ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಪ್ರಾಯೋಜಕತ್ವ ಬಿಡ್ಡಿಂಗ್ ನಲ್ಲಿ ಬೆಂಗ್ಳೂರು ಕಂಪನಿ!

|
Google Oneindia Kannada News

ಬೆಂಗಳೂರು, ಆ.13: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಟೈಟಲ್ ಪ್ರಾಯೋಜಕರಾಗಿದ್ದ ವಿವೊ ಐಪಿಎಲ್‌ನಿಂದ ಹಿಂದೆ ಸರಿದಿದೆ. ಚೀನಾ ಮೂಲದ ಸಂಸ್ಥೆ ಮುಖ್ಯ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಳಿಕ ಹತ್ತು ಹಲವು ಬಿಡ್ ಸಲ್ಲಿಸಿವೆ.

Recommended Video

Patanjali IPL 2020? Patanjali shows interest for title sponsorship | Oneindia Knnada

ಬೆಂಗಳೂರಿನ ಇಂದಿರಾನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಆನ್‌ಲೈನ್ ಶಿಕ್ಷಣ ಸಂಸ್ಥೆ 'ಅನ್‌ಅಕಾಡೆಮಿ' ಕೂಡಾ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸುತ್ತಿದೆ. ಬಿಸಿಸಿಐನಿಂದ ಬಿಡ್ ದಾಖಲೆಪತ್ರಗಳನ್ನು ಅನ್‌ಅಕಾಡೆಮಿ ಖರೀದಿಸಿದೆ, ಶೀಘ್ರದಲ್ಲೇ ಬಿಡ್ ಸಲ್ಲಿಸುವ ನಿರೀಕ್ಷೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

ಕ್ರಿಕೆಟ್‌ಗೂ ಕೈ ಹಾಕಿದ ಬಾಬಾ ರಾಮದೇವ್: ಐಪಿಎಲ್ 2020 ಟೈಟಲ್ ಪ್ರಾಯೋಜಕತ್ವಕ್ಕಾಗಿ ಪತಂಜಲಿ ಬಿಡ್ಕ್ರಿಕೆಟ್‌ಗೂ ಕೈ ಹಾಕಿದ ಬಾಬಾ ರಾಮದೇವ್: ಐಪಿಎಲ್ 2020 ಟೈಟಲ್ ಪ್ರಾಯೋಜಕತ್ವಕ್ಕಾಗಿ ಪತಂಜಲಿ ಬಿಡ್

ಅನ್‌ಅಕಾಡೆಮಿ ಈಗಾಗಲೆ ಐಪಿಎಲ್‌ನಲ್ಲಿ 2023ರವರೆಗೆ ಕೇಂದ್ರಿಯ ಪ್ರಾಯೋಜಕತ್ವ ಹೊಂದಿದೆ ಆದರೆ, ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಈಗ ಬಿಡ್ ಸಲ್ಲಿಸಲು ಮುಂದಾಗಿದೆ. ಶೀರ್ಷಿಕೆ ಪ್ರಾಯೋಜಕತ್ವ ಪಡೆದ ಕಂಪನಿಯ ಲೋಗೋ ತಂಡಗಳ ಆಟಗಾರರ ಜೆರ್ಸಿಯಲ್ಲಿ ಎದ್ದು ಕಾಣಲಿದೆ. ಪ್ರಶಸ್ತಿ ವಿತರಣಾ ಸಮಾರಂಭಲ್ಲೂ ಪ್ರಮುಖವಾಗಿ ಕಾಣಿಸಲಿದೆ.

 440 ಕೋಟಿ ರೂ. ಒಪ್ಪಂದ ಹೊಂದಿದ್ದ ವಿವೋ

440 ಕೋಟಿ ರೂ. ಒಪ್ಪಂದ ಹೊಂದಿದ್ದ ವಿವೋ

ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ ಹೊಂದಿತ್ತು. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ ಮುಂದಿನ 4 ತಿಂಗಳ ಅವಧಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕಿಗೆ 300ರಿಂದ 350 ಕೋಟಿ ರೂ. ಮೊತ್ತದ ಒಪ್ಪಂದದ ನಿರೀಕ್ಷೆಯಲ್ಲಿದೆ. ಅನ್‌ಅಕಾಡೆಮಿ ಕಂಪನಿಯ ಹಾಲಿ ಮೌಲ್ಯ 3,800 ಕೋಟಿ ರೂಪಾಯಿಗೂ ಅಧಿಕವಾಗಿದೆ.

 ಬೆಂಗಳೂರು ಮೂಲದ ಕಂಪನಿಗಳ ಕ್ರೀಡಾ ಹೂಡಿಕೆ

ಬೆಂಗಳೂರು ಮೂಲದ ಕಂಪನಿಗಳ ಕ್ರೀಡಾ ಹೂಡಿಕೆ

ಚೀನಾ ಮೂಲದ ಕಂಪನಿಯ ಹೂಡಿಕೆ ಹೊಂದಿರುವ ಬೆಂಗಳೂರು ಮೂಲದ ಬೈಜುಸ್‌ ಕಂಪನಿ ಟೀಂ ಇಂಡಿಯಾದ ಆಟಗಾರರ ಜರ್ಸಿಯಲ್ಲಿ ಕಾಣಿಸಿಕೊಂಡಿದೆ.

ಫೇಸ್ಬುಕ್ ಹೂಡಿಕೆಯ ತಂತ್ರಜ್ಞಾನ ಸಂಸ್ಥೆ ಡೇಟಾ ಹ್ಯಾಕ್ಡ್ಫೇಸ್ಬುಕ್ ಹೂಡಿಕೆಯ ತಂತ್ರಜ್ಞಾನ ಸಂಸ್ಥೆ ಡೇಟಾ ಹ್ಯಾಕ್ಡ್

ಬೆಂಗಳೂರು ಮೂಲದ ಆನ್‌ಲೈನ್ ಶಿಕ್ಷಣದ ಆ್ಯಪ್ ಕಂಪನಿ ಬೈಜುಸ್ ಈಗಾಗಲೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಹೊಂದಿದೆ. ಆದರೆ ಬೈಜುಸ್‌ನಲ್ಲಿ ಚೀನಾ ಮೂಲದ ಕಂಪನಿಯ ಹೂಡಿಕೆಯೂ ಇದೆ. ಆದರೆ ಅನ್‌ಅಕಾಡೆಮಿ ಸಂಪೂರ್ಣವಾಗಿ ಭಾರತೀಯ ಒಡೆತನದ ಕಂಪನಿಯಾಗಿದೆ.

ಅನ್ ಅಕಾಡೆಮಿ

ಅನ್ ಅಕಾಡೆಮಿ

2015ರಲ್ಲಿ ರೋಮನ್ ಸೈನಿ, ಗೌರವ್ ಮುಂಜಲ್ ಮತ್ತು ಹಿಮೇಶ್ ಸಿಂಗ್ ಅವರು ಕಂಪನಿಯನ್ನು ಸ್ಥಾಪಿಸಿದರು. 2010ರಲ್ಲಿ ಯುಟ್ಯೂಬ್ ಚಾನಲ್ ಆರಂಭಿಸಲಾಯಿತು. ಸದ್ಯ 12 ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಹೊಂದಿದ್ದು, ವಿಡಿಯೋಗಳ ಮೂಲಕ ಶಿಕ್ಷಣ ಒದಗಿಸುತ್ತಿದೆ. ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಕೂಡಾ ಅನ್ ಅಕಾಡೆಮಿಯಲ್ಲಿ ಹೂಡಿಕೆ ಮಾಡಿದೆ. ಹಾಗೆ ನೋಡಿದರೆ ಟೀಂ ಇಂಡಿಯಾ ಪ್ರಾಯೋಜಕತ್ವ ಪಡೆದಿರುವ ಬೈಜುಸ್ ಕೂಡಾ ಇದೇ ರೀತಿ ಆನ್ ಲೈನ್ ಶಿಕ್ಷಣ ಒದಗಿಸುವ ವಿಡಿಯೋ ತಯಾರಿಸುತ್ತದೆ.

 ಯಾವ ಯಾವ ಸಂಸ್ಥೆಗಳು ಆಸಕ್ತಿ ಹೊಂದಿವೆ

ಯಾವ ಯಾವ ಸಂಸ್ಥೆಗಳು ಆಸಕ್ತಿ ಹೊಂದಿವೆ

ದೇಶದ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಜೊತೆಗೆ, ಟಾಟಾ ಗ್ರೂಪ್ ಸಹ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಗ್ಗೆ ಆಸಕ್ತಿ ತೋರಿಸಿದೆ. ಜಿಯೋ, ಟಾಟಾ ಮತ್ತು ಪತಂಜಲಿ ಹೊರತುಪಡಿಸಿ, ಇನ್ನೂ ಅನೇಕ ಕಂಪನಿಗಳು ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ವ್ಯವಹಾರಗಳನ್ನು ಪಡೆಯಲು ಬಯಸುತ್ತವೆ. ಇವುಗಳಲ್ಲಿ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ 11 ಮತ್ತು ಭಾರ್ತಿ ಕ್ರಿಕೆಟ್ ತಂಡಕ್ಕೆ ಜರ್ಸಿ ಪ್ರಾಯೋಜಕ ಬೈವ್ಸ್ ಸೇರಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ, ವಿವೋ ಐಪಿಎಲ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದೆ. ವಿವೋ ಟೈಟಲ್ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕವಾಗಿ 440 ಕೋಟಿ ರೂ. ನೀಡುತ್ತಿದೆ ಎಂದು ತಿಳಿದುಬಂದಿದೆ.

English summary
Education technology company Unacademy, which is already one of IPL’s sponsors, is eyeing the league’s title sponsorship rights now and is set to submit its bid to replace Chinese mobile phone company Vivo this season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X