• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಬರಲಿದೆ ಎಲೋನ್ ಮಸ್ಕ್ ಉಪಗ್ರಹ ಇಂಟರ್‌ನೆಟ್: ಬುಕಿಂಗ್ ಹೇಗೆ? ದರ ಎಷ್ಟು?

|

ನವದೆಹಲಿ, ಮಾರ್ಚ್ 1: ಭಾರತದಲ್ಲಿ ಟೆಸ್ಲಾ ಕಂಪೆನಿಯ ವಿದ್ಯುತ್ ಚಾಲಿತ ಕಾರು ಕಂಪೆನಿ ಸ್ಥಾಪಿಸುವುದಾಗಿ ಅಮೆರಿಕದ ಖ್ಯಾತ ಉದ್ಯಮಿ ಎಲೋನ್ ಮಸ್ಕ್ ಘೋಷಿಸಿದ ಕೆಲವೇ ವಾರಗಳಲ್ಲಿ ಅವರ 'ಸ್ಟಾರ್‌ಲಿಂಕ್' ಉಪಗ್ರಹ ಇಂಟರ್‌ನೆಟ್ ಸೇವೆ ಕೂಡ ಭಾರತಕ್ಕೆ ಬರುತ್ತಿದೆ. ಸ್ಟಾರ್‌ಲಿಂಕ್ ಉಪಗ್ರಹ ಅಂತರ್ಜಾಲದ ಸಂಪರ್ಕಕ್ಕಾಗಿ ನೀವು ಮೊದಲೇ ಬುಕ್ ಮಾಡಿಕೊಳ್ಳಬೇಕು.

ಎಲೋನ್ ಮಸ್ಕ್ ಮಾಲೀಕತ್ವದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಈ ಸ್ಟಾರ್‌ಲಿಂಕ್ ಸೇವೆಯನ್ನು ಒದಗಿಸಲಿದೆ. 2002ರಲ್ಲಿ ಸ್ಪೇಸ್‌ ಎಕ್ಸ್ ಸಂಸ್ಥೆ ಆರಂಭವಾಗಿತ್ತು. ಕಳೆದ ಫೆ. 4ರಂದು ಈ ಸಂಸ್ಥೆಯು ಸ್ಟಾರ್‌ಲಿಂಕ್ ಉಪಗ್ರಹವನ್ನು ಉಡಾವಣೆ ಮಾಡಿತ್ತು.

ಏಕಕಾಲಕ್ಕೆ 143 ಉಪಗ್ರಹ ಉಡಾವಣೆ: ಇಸ್ರೋದ ವಿಶ್ವದಾಖಲೆ ಮುರಿದ ಅಮೆರಿಕದ ಸ್ಪೇಸ್ ಎಕ್ಸ್

ಕಂಪೆನಿಯ ವೆಬ್‌ಸೈಟ್ ಮಾಹಿತಿ ಪ್ರಕಾರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಅಂತರ್ಜಾಲ ಸೇವೆಯನ್ನು 2022ರ ವೇಳೆಗೆ ಆರಂಭಿಸಲಿದೆ. ಅದು ಯಾವಾಗ ಆರಂಭವಾಗಲಿದೆ ಎಂಬ ನಿಖರ ದಿನಾಂಕ ಇನ್ನೂ ಲಭ್ಯವಾಗಿಲ್ಲ. ಆದರೆ ನೀವು ಈಗಲೇ ಸ್ಟಾರ್‌ಲಿಂಕ್ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ಸಂಪರ್ಕವನ್ನು ಈಗಲೇ ಕಾಯ್ದಿರಿಸಬಹುದು. ಮುಂದೆ ಓದಿ.

ವಿಳಾಸ ನಮೂದಿಸಿ ಲಭ್ಯತೆ ಖಚಿತಪಡಿಸಿಕೊಳ್ಳಿ

ವಿಳಾಸ ನಮೂದಿಸಿ ಲಭ್ಯತೆ ಖಚಿತಪಡಿಸಿಕೊಳ್ಳಿ

ಅಂದಹಾಗೆ ಸ್ಟಾರ್‌ಲಿಂಕ್ ಆರಂಭದಲ್ಲಿ ಭಾರತದ ಎಲ್ಲ ಮೂಲೆಗಳಲ್ಲಿಯೂ ಲಭ್ಯವಾಗುವುದು ಅನುಮಾನ. ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್ ಮತ್ತಿತರ ಪ್ರಮುಖ ನಗರಗಳಲ್ಲಿ ಅಂತರ್ಜಾಲ ಲಭ್ಯವಾಗಬಹುದು. ವೆಬ್‌ಸೈಟ್‌ನಲ್ಲಿ ನಿಮ್ಮ ವಿಳಾಸ ಹಾಗೂ ವಿವರಗಳನ್ನು ನಮೂದಿಸಿದರೆ ಅದರಲ್ಲಿ ಮಾಹಿತಿ ಸಿಗಲಿದೆ.

ಬೆಂಗಳೂರಿಗೆ ಬಂದ ಎಲೋನ್ ಮಸ್ಕ್ 'ಟೆಸ್ಲಾ': ಮಾಯವಾದ ಯಡಿಯೂರಪ್ಪ ಟ್ವೀಟ್!

7,300 ರೂಪಾಯಿ ಶುಲ್ಕ

7,300 ರೂಪಾಯಿ ಶುಲ್ಕ

ಸ್ಟಾರ್‌ಲಿಂಕ್ ಭಾರತದಲ್ಲಿನ ವಿಳಾಸಗಳಿಗೆ ಪ್ರಸ್ತುತ ಮುಂಗಡ ಬುಕಿಂಗ್ ಆರಂಭಿಸಿದೆ. ಈ ಸೇವೆಗೆ ಠೇವಣಿಯನ್ನಾಗಿ 99 ಡಾಲರ್ ಶುಲ್ಕ (ಅಂದಾಜು 7,300 ರೂಪಾಯಿ) ವಿಧಿಸುತ್ತಿದೆ. ಸ್ಟಾರ್‌ಲಿಂಕ್ ಅಂತರ್ಜಾಲ ಸೇವೆ ಪಡೆಯಲು ಅದರ ಸಾಧನವನ್ನು ನೀವು ನಮೂದಿಸಿದ ವಿಳಾಸದಲ್ಲಿ ಅಳವಡಿಸಲು ಹಾಗೂ ಅಂತರ್ಜಾಲ ಸಂಪರ್ಕ ಒದಗಿಸಲು ಈ ಶುಲ್ಕ ಪಡೆಯಲಾಗುತ್ತದೆ.

ಠೇವಣಿ ವಾಪಸ್ ಇದೆ

ಠೇವಣಿ ವಾಪಸ್ ಇದೆ

ಒಮ್ಮೆ ನೀವು ಶುಲ್ಕ ಪಾವತಿಸಿದ ಬಳಿಕ ನಿಮ್ಮ ಸ್ಥಳದಲ್ಲಿ ನಿಮ್ಮ ಆದ್ಯತೆಯ ಸೇವೆಯನ್ನು ಮೀಸಲಿಡಲಾಗುತ್ತದೆ. ಅಂದಹಾಗೆ ಈ ಠೇವಣಿ ಮೊತ್ತ ಮರುಪಾವತಿಸುವಂತಹದು. ಹೀಗಾಗಿ ನೀವು ಅದಕ್ಕೆ ಹಣ ಪಾವತಿಸಿದ ಬಳಿಕ ಮನಸು ಬದಲಿಸಿಕೊಂಡರೂ ನಿಮ್ಮ ಹಣ ಮರಳಿ ಸಿಗುತ್ತದೆ.

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಲ್ಲಿ ಮತ್ತು ಆಪಲ್ ಪೇ ಮೂಲಕವೂ ಸ್ಟಾರ್‌ಲಿಂಕ್ ಹಣದ ಪಾವತಿಯನ್ನು ಸ್ವೀಕರಿಸುತ್ತದೆ. ಆದರೆ ಸದ್ಯಕ್ಕೆ ಆಪಲ್ ಪೇ ಭಾರತದಲ್ಲಿ ಲಭ್ಯವಿಲ್ಲ.

ಇಂಟರ್‌ನೆಟ್ ವೇಗ ಎಷ್ಟು?

ಇಂಟರ್‌ನೆಟ್ ವೇಗ ಎಷ್ಟು?

ಈಗಿನ ಬೇಟಾ ಪರೀಕ್ಷಾ ಹಂತದಲ್ಲಿ ಸ್ಟಾರ್‌ಲಿಂಕ್ 50-150 ಎಂಬಿಪಿಎಸ್ ವೇಗದಲ್ಲಿ ಅಂತರ್ಜಾಲ ಸೇವೆ ನೀಡುತ್ತಿದೆ. ಆದರೆ 2021ರ ಅಂತ್ಯದ ವೇಳೆಗೆ ಅದರ ವೇಗ ಎರಡುಪಟ್ಟು, ಅಂದರೆ 300 ಎಂಬಿಪಿಎಸ್‌ಗೆ ಹೆಚ್ಚಲಿದೆ ಎಂದು ಎಲೋನ್ ಮಸ್ಕ್ ತಿಳಿಸಿದ್ದಾರೆ. ಹಾಗೆಯೇ 2021ರ ಅಂತ್ಯದ ವೇಳೆಗೆ ಭೂಮಿಯ ಬಹುತೇಕ ಭಾಗವನ್ನು ಸ್ಟಾರ್‌ಲಿಂಕ್ ಯೋಜನೆ ಆವರಿಸಲಿದೆ ಎಂದು ಅವರು ಹೇಳಿದ್ದಾರೆ.

ಸೇವೆ ಹೇಗೆ ಲಭ್ಯ?

ಸೇವೆ ಹೇಗೆ ಲಭ್ಯ?

ಸ್ಟಾರ್‌ಲಿಂಕ್ ಅಂತರ್ಜಾಲ ಸೇವೆಯು ನಿಮ್ಮ ಸ್ಥಳದಲ್ಲಿನ ಬ್ರಾಡ್‌ಬ್ಯಾಂಡ್ ಆಯ್ಕೆಗಳನ್ನು ಅವಲಂಬಿಸಿದೆ. ನಿಮ್ಮ ಸ್ಥಳದಲ್ಲಿ ವಿಶ್ವಾಸಾರ್ಹ ವೈರ್ ಅಥವಾ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆ ಇದ್ದರೆ ಸ್ಟಾರ್‌ಲಿಂಕ್ ಸೇವೆ ಸುಲಭ. ಇಲ್ಲದಿದ್ದರೆ ಅದಕ್ಕೆ ಅನುಗುಣವಾಗಿ ಸೇವೆ ಒದಗಿಸಬಹುದು. ಭಾರತದಲ್ಲಿ 22 ಮಿಲಿಯನ್‌ಗಿಂತ ಕೊಂಚ ಅಧಿಕವಷ್ಟೇ ವೈರ್ ಸಂಪರ್ಕಿತ ಬ್ರಾಡ್‌ಬ್ಯಾಂಡ್ ಬಳಕೆದಾರರಿದ್ದಾರೆ. ಇದಕ್ಕೆ ವಿರುದ್ಧವಾಗಿ ಮೊಬೈಲ್ ಗ್ರಾಹಕರ ಸಂಖ್ಯೆ 115 ಮಿಲಿಯನ್‌ಗೂ ಅಧಿಕವಿದೆ.

English summary
Elon Musk's Starlink satellite internet is entering India. You can pre-book your connection. How to book and what is the price?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X