ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿಗೆ ಸೇರಿದ ದುಬೈ ಆಸ್ತಿ, ಬೆಂಜ್ ಕಾರು ವಶಕ್ಕೆ

|
Google Oneindia Kannada News

ನವದೆಹಲಿ, ಜುಲೈ 12: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಅವರ ಬ್ಯಾಂಕ್ ಖಾತೆ ವಶಕ್ಕೆ ಪಡೆದ ಬಳಿಕ ಮತ್ತೊಬ್ಬ ಆರೋಪಿ ಮೆಹುಲ್ ಚೋಕ್ಸಿ ಅವರಿಗೆ ಸಂಬಂಧಿಸಿದ ಆಸ್ತಿ, ವಸ್ತುಗಳನ್ನು ಜಪ್ತಿ ಕಾರ್ಯವನ್ನು ಜಾರಿ ನಿರ್ದೇಶನಲಯವು ಮುಂದುವರೆಸಿದೆ.

ಸ್ವಿಸ್ ಬ್ಯಾಂಕಿನ ನಾಲ್ಕು ಖಾತೆಗಳು ಜಪ್ತಿಯಾಗಿತ್ತು. ಈಗ ಮೋದಿ ಅವರ ಸೋದರಿಗೆ ಸೇರಿದ ಸಿಂಗಪುರದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ED attaches Mehul Choksis Dubai properties, Mercedes car worth Rs 24.77 crore

ದುಬೈನಲ್ಲಿರುವ ಆಸ್ತಿ ವಶಕ್ಕೆ: ಚೋಕ್ಸಿಗೆ ಸೇರಿದ ವಾಣಿಜ್ಯ ಕಟ್ಟಡ, ಮರ್ಸಿಡೀಸ್ ಬೆಂಜ್ ಕಾರು, ಬ್ಯಾಂಕ್ ಖಾತೆಗಳ ಠೇವಣಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ. ಜಪ್ತಿಯಾದ ಆಸ್ತಿ ಮೌಲ್ಯ 24.77 ಕೋಟಿ ರು ಎಂದು ಅಂದಾಜಿಸಲಾಗಿದೆ.

ಪಿಎನ್ ಬಿ ಹಗರಣ: ಸ್ವಿಸ್ ಬ್ಯಾಂಕ್ ನಂತರ ಸಿಂಗಪುರ ಬ್ಯಾಂಕ್ ಖಾತೆ ಜಪ್ತಿಪಿಎನ್ ಬಿ ಹಗರಣ: ಸ್ವಿಸ್ ಬ್ಯಾಂಕ್ ನಂತರ ಸಿಂಗಪುರ ಬ್ಯಾಂಕ್ ಖಾತೆ ಜಪ್ತಿ

ಮನಿಲಾಂಡ್ರಿಂಗ್ ಕಾಯ್ದೆ ಉಲ್ಲಂಘನೆ ಮಾಡಿರುವ ಚೋಕ್ಸಿ ಹಾಗೂ ನೀರವ್ ಮೋದಿ ಅವರಿಗೆ ಸಂಗ್ರಹಿತ ಆಸ್ತಿ ಮೌಲ್ಯ 2,543.7 ಕೋಟಿ ರು ದಾಟುತ್ತದೆ. ಸುಮಾರು 13,000 ಕೋಟಿ ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಗಳನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಸೇರಿದಂತೆ ಭಾರತದ ತನಿಖಾ ಸಂಸ್ಥೆಗಳು ಯತ್ನಿಸುತ್ತಿವೆ.

ಭಾರತದಿಂದ ಪರಾರಿಯಾಗಿ ಆಂಟಿಗುವಾದ ಪೌರತ್ವ ಪಡೆದುಕೊಂಡಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲು ತನಿಖಾ ಸಂಸ್ಥೆಗಳು ಸತತ ಪ್ರಯತ್ನ ನಡೆಸುತ್ತಿವೆ, ಇದರ ಭಾಗವಾಗಿ ಭಾರತದ ಸಂಸ್ಥೆಗಳು, ಅಧಿಕಾರಿಗಳು ಆಂಟಿಗುವಾದ ಮೇಲೆ ಸತತ ಒತ್ತಡ ಹೇರಿದ್ದವು. ಅದಕ್ಕೆ ಮಣಿದಿರುವ ಅಲ್ಲಿನ ಪ್ರಧಾನಿ ಗ್ಯಾಸ್ಟನ್ ಬ್ರೌನ್, ಚೋಕ್ಸಿಯ ವಾಸದ ಹಕ್ಕನ್ನು ರದ್ದುಗೊಳಿಸಲು ಒಪ್ಪಿಕೊಂಡಿದ್ದಾರೆ.

English summary
The Enforcement Directorate (ED) has attached properties worth Rs. 24 crore belonging to diamond trader Mehul Choksi, accused in the over Rs 13,000 crore PNB loan fraud and money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X