಕೆಯಾಗಿವೆ, ಆದರೆ ಮುಖ್ಯವಾಗಿ ಆಗಬೇಕಿದ್ದ ವೇತನ ಹೆಚ್ಚಳವಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಈ ಮುನ್ಸೂಚನೆಯು ಸಂಘಟಿತ ಕಾರ್ಮಿಕ ವಲಯದ ಮೇಲೆ ಕೇಂದ್ರೀಕೃತವಾಗಿವೆ. ಏಕೆಂದರೆ ಇಲ್ಲಿ ಉದ್ಯೋಗಿಗಳ ಸಂಖ್ಯೆ 20% ಕ್ಕಿಂತ ಕಡಿಮೆ ಇದೆ. ಇನ್ನೂ ಈ ಸರ್ವೆಯೂ ಅಸಂಘಟಿತ ಕಾರ್ಮಿಕರನ್ನು ಸಮೀಕ್ಷೆಯ ವೇಳೆ ಸೇರಿಸಿಲ್ಲ ಎಂದು ಹೇಳಲಾಗಿದೆ.

''ಸಂಘಟಿತ ವಲಯಕ್ಕೆ ಅರ್ಹ ಅರ್ಜಿದಾರರ ಕಡಿಮೆ ಲಭ್ಯತೆಯು ಸಂಬಳವನ್ನು ಹೆಚ್ಚಿಸುತ್ತದೆ,'' ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಮಾನವ ಬಂಡವಾಳ ಪರಿಹಾರಗಳ ಮುಖ್ಯ ವಾಣಿಜ್ಯ ಅಧಿಕಾರಿ ರೂಪಾಂಕ್ ಚೌಧರಿ ಹೇಳಿದ್ದಾರೆ.

16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್

"ಭಾರತದ ಚೇತನ ಹೆಚ್ಚಳ ಸಂಖ್ಯೆಯನ್ನು ಯಾವಾಗಲೂ ಜಿಡಿಪಿ ಅಥವಾ ಹಣದುಬ್ಬರದಿಂದ ಆಗಿಲ್ಲ. ಆದರೆ ಬಹುಮಟ್ಟಿಗೆ ಪ್ರತಿಭೆಯ ಬೇಡಿಕೆ-ಪೂರೈಕೆ ಹೊಂದಿಕೆಯಾಗುವುದಿಲ್ಲ, ಅಂದರೆ ಆಯಾ ಕ್ಷೇತ್ರಕ್ಕೆ ಬೇಕಾದ ಆಯಾ ಕ್ಷೇತ್ರದ ಪರಿಣಿತ ಉದ್ಯೋಗಿಗಳು ಲಭಿಸುವುದಿಲ್ಲ," ಎಂದು ಕೂಡಾ ತಿಳಿಸಿದ್ದಾರೆ.

ಇ-ಕಾಮರ್ಸ್, ಔಷಧೀಯ, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವಾ ಕ್ಷೇತ್ರಗಳು ಭಾರತದಲ್ಲಿ ತುಲನಾತ್ಮಕವಾಗಿ ದೊಡ್ಡ ವೇತನ ಹೆಚ್ಚಳವನ್ನು ನೀಡುತ್ತವೆ ಎಂದು ಊಹಿಸಲಾಗಿದೆ. ಆದರೆ ಚಿಲ್ಲರೆ ವ್ಯಾಪಾರ, ಏರೋಸ್ಪೇಸ್, ​​ಹೋಟೆಲ್‌ಗಳು ಮತ್ತು ಇತರೆ ಕ್ಷೇತ್ರಗಳು ಹಿಂದುಳಿಯಲಿದೆ ಎನ್ನಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Employees in India will see bigger pay rises next fiscal year, Here's Why. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X