ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ 3ನೇ ಶ್ರೀಮಂತ ಸ್ಥಾನಕ್ಕೆ ಜಿಗಿಯಲಿರುವ ಎಲೋನ್ ಮಸ್ಕ್‌

|
Google Oneindia Kannada News

ವಾಷಿಂಗ್ಟನ್, ನವೆಂಬರ್ 17: ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್‌, ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಲು ಸಿದ್ಧಗೊಂಡಿದ್ದಾರೆ. ಎಲೋನ್ ಮಸ್ಕ್‌ಗೆ ಇದು ಕೆಲವು ದಿನಗಳ ಘಟನೆಗಳು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು ಇದರ ನಡುವೆ ವಿಶ್ವದ ಮೂರನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇತ್ತೀಚೆಗಷ್ಟೇ ಕೋವಿಡ್ -19 ಪಾಸಿಟಿವ್ ಆಗಿದ್ದ ಬಿಲಿಯನೇರ್ ತಮ್ಮ ಸ್ಪೇಸ್ ಎಕ್ಸ್‌ ರಾಕೆಟ್ ಕಂಪನಿ ಮೂಲಕ ನಾಲ್ಕು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಇದರ ಜೊತೆಗೆ ಸೋಮವಾರ ಅವರ ಎಲೆಕ್ಟ್ರಿಕ್ ಕಾರ್ ತಯಾರಕ ಟೆಸ್ಲಾ ಇಂಕ್ ಅನ್ನು ಎಸ್ & ಪಿ 500 ಗೆ ಸೇರ್ಪಡೆಗೊಳಿಸಲಾಯಿತು. ಇದರ ಜೊತೆಗೆ 49 ರ ಹರೆಯದ ಮಸ್ಕ್, ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಸಜ್ಜಾಗಿದ್ದಾನೆ.

ಕೊವಿಡ್ 19 ಟೆಸ್ಟ್ ಬೋಗಸ್ ಎಂದ ಟೆಸ್ಲಾ ಸಿಇಒ, ಟ್ವಿಟ್ಟಗರ ಪ್ರತಿಕ್ರಿಯೆ ಕೊವಿಡ್ 19 ಟೆಸ್ಟ್ ಬೋಗಸ್ ಎಂದ ಟೆಸ್ಲಾ ಸಿಇಒ, ಟ್ವಿಟ್ಟಗರ ಪ್ರತಿಕ್ರಿಯೆ

ವಿಸ್ತೃತ ವಹಿವಾಟಿನಲ್ಲಿ ನಿವ್ವಳ ಮೌಲ್ಯವು 15 ಶತಕೋಟಿ ಡಾಲರ್‌ನಷ್ಟು ಹೆಚ್ಚಾದ ನಂತರ ಎಲೋನ್ ಮಸ್ಕ್ ಅವರು ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ರನ್ನು ಮೀರಿಸಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಲಿದ್ದಾರೆ. ಬಿಲಿಯನೇರ್ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ 4 ಗಂಟೆಗಳ ಹಿಂದೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್‌ರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಲು ಸಜ್ಜಾಗಿದ್ದಾರೆ.

Elon Musk Set To Become The Worlds 3rd Richest Person

ಟೆಸ್ಲಾ, ಅವರ ಸ್ಟಾಕ್ $ 408.09 ಕ್ಕೆ ಮುಚ್ಚಲ್ಪಟ್ಟಿತು, ಸಂಜೆ 6:20 ಕ್ಕೆ ಸುಮಾರು ಶೇ. 14ರಷ್ಟು ಏರಿಕೆಯಾಗಿದೆ. ನ್ಯೂಯಾರ್ಕ್‌ನಲ್ಲಿ ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಸ್ಕ್‌ನ ನಿವ್ವಳ ಮೌಲ್ಯವನ್ನು 117.5 ಬಿಲಿಯನ್ ಡಾಲರ್‌ಗೆ ತಲುಪಿಸುತ್ತದೆ. ಅವರ ಸಂಪತ್ತು ಈ ವರ್ಷ 90 ಬಿಲಿಯನ್ ಡಾಲರ್ ಜಿಗಿದಿದೆ. ಇದು ವಿಶ್ವದ 500 ಶ್ರೀಮಂತ ಜನರ ಶ್ರೇಯಾಂಕದ ಅತಿದೊಡ್ಡ ಲಾಭವಾಗಿದೆ.

English summary
Elon musk become the world’s third-richest person, crossing Mark Zuckerberg, after his net worth swelled by more than $15 billion in extended trading.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X