ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನದಲ್ಲಿ 15.2 ಬಿಲಿಯನ್ ಡಾಲರ್ ಕಳೆದುಕೊಂಡ ಎಲೋನ್ ಮಸ್ಕ್

|
Google Oneindia Kannada News

ನವದೆಹಲಿ, ಫೆಬ್ರವರಿ 23: ಜಗತ್ತಿನ ಅತಿ ಶ್ರೀಮಂತ ಉದ್ಯಮಿಯ ಸ್ಥಾನವನ್ನು ಎಲೊನ್ ಮಸ್ಕ್ ಕಳೆದುಕೊಂಡಿದ್ದಾರೆ. ಅವರ ಒಡೆತನದ ಟೆಸ್ಲಾ ಕಂಪೆನಿ ಶೇ 8.6 ಷೇರುಗಳನ್ನು ಸೋಮವಾರ ಕಳೆದುಕೊಂಡಿದ್ದು, ಇದರಿಂದ ಅವರ ಒಟ್ಟು ಸಂಪತ್ತಿನ ನಿವ್ವಳ ಮೌಲ್ಯವು 15.2 ಬಿಲಿಯನ್ ಡಾಲರ್‌ನಷ್ಟು (ಸುಮಾರು ಒಂದು ಲಕ್ಷ ಕೋಟಿ ರೂ) ಕುಸಿತಕಂಡಿದೆ.

ಸೆಪ್ಟೆಂಬರ್ ತಿಂಗಳಿನಿಂದ ಇದು ಟೆಸ್ಲಾದ ಅತಿ ದೊಡ್ಡ ಕುಸಿತವಾಗಿದೆ. ಟೆಸ್ಲಾ ಕಂಪೆನಿ ಷೇರುಗಳ ಕುಸಿತಕ್ಕೆ ಪ್ರಮುಖ ಕಾರಣ ಎಲೋನ್ ಮಸ್ಕ್ ಅವರ ಒಂದು ಟ್ವೀಟ್. ಬಿಟ್‌ಕಾಯಿನ್ ದರದ ಕುರಿತು ಎಲೋನ್ ಮಸ್ಕ್ ಅವರು ಹೇಳಿಕೆ ನೀಡಿದ್ದರು. ಬಿಟ್ ಕಾಯಿನ್ ಮತ್ತು ಈಥರ್‌ನ ಬೆಲೆಗಳು ಅಧಿಕವಾಗಿರುವಂತೆ ತೋರಿಸುತ್ತದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು.

ಟೆಸ್ಲಾದಿಂದ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್ ಖರೀದಿಟೆಸ್ಲಾದಿಂದ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್ ಖರೀದಿ

ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ 2021ರ ಜನವರಿಯಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿತ್ತು. ಇದರ ಬಳಿಕ ಬಿಟ್‌ಕಾಯಿನ್‌ಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಎರಡು ವಾರಗಳ ನಂತರ ಟೆಸ್ಲಾ ಕಂಪೆನಿ ಷೇರು ಮೌಲ್ಯ ಕುಸಿತ ಕಂಡಿದೆ.

Elon Musk Loses $15.2 Billion In A Day After Issuing Warning Regarding Bitcoin Surge

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ವಿಶ್ವದ 500 ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೆಯ ಸ್ಥಾನಕ್ಕೆ ಎಲೋನ್ ಮಸ್ಕ್ ಇಳಿದಿದ್ದಾರೆ.

English summary
Elon Musk loses $15.2 billion in a day after issuing warning regarding Bitcoin surge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X