ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಿವೇಟ್100ನಲ್ಲಿ ಮಿಂಚಿದ ಮಹಿಳಾ ಉದ್ಯಮಿಗಳು

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 30 : "ನಿಮ್ಮಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ಯಾಷನ್ ಇದ್ದರೆ, ನಿಮಗೆ ಅದಕ್ಕೆ ಬೇಕಾದಂಥ ಸಾಧನಗಳು ಮತ್ತು ಕೌಶಲ್ಯಗಳು ತಾವಾಗಿಯೇ ಸಿಗುತ್ತವೆ" ಎಂಬುದು 'ಎಲಿವೇಟ್100' ಸಮಾವೇಶದ ಅಘೋಷಿತ ಘೋಷವಾಕ್ಯ.

ನವೆಂಬರ್ 16ರಿಂದ ಬೆಂಗಳೂರು ಐಟಿ- ಬಿಟಿ ಸಮ್ಮೇಳನನವೆಂಬರ್ 16ರಿಂದ ಬೆಂಗಳೂರು ಐಟಿ- ಬಿಟಿ ಸಮ್ಮೇಳನ

"ಇದು ಕರ್ನಾಟಕ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಇನಿಶಿಯೇಟಿವ್ ಆಗಿದ್ದು, ಭಾರತದಲ್ಲಿ ಯಾವುದೇ ಸರಕಾರ ಇಂಥ ಕ್ರಮ ಕೈಗೊಂಡಿಲ್ಲ ಮತ್ತು ಸ್ಟಾರ್ಟ್ ಅಪ್ ಸೆಲ್ ತೆರೆದಿಲ್ಲ, ಸರಕಾರದ ಇಂಥ ನೀತಿಯಿಂದಲೇ ಉದ್ಯಮಗಳು ಬೆಳೆಯುತ್ತವೆ" ಎಂದು ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ನುಡಿದರು.

Elevate100 : An initiative of govt of Karnataka

ಕರ್ನಾಟಕದಲ್ಲಿ ಹೊಸ ಯುವ ಉದ್ಯಮಿಗಳಿಗೆ ವೇದಿಕೆ, ಪ್ರೋತ್ಸಾಹ, ಹಣಕಾಸಿನ ಸಹಾಯ ಒದಗಿಸುವ ಉದ್ದೇಶದಿಂದ ಹೋಟೆಲ್ ಲಲಿತ್ ಅಶೋಕ್ ನಲ್ಲಿ ಆಗಸ್ಟ್ 29ರಿಂದ ಎರಡು ದಿನಗಳ ಸಮಾವೇಶವನ್ನು ಕರ್ನಾಟಕ ಸರಕಾರ ಹಮ್ಮಿಕೊಂಡಿತ್ತು.

ಕರ್ನಾಟಕ ಸರಕಾರದ ಆರಂಭಿಸಿದ ಈ ಯಜ್ಞದಲ್ಲಿ ಪಾಲ್ಗೊಂಡವರು 3,700ಕ್ಕೂ ಹೆಚ್ಚು ಉದ್ಯಮಿಗಳು. ಅವರಲ್ಲಿ ಆಯ್ಕೆಯಾದ ಪ್ರಥಮ 100 ಉದ್ಯಮಿಗಳ ಮಾತುಕತೆ, ಚರ್ಚೆ, ವಿಚಾರ ಹಂಚಿಕೆಗೆ ಕಲ್ಪಿಸಲಾದ ವೇದಿಕೆಯೇ 'ಎಲಿವೇಟ್ 100'.

Elevate100 : An initiative of govt of Karnataka

ಇಲ್ಲಿ ಕಂಡುಬಂದ ಮಹತ್ವದ ಸಂಗತಿಯೇನೆಂದರೆ, ನೂರರಲ್ಲಿ ಶೇ.19ರಷ್ಟು ಮಹಿಳಾ ಉದ್ಯಮಿಗಳು ಆಯ್ಕೆಯಾಗಿರುವುದು. ಮಹಿಳಾ ಉದ್ಯಮಿಗಳಿಗಾಗಿಯೇ 10 ಕೋಟಿ ರುಪಾಯಿ ಅನುದಾನ ನೀಡುತ್ತಿದ್ದುದಕ್ಕಾಗಿ ಐಟಿ ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅರಸ್ ಅವರು ಶ್ಲಾಷಿಸಿದ್ದಾರೆ.

Elevate100 : An initiative of govt of Karnataka

Internet of Things ವಿಷಯದ ಮೇಲೆ ರಂಜನಾ ನಾಯರ್, ಉಮಾ ರೆಡ್ಡಿ, ರಾಧಿಕಾ ಶೆಟ್ಟಿ, ವಿದ್ಯಾ ವಿನಯ್, ರಾಶಿ ಮೆಂಡಾ ಮುಂತಾದ ಮಹಿಳಾ ಉದ್ಯಮಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಮಹಿಳಾ ಉದ್ಯಮಿಗಳು ಅತ್ಯಂತ ಉತ್ಸಾಹದಿಂದ ಈ ಚರ್ಚಾಕೂಟದಲ್ಲಿ ಭಾಗವಹಿಸಿದ್ದರು.

Elevate100 : An initiative of govt of Karnataka

ಮೈಕ್ರೋಸಾಫ್ಟ್ ನ ರವಿ ನಾರಾಯಣ್ ಅವರು, ಇಲ್ಲಿರುವ ಉದ್ಯಮಿಗಳಲ್ಲಿನ ಉತ್ಸಾಹ, ಶಕ್ತಿ ಅಮಿತವಾಗಿತ್ತು ಎಂದು ಬಣ್ಣಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಷನ್ ನ ಸಿಇಓ ನವೀನ್ ಝಾ, ಐಟಿ ಬಿಟಿ ಇಲಾಖೆಯ ಕಾರ್ಯದರ್ಶಿ ಗೌರವ್ ಗುಪ್ತಾ, ನಾಸ್ಕಾಂ ಬೋರ್ಡ್ ಸದಸ್ಯ ರವಿ ಗುರುರಾಜ್ ಮುಂತಾದವರು ಭಾಗವಹಿಸಿದ್ದರು.

English summary
Elevate100, an initiative of government of Karnataka, a conclave to provide platform for startup companies and entrepreneurs concluded in Bengaluru, under the leadership of IT BT and Tourism minister Priyank Kharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X