ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಅಕ್ಟೋಬರ್‌ನಲ್ಲಿ -2.5% ಕುಸಿತ: ಸೆಪ್ಟೆಂಬರ್‌ಗಿಂತ ಹೆಚ್ಚು

|
Google Oneindia Kannada News

ನವದೆಹಲಿ, ನವೆಂಬರ್ 27: ದೇಶದ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಅಕ್ಟೋಬರ್‌ ತಿಂಗಳಿನಲ್ಲಿ ಶೇ. -2.5ರಷ್ಟು ದಾಖಲಾಗುವ ಮೂಲಕ ಸತತ ಎಂಟನೇ ತಿಂಗಳು ಕುಸಿತಗೊಂಡಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ಉಕ್ಕಿನ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಅಕ್ಟೋಬರ್ ತಿಂಗಳಿನಲ್ಲೂ ಉತ್ಪಾದನಾ ದರವು ಋಣಾತ್ಮಕವಾಗಿದೆ. ಆದರೆ ಇದು ಸೆಪ್ಟೆಂಬರ್ ತಿಂಗಳಿಗಿಂತ ಹೆಚ್ಚಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 2020 ರ ಸೆಪ್ಟೆಂಬರ್‌ನಲ್ಲಿ ಎಂಟು ಪ್ರಮುಖ ವಲಯಗಳ ಉತ್ಪಾದನೆಯು ಶೇಕಡಾ 0.1 ರಷ್ಟು ಕುಗ್ಗಿದೆ. 2020-21ರ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ ಒಟ್ಟು ಬೆಳವಣಿಗೆ ಶೇ 13 ರಷ್ಟು ಕುಗ್ಗಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತ

"ಎಂಟು ಪ್ರಮುಖ ಕೈಗಾರಿಕೆಗಳ ಸಂಯೋಜಿತ ಸೂಚ್ಯಂಕವು 2020 ರ ಅಕ್ಟೋಬರ್‌ನಲ್ಲಿ ಶೇ. 124.2 ರಷ್ಟಿತ್ತು, ಇದು 2019 ರ ಅಕ್ಟೋಬರ್‌ನ ಸೂಚ್ಯಂಕಕ್ಕೆ ಹೋಲಿಸಿದರೆ ಶೇಕಡಾ 2.5 (ತಾತ್ಕಾಲಿಕ) ರಷ್ಟು ಕುಸಿದಿದೆ. 2020-21ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಇದರ ಒಟ್ಟಾರೆ ಕುಸಿತವು ಶೇ 13ರಷ್ಟಿದೆ "ಎಂದು ಸಚಿವಾಲಯ ತಿಳಿಸಿದೆ.

Eight Core Industries Output Shrinks -2.5% In October

ಕಲ್ಲಿದ್ದಲು, ವಿದ್ಯುತ್ ಮತ್ತು ಸಿಮೆಂಟ್ ಹೊರತುಪಡಿಸಿ, ಉಳಿದ ಎಲ್ಲಾ ಕ್ಷೇತ್ರಗಳು - ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾಗಾರ ಉತ್ಪನ್ನಗಳು, ಗೊಬ್ಬರ ಮತ್ತು ಉಕ್ಕು ಸೆಪ್ಟೆಂಬರ್ 2020 ರಲ್ಲಿ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.

ಅಕ್ಟೋಬರ್‌ನಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯು ಈ ಕೆಳಕಂಡಂತಿದೆ:

ಕಲ್ಲಿದ್ದಲು: 11.6%

ರಸಗೊಬ್ಬರ: 6.3%

ವಿದ್ಯುತ್: 10.5%

ಸಿಮೆಂಟ್: 2.8%

ಕಚ್ಚಾ ತೈಲ: -6.2%

ನೈಸರ್ಗಿಕ ಅನಿಲ: -8.6%

ರೀಫೈನರಿ ಉತ್ಪನ್ನಗಳು: -17%

ಉಕ್ಕು: -2.7%

ಜುಲೈ 2020 ರ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಅಂತಿಮ ಬೆಳವಣಿಗೆಯ ದರವನ್ನು (-) ಶೇಕಡಾ 7.6 ಕ್ಕೆ ಪರಿಷ್ಕರಿಸಲಾಗಿದೆ.

English summary
Contracting for the eight consecutive month, the output of eight core infrastructure sectors declined by 2.5 per cent in October
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X