ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಅಡುಗೆ ಅನಿಲ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 01: ಮೂರು ತಿಂಗಳುಗಳ ಕಾಲ ಇಳಿಕೆ ಕಂಡಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಮಾರ್ಚ್ 01ರಂದು ಏರಿಕೆಯಾಗಿತ್ತು. ಈಗ ಒಂದು ತಿಂಗಳ ಬಳಿಕ ಮತ್ತೊಮ್ಮೆ ಏರಿಕೆ ಮಾಡಲಾಗಿದೆ .

ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಬ್ಸಿಡಿ ರಹಿತ ಸಿಲಿಂಡರ್ ಖರೀದಿದಾರರಿಗೆ ಕಹಿ ಸುದ್ದಿಯನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಸಂಸ್ಥೆ ನೀಡಿದೆ. ಸಬ್ಸಿಡಿಯುಳ್ಳ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ 5 ರೂ. ಏರಿಕೆಯಾಗಿದ್ದು, 14.2 ಕೆ.ಜಿ. ಸಿಲಿಂಡರ್ ಬೆಲೆ ನವದೆಹಲಿಯಲ್ಲಿ 706.50 ರೂ. ತಲುಪಿದೆ. ಸಬ್ಸಿಡಿಯುಳ್ಳ ಪ್ರತಿ ಸಿಲಿಂಡರ್ 495.86 ರು ನಷ್ಟಿದೆ. ಪರಿಷ್ಕೃತ ದರಗಳು ಏಪ್ರಿಲ್ 01ರಿಂದ ಜಾರಿಗೆ ಬರಲಿದೆ.

Elections 2019 : Subsidised, Non-Subsidised LPG Rates Revised

ವಾಣಿಜ್ಯ ನಗರಿ ಮುಂಬೈನಲ್ಲಿ ಸಬ್ಸಿಡಿಯುಳ್ಳ ಸಿಲಿಂಡರ್ 493.57ರು ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 678.50 ರೂ. ಗಳಾಗಿದ್ದರೆ, ಚೆನ್ನೈನಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 722 ಹಾಗೂ ಕೋಲ್ಕತ್ತಾದಲ್ಲಿ 732.50 ರೂಪಾಯಿ ತಲುಪಿದೆ.

ಗೃಹಬಳಕೆ ಇಂಧನಗಳ ಸಬ್ಸಿಡಿ ವಿಸ್ತರಣೆಗೆ ಮುಂದಾದ ಕೇಂದ್ರ ಸರ್ಕಾರಗೃಹಬಳಕೆ ಇಂಧನಗಳ ಸಬ್ಸಿಡಿ ವಿಸ್ತರಣೆಗೆ ಮುಂದಾದ ಕೇಂದ್ರ ಸರ್ಕಾರ

ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ 25 ಪೈಸೆ ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ 495.86 ರೂಪಾಯಿ ತಲುಪಿದೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ದರ ಕುಸಿತದಿಂದ ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ಬಲಗೊಂಡ ಕಾರಣ ಎಲ್ ಪಿಜಿ ದರ ಇಳಿಕೆಯಾಗಿತ್ತು. ಆದರೆ, ಇಂಧನ ಮಾರುಕಟ್ಟೆ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಅಡುಗೆ ಅನಿಲ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದೆ

English summary
LPG or liquefied petroleum gas prices were hiked on Monday, marking the second increase in prices so far this calendar year. Subsidised and non-subsidised LPG gas cylinder prices in Delhi were revised to Rs. 495.86 per cylinder (14.2 kilograms) and Rs. 706.50 per cylinder respectively, according to Indian Oil Corporation's website
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X