• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೆಕೆ ಟೈಯರ್ಸ್ ಹಾಗೂ 8 ಸಂಸ್ಥೆಗಳ ಬ್ಯಾಂಕ್ ಖಾತೆ ಸ್ಥಗಿತ

|

ಮುಂಬೈ, ಆ. 13: ಜೆಕೆ ಟೈಯರ್ಸ್ ಸೇರಿದಂತೆ 8 ಬ್ಯಾಂಕ್ ಖಾತೆಗಳ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)ಗೆ ಜಾರಿ ನಿರ್ದೇಶನಾಲಯವು ಸೂಚಿಸಿದೆ. ಈ ಸಂಸ್ಥೆಗಳಿಂದ ಮನಿ ಲಾಂಡ್ರಿಂಗ್ (ಪಿಎಂಎಲ್ ಎ) ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

   DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

   ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಜುಲೈ 13ರಂದು ದೆಹಲಿಯ ಎಸ್ಬಿಐ ಕನಕ್ಟ್ ಪ್ಲೇಸ್ ಶಾಖೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಒಟ್ಟು 9 ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಸೂಚಿಸಿದ್ದಾರೆ.

   ಈ ಸಂಸ್ಥೆಯ ವ್ಯಕ್ತಿಗಳ ಮೇಲೆ ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ 2002 ಅಡಿಯಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದ್ದು, ಪಿಎಂಎಲ್ಎ ಸೆಕ್ಷನ್ 17ರಂತೆ ನಿಮ್ಮ ಶಾಖೆಯ ಬ್ಯಾಂಕ್ ನಲ್ಲಿರುವ ಖಾತೆಗಳ ವ್ಯವಹಾರವನ್ನು ಸ್ಥಗಿತಗೊಳಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.

   ಜೆಕೆ ಟಯರ್ಸ್ ಅಂಡ್ ಇಂಡಸ್ಟ್ರೀಸ್, ಹ್ಯಾಮಿಲ್ಟನ್ ಹೌಸ್ ವೇರ್ಸ್ ಪ್ರೈ ಲಿ. ಕೆಪಿ ಶಾಂಘ್ವಿ ಅಂಡ್ ಸನ್ಸ್, ನ್ಯಾನ್ಸಿ ಕ್ರಾಫ್ಟ್ ಪ್ರೈ ಲಿ, ಈಸ್ಟ್ ಮನ್ ಇಂಡಸ್ಟ್ರೀಸ್ ಲಿ; ಆರ್ಬಿಟ್ ಎಕ್ಸ್ ಪೋರ್ಟ್ ಲಿ; ಭಾರತ್ ಫ್ಯಾಷನ್ಸ್ ಅಂಡ್ ಅಪರೇಲ್ಸ್; ಶೀನುಜ್ ಅಂಡ್ ಕೊ ಅಂದ್ ಆರ್ ಎಸ್ ಡಬ್ಲ್ಯೂ ಎಂ ಲಿಮಿಟೆಡ್ ಬ್ಯಾಂಕ್ ಖಾತೆಗಳ ವ್ಯವಹಾರ ಸ್ಥಗಿತಗೊಳಿಸಲಾಗಿದೆ.

   ಬ್ರೆಜಿಲ್ ಸರ್ಕಾರವು ಭಾರತ ಸರ್ಕಾರವನ್ನು ಸಂಪರ್ಕಿಸಿ ಒಟ್ಟು 67 ಬ್ಯಾಂಕ್ ಖಾತೆಗಳ ವಿವರ, ವ್ಯವಹಾರದ ಬಗ್ಗೆ ನಿಗಾ ಇಡುವಂತೆ ಕೋರಿತ್ತು. ಈ ಖಾತೆದಾರರಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ 9 ಖಾತೆಗಳು ಮಾತ್ರ ಸ್ಥಗಿತಗೊಂಡಿವೆ. ಈ ಬೆಳವಣಿಗೆ ಕುರಿತಂತೆ ಜಾರ್ ನಿರ್ದೇಶನಾಲಯ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಬ್ರೆಜಿಲ್ ಸರ್ಕಾರದ ಮನವಿ ಮೇರೆಗೆ ಕಾರ್ಯ ನಿರ್ವಹಿಸಿದೆ.

   English summary
   The Enforcement Directorate (ED) last month wrote a letter to the State Bank of India (SBI) seeking to freeze nine accounts maintained by the bank including J K Tyre and Industries.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X