ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನ್ನದೇ ಸಾಮಾಜಿಕ ಜಾಲತಾಣ ತೆರೆದ ಎಲಾನ್ ಮಸ್ಕ್, ಹೆಸರೇನು ಗೊತ್ತಾ?

|
Google Oneindia Kannada News

ವಾಷಿಂಗ್ಟನ್, ಆಗಸ್ಟ್‌ 12: ಜಗತ್ತಿನ ಅತೀ ದೊಡ್ಡ ಶ್ರೀಮಂತ, ಅಮೆರಿಕಾದ ಉದ್ಯಮಿ ಎಲಾನ್ ಮಸ್ಕ್‌ ಟ್ವಿಟ್ಟರ್‌ ಜೊತೆಗಿನ ಕಾನೂನು ಸಮರ ಮುಂದುವರೆಸಿರುವ ಮಧ್ಯೆ ತನ್ನ ಸ್ವಂತ ಸಾಮಾಜಿಕ ಜಾಲತಾಣವೊಂದನ್ನು ತೆರೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಎಲಾನ್ ಮಸ್ಕ್ ಅವರು ಟ್ವಿಟರ್‌ನಲ್ಲಿ ಆಗಾಗ್ಗೆ ಅಚ್ಚರಿಯ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಇದು ಅವರ ಅಭಿಮಾನಿಗಳನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಟೆಸ್ಲಾ ಸಿಇಒ ಆಗಿರುವ ಮಸ್ಕ್‌ ಟ್ವಿಟರ್‌ನೊಂದಿಗಿನ ಕಾನೂನು ಹೋರಾಟದ ಮಧ್ಯೆ ಹೊಸ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ನಿರ್ಮಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಟ್ವಿಟರ್ ಸಿಇಒ ಪರಾಗ್ ಅಗರವಾಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಸ್ಕ್‌ಟ್ವಿಟರ್ ಸಿಇಒ ಪರಾಗ್ ಅಗರವಾಲ್‌ಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಸ್ಕ್‌

ಎಲಾನ್ ಮಸ್ಕ್‌ ಅವರನ್ನು ಮಾರ್ಚ್‌ನಲ್ಲಿ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮ ಸೈಟ್ ಅನ್ನು ರಚಿಸುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಅವರು ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸುತ್ತಿರುವುದಾಗಿ ಎಂದು ಹೇಳಿದ್ದರು. ಅದಾದ ಕೆಲವೇ ವಾರಗಳ ನಂತರ ಅವರು 44 ಶತಕೋಟಿ ಡಾಲರ್‌ಗೆ ಟ್ವಿಟರ್ ಅನ್ನು ಖರೀದಿಸಲು ಮುಂದಾದರು. ಬಳಿಕ ಅವರು ಈಗ ಅದರಿಂದ ಹಿಂದೆ ಸರಿದಿದ್ದಾರೆ.

Elon Musk opened his own social media network

ಆದರೆ ಕೆಲವೇ ದಿನಗಳ ಹಿಂದೆ (ಆಗಸ್ಟ್ 10) ಮತ್ತೊಬ್ಬ ಅಭಿಮಾನಿ ಮಸ್ಕ್ ಅವರನ್ನು ಟ್ವಿಟರ್ ವಿವಾದ ಬಗೆಹರಿಯದಿದ್ದರೆ ನಿಮ್ಮ ಸ್ವಂತ ಸಾಮಾಜಿಕ ವೇದಿಕೆಯನ್ನು ರಚಿಸುವ ಬಗ್ಗೆ ನೀವು ಯೋಚಿಸಿದ್ದೀರಾ? ಎಂದು ಕೇಳಿದರು. ಅದಕ್ಕೆ ಎಲಾನ್ ಮಸ್ಕ್‌ X.com" ಎಂದು ಒಂದು ಪದದ ಉತ್ತರವನ್ನು ನೀಡಿದರು. ಆದರೆ ವೆಬ್‌ಸೈಟ್ ಕುರಿತು ಬೇರೆ ಯಾವುದೇ ಹೆಚ್ಚಿನ ವಿವರಗಳನ್ನು ಒದಗಿಸಿಲ್ಲ.

X.com ವೆಬ್‌ ಜಾಲತಾಣಕ್ಕೆ ಅಪರಿಚಿತವೇನಲ್ಲ. ಇದು ಹಣಕಾಸಿನ ಸೇವೆಯೊಂದಿಗೆ ಸಂಬಂಧಿಸಿದೆ. ಅದು ಅಂತಿಮವಾಗಿ PayPal ನೊಂದಿಗೆ ವಿಲೀನಗೊಂಡಿತ್ತು. ಮಸ್ಕ್ 2017ರಲ್ಲಿ PayPal ನಿಂದ ವೆಬ್‌ಸೈಟ್‌ ಹೆಸರನ್ನು ಪುನಃ ಪಡೆದುಕೊಂಡರು. ಅದೇ ದಿನ ಮತ್ತೊಬ್ಬ ಅಭಿಮಾನಿಯ ಟ್ವೀಟ್‌ಗಳಿಗೆ ಮಸ್ಕ್ ಪ್ರತ್ಯುತ್ತರ ನೀಡಿದ್ದು, ಟ್ವಿಟರ್‌ನೊಂದಿಗಿನ ಕಾನೂನು ಹೋರಾಟ ಮುಗಿದ ನಂತರ ಮಾರಾಟವಾದ ಟೆಸ್ಲಾ ಷೇರುಗಳನ್ನು ಮರಳಿ ಖರೀದಿಸುವ ಯೋಜನೆಯನ್ನು ಪ್ರಕಟಿಸಿದರು. ಅಭಿಮಾನಿ ತನ್ನ ಟೆಸ್ಲಾ ಷೇರುಗಳನ್ನು ಮಾರಾಟ ಮಾಡುವುದನ್ನು ಮುಗಿಸಿದ್ದೀರಾ ಎಂದು ಕೇಳಿದರು. ಅದಕ್ಕೆ ಹೌದು, ಟ್ವಿಟರ್ ಈ ಒಪ್ಪಂದವನ್ನು ಮುಗಿಸಲು ಒತ್ತಾಯಿಸುತ್ತದೆ. ಇಲ್ಲಿ ಕೆಲವು ಇಕ್ವಿಟಿ ಪಾಲುದಾರರು ಬರುವುದಿಲ್ಲ, ಟೆಸ್ಲಾ ಸ್ಟಾಕ್‌ನ ತುರ್ತು ಮಾರಾಟವನ್ನು ತಪ್ಪಿಸುವುದು ಮುಖ್ಯ ಎಂದು ಮಸ್ಕ್‌ ಹೇಳಿದರು.

Elon Musk opened his own social media network

44 ಬಿಲಿಯನ್ ಡಾಲರ್‌ಗೆ ಟ್ವಿಟ್ಟರ್‌ ಖರೀದಿಸುವ ಒಪ್ಪಂದದಿಂದ ಹಿಂದೆ ಸರಿದಿದ್ದಕ್ಕಾಗಿ ಟ್ವಿಟರ್ ಎಲಾನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ. ಈ ವಿಷಯವು ನ್ಯಾಯಾಲಯದಲ್ಲಿ ಗೌಪ್ಯವಾಗಿರುವುದರಿಂದ ಕೆಲವು ಕಾರಣಗಳಿಗಾಗಿ ಅವರು ಕಂಪನಿಯ ವಿರುದ್ಧ ಪ್ರತಿದಾವೆ ಹೂಡಿದರು. ಬಳಿ ಅವರು ಒಪ್ಪಂದದಿಂದ ಹಿಂದೆ ಸರಿದರು. ಟ್ವಿಟರ್ ಕಡೆಯಿಂದ ವಿಶ್ವಾಸಾರ್ಹತೆ ಕೊರತೆ ಇದೆ ಎಂದು ಆರೋಪಿಸಿದರು. ಪ್ಲಾಟ್‌ಫಾರ್ಮ್‌ನಲ್ಲಿ ಬಾಟ್‌ಗಳು ಮತ್ತು ಸ್ಪ್ಯಾಮ್ ಪ್ರೊಫೈಲ್‌ಗಳಲ್ಲಿನ ನಿಖರವಾದ ಅಂಕಿಅಂಶಗಳನ್ನು ಸಾಮಾಜಿಕ ಮಾಧ್ಯಮ ಕಂಪನಿಯು ಬಹಿರಂಗಪಡಿಸಲಿಲ್ಲ ಎಂದು ಅವರು ಆರೋಪಿಸಿದರು.

English summary
Elon Musk, the world's richest man, has announced plans to open his own social network amid a continuing legal battle with Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X