ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಅಕ್ರಮ ಹಣ ವರ್ಗಾವಣೆ, ವಿವೋ ಕಂಪನಿ ಮೇಲೆ ಇಡಿ ದಾಳಿ

|
Google Oneindia Kannada News

ನವದೆಹಲಿ, ಜುಲೈ 05; ಅಕ್ರಮ ಹಣ ವರ್ಗಾವಣೆ ಶಂಕೆಯ ಆಧಾರದ ಮೇಲೆ ವಿವೋ ಮೊಬೈಲ್ ಉತ್ಪಾದಕ ಕಂಪನಿ ಹಾಗೂ ಅದಕ್ಕೆ ಪರೋಕ್ಷವಾಗಿ ಸಂಬಂಧಪಟ್ಟ ಕಂಪನಿಗಳ ಮೇಲೆ ಮೇಲೆ ಇಡಿ ದಾಳಿ ನಡೆದಿದೆ. ದೇಶದ 44 ಪ್ರದೇಶಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಮಂಗಳವಾರ ಇಡಿ ಅಧಿಕಾರಿಗಳು ಚೀನಾದ ಮೊಬೈಲ್ ಉತ್ಪಾದಕ ಕಂಪನಿ ವಿವೋಗೆ ಸೇರಿದ 44 ಪ್ರದೇಶಗಳ ಮೇಲೆ ದಾಳಿ ಮಾಡಿದ್ದಾರೆ. ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ದಾಳಿ ನಡೆಸಿದ್ದರು.

8.5 ಕೋಟಿ ರೂ. ಬೇನಾಮಿ ವಹಿವಾಟು: ಡಿಕೆ ವಿರುದ್ಧ ಇಡಿ ಕೇಸಿನ ಮೊದಲ ವಿಚಾರಣೆ8.5 ಕೋಟಿ ರೂ. ಬೇನಾಮಿ ವಹಿವಾಟು: ಡಿಕೆ ವಿರುದ್ಧ ಇಡಿ ಕೇಸಿನ ಮೊದಲ ವಿಚಾರಣೆ

ಆದಾಯ ತೆರಿಗೆ ಇಲಾಖೆ ದಾಳಿಯ ವರದಿ ಬಳಿಕ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಕಲಿ ಷೇರುದಾರರನ್ನು ತೋರಿಸಿ ಹಣದ ವಿದೇಶಿ ವಿನಿಮಯ ಮಾಡಲಾಗಿದೆ ಎಂಬ ಶಂಕೆ ಇದೆ.

Breaking News: ಆಸ್ಪತ್ರೆಯಿಂದ ಹೊರ ಬಂದ ಸೋನಿಯಾ, ಇನ್ನು 'ಇಡಿ' ವಿಚಾರಣೆ ಸಮಯ!Breaking News: ಆಸ್ಪತ್ರೆಯಿಂದ ಹೊರ ಬಂದ ಸೋನಿಯಾ, ಇನ್ನು 'ಇಡಿ' ವಿಚಾರಣೆ ಸಮಯ!

ED Raid Against Chinese Phone Maker Vivo

ಜಾರಿ ನಿರ್ದೇಶನಾಲಯದ ಎಲ್ಲೆಲ್ಲಿ ದಾಳಿ ಮಾಡಿದೆ, ದಾಳಿಯ ನಿಖರವಾದ ಕಾರಣದ ಬಗ್ಗೆ ವಿವೋ ಕಂಪನಿ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 44 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ದಾಖಲೆಗಳ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

 ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ ಪಾಕಿಸ್ತಾನದ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯ ಚೀನಾ ವಶಕ್ಕೆ? ಅನಾಥ ಕೂಸಾಗಿದೆ ಜಿಬಿ

ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವೋ ಸೇರಿದಂತೆ ಚೀನಾದ ಸ್ಮಾರ್ಟ್‌ ಫೋನ್ ತಯಾರಿಕಾ ಕಂಪನಿಗಳ ಕಚೇರಿ, ಕಂಪನಿಯ ಅಂಗ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಆಗ ಸುಮಾರು 500 ಕೋಟಿ ರೂ. ಆದಾಯಕ್ಕೆ ಸರಿಯಾದ ದಾಖಲೆ ಲಭ್ಯವಾಗಿರಲಿಲ್ಲ ಎಂಬ ಮಾಹಿತಿ ಇದೆ. ಇದೇ ಮಾಹಿತಿಯ ಆಧಾರದ ಮೇಲೆ ಈಗ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ.

Recommended Video

Bangaloreನ BTM Layout ನಲ್ಲಿ ದೊಡ್ಡ ಮರ ಉರುಳಿ ಬಿದ್ದ ಭಯಾನಕ ದೃಶ್ಯ ಇಲ್ಲಿದೆ | *Cricket | OneIndia Kannada

English summary
On July 5th Enforcement Directorate (ED) conducted raid on 44 place of Chinese phone maker Vivo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X