ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಸೇಜ್ ಕಳುಹಿಸಿದ ನಂತರವೂ ವಾಟ್ಸಾಪ್‌ನಲ್ಲಿ ಎಡಿಟ್‌ ಶೀಘ್ರ ಸಾಧ್ಯ

|
Google Oneindia Kannada News

ಬೆಂಗಳೂರು, ಜೂ 1: ಅನೇಕ ಕ್ರಿಯಾತ್ಮಾಕ ಆವಿಷ್ಕಾರಗಳೊಂದಿಗೆ ಮುಂಚೂಣಿಯಲ್ಲಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್ ಇನ್ನು ಮುಂದೆ ಇನ್ನಷ್ಟು ಹೊಸ ಬದಲಾವಣೆಗಳನ್ನು ತರುತ್ತಿದೆ. ಆಂಡ್ರಾಯಿಡ್‌ ಮೊಬೈಲ್‌ ಬಳಸುತ್ತಿವ ಪ್ರತಿಯೊಬ್ಬರಲ್ಲೂ ಇಂದು ಸ್ಥಾನ ಕಂಡುಕೊಂಡಿದೆ. ಇಂದು ಜನರು ಭೌತಿಕವಾಗಿ ಮಾತನಾಡುವುದಕ್ಕಿಂತ ವಾಟ್ಸಪ್‌ ಮೂಲಕವೇ ಹೆಚ್ಚು ಮಾತನಾಡಲು ರೂಢಿಯಾಗಿಬಿಟ್ಟಿದ್ದಾರೆ.

ಮೆಸೇಜ್‌ ಕಳುಹಿಸುವುದು, ಪೋಟೋ, ವಿಡಿಯೋ, ಡಾಕ್ಯೂಮೆಂಟ್‌ ಈಗ ಮುಂದುವರಿದು ಹಣವನ್ನು ವಾಟ್ಸಪ್‌ ಮೂಲಕವೇ ಕಳುಹಿಸಲು ಸಾಧ್ಯವಾಗುತ್ತಿದೆ. ದೂರವಾಣಿ ಕರೆಗಳು ವಿಡಿಯೋ ಕರೆಗಳು ಡೇಟಾ ಬಳಕೆಯ ಎಗ್ಗಿಲ್ಲದೆ ಹೆಚ್ಚೆಚ್ಚು ಸಾಧ್ಯವಾಗುತ್ತಿದೆ. ಈಗ ವಾಟ್ಸಪ್‌ ಮತ್ತೊಂದು ಕಾಂತ್ರಿಕಾರಕ ಬದಲಾವಣೆಯನ್ನು ತರಲು ಹೊರಟಿದೆ.

ಕೊಡಗಿನಲ್ಲಿ ಹೆಲಿಪೋರ್ಟ್‌ ನಿರ್ಮಾಣ; ಏನಿದು ಯೋಜನೆ?ಕೊಡಗಿನಲ್ಲಿ ಹೆಲಿಪೋರ್ಟ್‌ ನಿರ್ಮಾಣ; ಏನಿದು ಯೋಜನೆ?

ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟ್ಟರ್‌ ಎಡಿಟ್ ಬಟನ್ ನೀಡದಿರಬಹುದು. ಆದರೆ ವಾಟ್ಸಪ್‌ ಈಗ ಶೀಘ್ರದಲ್ಲೇ ಕಳುಹಿಸಿದ ಸಂದೇಶಗಳನ್ನು ಎಡಿಟ್‌ (ಸಂಪಾದಿಸುವ) ಮಾಡುವ ಮಾಡುವ ಅವಕಾಶವನ್ನು ನೀಡುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಅನ್ನು ಪರೀಕ್ಷಿಸಲಾಗುತ್ತಿದೆ. ಪ್ರಸ್ತುತ ವಾಟ್ಸಪ್‌ನಲ್ಲಿ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೇಸೇಜ್‌ ಅನ್ನು ಮಾತ್ರ ಅಳಿಸಬಹುದು, ಆದರೆ ಸಂಪಾದಿಸಲಾಗುವುದಿಲ್ಲ. ಆದರೆ ಮುಂಬರುವ ಸೌಲಭ್ಯವು ಅವುಗಳನ್ನು ಕಳುಹಿಸಿದ ನಂತರ ಪಠ್ಯಗಳನ್ನು ಸಂಪಾದಿಸಲು ಸಾಧ್ಯವಾಗಿಸುತ್ತದೆ ಎಂದು ಹೇಳಲಾಗಿದೆ.

ಇಮೋಜಿ ತರಹದ ಸೌಲಭ್ಯ

ಇಮೋಜಿ ತರಹದ ಸೌಲಭ್ಯ

ಎಲ್ಲಾ ವಾಟ್ಸಪ್‌ ಸಂಬಂಧಿತ ಬೆಳವಣಿಗೆಗಳನ್ನು ಕಾದು ನೋಡುತ್ತಿರುವ ಅಥವಾ ಚಲನೆಯನ್ನು ಗಮನಿಸುತ್ತಿರುವ ವೆಬ್‌ಸೈಟ್ Wabetainfo ಈ ಸೌಲಭ್ಯವನ್ನು ಗುರುತಿಸಿದೆ. ನಾವು ಜನರಿಗೆ ಸಂದೇಶ ಕಳುಹಿಸುವ ರೀತಿಯಲ್ಲಿ ವಾಟ್ಸಪ್‌ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಲು ಹೊರಟಿದೆ. ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಇಮೋಜಿ ತರಹದ ಸೌಲಭ್ಯವನ್ನು ಬಿಡುಗಡೆ ಮಾಡಿದ ನಂತರ ವಾಟ್ಸಪ್‌ ಈಗ ಸಂದೇಶಗಳನ್ನು ಕಳುಹಿಸಿದ ನಂತರವೂ ಅವುಗಳನ್ನು ಸಂಪಾದಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ವಾಟ್ಸಾಪ್ ಐದು ವರ್ಷಗಳ ಹಿಂದೆ ಈ ಸೌಲಭ್ಯವನ್ನು ನೀಡಲು ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಆದರೆ ಈ ವಿಚಾರ ಟ್ವಿಟರ್‌ನಲ್ಲಿ ವರದಿಯಾದ ಕೂಡಲೇ ಅದನ್ನು ವಾಟ್ಸಪ್‌ ತಿರಸ್ಕರಿಸಿದೆ. ಆದಾಗ್ಯೂ ಅಂತಿಮವಾಗಿ ಐದು ವರ್ಷಗಳ ವಿರಾಮದ ನಂತರ ವಾಟ್ಸಪ್‌ ಮತ್ತೆ ಎಡಿಟ್‌ ಮಾಡುವ ಫೀಚರ್‌ನಲ್ಲಿ ಕೆಲಸ ಮಾಡಲು ಯೋಚಿಸಿದೆ ಎನ್ನಲಾಗಿದೆ.

ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ ಸಾಧ್ಯ

ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ ಸಾಧ್ಯ

ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿರುವ ಎಡಿಟ್ ಮಾಡಬಹುದಾದ ಸೌಲಭ್ಯದ ಸ್ಕ್ರೀನ್‌ಶಾಟ್ ಅನ್ನು Wabetainfo ಹಂಚಿಕೊಂಡಿದೆ. ನೀವು ಕಳುಹಿಸಿದ ಸಂದೇಶವನ್ನು ನೀವು ಕ್ಲಿಕ್‌ ಮಾಡಿದಾಗ ಸ್ಕ್ರೀನ್‌ನಲ್ಲಿ ಸಂಪಾದನೆ ಆಯ್ಕೆಯನ್ನು ತೋರಿಸುತ್ತದೆ. ಸಂದೇಶಗಳನ್ನು ಕಾಫಿ ಮಾಡಿಕೊಳ್ಳಲು ಮತ್ತು ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ ಬಳಕೆದಾರರು ಎಡಿಟ್ ಆಯ್ಕೆಯನ್ನು ಸಹ ಪಡೆಯುತ್ತಾರೆ ಎಂದು ವೆಬ್‌ಸೈಟ್‌ ತಿಳಿಸಿದೆ. ಎಡಿಟ್ ಬಟನ್ ಅನ್ನು ಆಯ್ಕೆ ಮಾಡಿದ ನಂತರ ನೀವು ಅದನ್ನು ಕಳುಹಿಸಿದ ನಂತರವೂ ನಿಮ್ಮ ಸಂದೇಶದಲ್ಲಿ ಯಾವುದೇ ಮುದ್ರಣದೋಷ ಅಥವಾ ಕಾಗುಣಿತ ದೋಷವನ್ನು ಸರಿಪಡಿಸಬಹುದು. ಪ್ರಸ್ತುತ ಸೆಟಪ್ ಬಳಕೆದಾರರಿಗೆ ಸಂದೇಶವನ್ನು ಅಳಿಸಲು ಮಾತ್ರ ಅನುಮತಿಸುತ್ತದೆ. ನೀವು ಅದನ್ನು ಕಳುಹಿಸಲು ಅಥವಾ ಸಂಪಾದಿಸಲು ಸಾಧ್ಯವಿಲ್ಲವಾಗಿದೆ.

ಪಠ್ಯ ವಾಪಸ್ ಪಡೆಯುತ್ತೇನೆ ಎಂದ ಸಾಹಿತಿಗಳೊಂದಿಗೆ ಚರ್ಚಿಸುತ್ತೇನೆ: ಸಿಎಂಪಠ್ಯ ವಾಪಸ್ ಪಡೆಯುತ್ತೇನೆ ಎಂದ ಸಾಹಿತಿಗಳೊಂದಿಗೆ ಚರ್ಚಿಸುತ್ತೇನೆ: ಸಿಎಂ

ವಿಂಡೋದ ವಿವರಗಳು ಸದ್ಯಕ್ಕೆ ತಿಳಿದಿಲ್ಲ

ವಿಂಡೋದ ವಿವರಗಳು ಸದ್ಯಕ್ಕೆ ತಿಳಿದಿಲ್ಲ

ಸಂಪಾದಿತ ಸಂದೇಶಗಳ ಹಿಂದಿನ ಆವೃತ್ತಿಗಳನ್ನು ಪರಿಶೀಲಿಸಲು ಬಹುಶಃ ಎಡಿಟ್‌ ಹಿಸ್ಟರಿ ಇರುವುದಿಲ್ಲ. ಆದರೆ ಈ ಹೊಸ ಅವಕಾಶವು ಅಭಿವೃದ್ಧಿ ಹಂತದಲ್ಲಿರುವುದರಿಂದ ಸೌಲಭ್ಯವನ್ನು ಬಿಡುಗಡೆ ಮಾಡುವ ಮೊದಲು ಅವರ ಯೋಜನೆಗಳು ಬದಲಾಗಬಹುದು. ಹೆಚ್ಚುವರಿಯಾಗಿ ಜನರು ತಮ್ಮ ಸಂದೇಶಗಳನ್ನು ಎಡಿಟ್ ಮಾಡಲು ಅನುಮತಿಸುವ ಸಮಯದ ವಿಂಡೋದ ವಿವರಗಳು ಸದ್ಯಕ್ಕೆ ತಿಳಿದಿಲ್ಲ. ಆದರೆ ಸುದ್ದಿ ಇದ್ದಾಗ ನಾವು ತಕ್ಷಣ ನಿಮಗೆ ತಿಳಿಸುತ್ತೇವೆ ಎಂದು Wabetainfo ವರದಿ ಹೇಳಿದೆ.

ಸ್ಥಿರವಾದ ನವೀಕರಣಕ್ಕಾಗಿ ಸೌಲಭ್ಯ

ಸ್ಥಿರವಾದ ನವೀಕರಣಕ್ಕಾಗಿ ಸೌಲಭ್ಯ

ಆಂಡ್ರಾಯ್ಡ್‌ಗಾಗಿ ವಾಟ್ಸಪ್‌ ಬೀಟಾದಲ್ಲಿ ಈ ಸೌಲಭ್ಯವನ್ನು ಪರೀಕ್ಷಿಸಲಾಗುತ್ತಿದೆ. ಆದರೆ ಐಒಎಸ್‌ ಮತ್ತು ಡೆಸ್ಕ್‌ಟಾಪ್‌ಗಾಗಿ ವಾಟ್ಸಪ್‌ ಬೀಟಾಗೆ ಅದೇ ಸೌಲಭ್ಯವನ್ನು ತರುವಲ್ಲಿ ವಾಟ್ಸಪ್‌ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ. ಆದಾಗ್ಯೂ, ಈ ಸೌಲಭ್ಯವು ಅಭಿವೃದ್ಧಿಯ ಹಂತದಲ್ಲಿರುವುದರಿಂದ ಸ್ಥಿರವಾದ ನವೀಕರಣಕ್ಕಾಗಿ ಯಾವಾಗ ಸಿದ್ಧವಾಗಲಿದೆ ಎಂಬುದನ್ನು ಖಚಿತಪಡಿಸಲಾಗುವುದಿಲ್ಲ. ಆದರೆ ವಾಟ್ಸಪ್‌ ಅದನ್ನು ಹೆಚ್ಚಿನ ಬೀಟಾ ಬಳಕೆದಾರರಿಗೆ ಶೀಘ್ರದಲ್ಲೇ ಹೊರತರಬಹುದು ಎಂದು ವರದಿ ಹೇಳುತ್ತದೆ.

Recommended Video

ಹೆಚ್ಚು ಸಿಕ್ಸರ್ ಬಾರ್ಸಿರೋ ಆಟಗಾರ ಇವ್ರೆ ನೋಡಿ!! | OneIndia Kannada

English summary
Popular social media Twitter may not offer an edit button. But WhatsApp is now giving you the opportunity to edit and send messages soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X