• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಸಿಐಸಿಐ ಹಗರಣ: ಮಾಜಿ ಸಿಇಒ ಮನೆ ಮೇಲೆ ದಾಳಿ, ಎಷ್ಟು ಆಸ್ತಿ ವಶ?

|

ಮುಂಬೈ, ಜನವರಿ 10: ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೊಚ್ಚಾರ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಸುಮಾರು 2,810 ಕೋಟಿ ರು ಮೌಲ್ಯದ ಐಸಿಐಸಿಐ-ವಿಡಿಯೋಕಾನ್ ಹಗರಣದ ಆರೋಪಿ ಚಂದಾ ಕೊಚ್ಚಾರ್ ಮನೆಯಲ್ಲಿ ದಾಳಿ ಮೇಲೆ ಸಿಕ್ಕ ಮೊತ್ತ 78 ಕೋಟಿ ರು ಮಾತ್ರ ಎಂದು ತಿಳಿದು ಬಂದಿದೆ.

ಐಸಿಐಸಿಐ ಬ್ಯಾಂಕ್ 2,810 ಕೋಟಿ ಎನ್ ಪಿಎ ಕೇಸಿನ ಥ್ರಿಲ್ಲಿಂಗ್ ಡೀಟೇಲ್ಸ್!

ದಕ್ಷಿಣ ಮುಂಬೈನಲ್ಲಿರುವ ಸುಮಾರು 3.8 ಕೋಟಿ ರು ಮೌಲ್ಯದ ಅಪಾರ್ಟ್ಮೆಂಟ್ ಹಾಗೂ ಚಂದಾ ಅವರ ಪತಿ, ಸಹ ಆರೋಪಿ ದೀಪಕ್ ಗೆ ಸೇರಿರುವ ಕಂಪನಿ ಸ್ವತ್ತಿನ ಮೇಲೂ ದಾಳಿ ನಡೆಸಲಾಗಿದೆ. ನುಪವರ್ ರೆನೆವಬಲ್ಸ್ ಹಾಗೂ ಸಬ್ಸಿಡಿ ಸಂಸ್ಥೆ ವಿಂಡ್ ಫರ್ಮ್ಸ್, ಎಚಾಂದಾ ಊರ್ಜಾ ಸಂಸ್ಥೆ, ಪೆಸಿಫಿಕ್ ಕ್ಯಾಪಿಟಲ್ ಸರ್ವೀಸಸ್ ಗೆ ಸೇರಿದ 74 ಕೋಟಿ ರು, 10.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಸ್ವತ್ತಿನ ಮಾರುಕಟ್ಟೆ ಮೌಲ್ಯ 800 ಕೋಟಿ ರು ದಾಟಬಹುಹು ಎಂದು ಅಂದಾಜಿಸಲಾಗಿದೆ.

2009 ರಿಂದ 2016ರ ಅವಧಿಯಲ್ಲಿ ಈ ಕ್ವಾಲಿಟಿ ಟೆಕ್ನೋ ಅಡ್ವೈಸರ್ಸ್ ಪ್ರೈವಟ್ ಒಡೆತನದ ಫ್ಲಾಟ್ ವಿಡಿಯೋಕಾನ್ ಅಧೀನದಲ್ಲಿತ್ತು. ಈ ಅವಧಿಗೆ ಯಾವುದೇ ಬಾಡಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ. ನಂತರ ದೀಪಕ್ ಕೊಚ್ಚಾರ್ ವಶಕ್ಕೆ ಬಂದಿದೆ.

ಈ ಪ್ರಕರಣದ ಪ್ರಮುಖ ಆರೋಪಿಗಳು

ಈ ಪ್ರಕರಣದ ಪ್ರಮುಖ ಆರೋಪಿಗಳು

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ವಿಚಾರಣೆ ಇನ್ನು ಜಾರಿಯಲ್ಲಿದೆ

ಕೊಚ್ಚಾರ ಕುಟುಂಬ ಹಾಗೂ ಇನ್ನಿತರ ಆರೋಪಿಗಳ ಮನೆ, ಕಚೇರಿ ಮೇಲೆ ಇತ್ತೀಚೆಗೆ ದಾಳಿ ನಡೆಸಿ, ಅನೇಕ ದಾಖಲೆ ಹಾಗೂ ಆಸ್ತಿ ಪಾಸ್ತಿ ಜಪ್ತಿ ಮಾಡಿರುವ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಇನ್ನೊಂದು ಸುತ್ತಿನ ದಾಳಿ ನಡೆಸುವ ಸುಳಿವು ನೀಡಿದ್ದಾರೆ. ಸದ್ಯ, ಚಂದಾ ಕೊಚ್ಚಾರ್ ಅವಧಿಯಲ್ಲಿ ಅಕ್ರಮವಾಗಿ ಮಂಜೂರು ಮಾಡಿದ ಸಾಲದ ಮೊತ್ತದ ಬಗ್ಗೆ ತನಿಖೆ ಚುರುಕುಗೊಂಡಿದೆ.

500 ಕೋಟಿ ರ್ ರು ಗೂ ಅಧಿಕ ಮೊತ್ತ ಕಿಕ್ ಬ್ಯಾಕ್

500 ಕೋಟಿ ರ್ ರು ಗೂ ಅಧಿಕ ಮೊತ್ತ ಕಿಕ್ ಬ್ಯಾಕ್

ಬ್ಯಾಂಕ್ ನ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್ ಗೆ ಸುಮಾರು 3,250 ಕೋಟಿರೂ.ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರದ ಹಗರಣ ಇದಾಗಿದೆ. ಐಸಿಐಸಿಐನ ಮಾಜಿ ಎಂಡಿ ಚಂದಾ ಕೊಚ್ಚಾರ್ ಹಾಗೂ ಕುಟುಂಬಕ್ಕೆ ಕಿಕ್ ಬ್ಯಾಕ್ ರೂಪದಲ್ಲಿ 500 ಕೋಟಿ ರು ಗೂ ಅಧಿಕ ಮೊತ್ತ ಸಿಕ್ಕಿದೆ. ಇದು ಸದ್ಯದ ಲೆಕ್ಕಾಚಾರವಾಗಿದ್ದು, ಕಿಕ್ ಬ್ಯಾಕ್ ಮೊತ್ತ ಇನ್ನು ಅಧಿಕವಾಗಿರುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

ಸಾಲ ಮಂಜೂರಾತಿಯಲ್ಲಿ ಅಕ್ರಮ

ಸಾಲ ಮಂಜೂರಾತಿಯಲ್ಲಿ ಅಕ್ರಮ

ಧೂತ್ ಹಾಗೂ ಇದೇ ಚಂದಾ ಕೊಚ್ಚರ್ ಪತಿ ದೀಪಕ್ ಕೊಚ್ಚರ್ ಮತ್ತಿಬ್ಬರು ಸಂಬಂಧಿಕರ ಜತೆ ಸೇರಿ 2008ರಲ್ಲಿ ಆರಂಭಿಸಿದ್ದ ಕಂಪೆನಿ. ಆ ನಂತರ ಈ ಕಂಪೆನಿಯ ಮಾಲೀಕತ್ವವನ್ನು ಕೊಚ್ಚರ್ ಗೆ ಸೇರಿದ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಈ ಪ್ರಕ್ರಿಯೆ ನಡೆಯುವ ಆರು ತಿಂಗಳ ಮುಂಚೆ ಐಸಿಐಸಿಐ ಬ್ಯಾಂಕ್ ನಿಂದ ವಿಡಿಯೋಕಾನ್ ಗ್ರೂಪ್ ಗೆ 3,250 ಕೋಟಿ ರುಪಾಯಿ ಸಾಲ ಮಂಜೂರಾಗಿದ್ದು, 2017ರಲ್ಲಿ ಆ ಸಾಲದ ಪೈಕಿ ಹತ್ತಿರ ಹತ್ತಿರ 2,810 ಕೋಟಿ ರುಪಾಯಿಯನ್ನು ನಾನ್ ಪರ್ಫಾಮಿಂಗ್ ಅಸೆಟ್ (ಎನ್ ಪಿಎ) ಎಂದು ಘೋಷಿಸಿದ್ದು, ಮರು ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.

ಐಸಿಐಸಿಐ ಬ್ಯಾಂಕ್ ನ ಅಧ್ಯಕ್ಷ ಎಂ.ಕೆ.ಶರ್ಮಾ ಹೇಳಿಕೆ

ಐಸಿಐಸಿಐ ಬ್ಯಾಂಕ್ ನ ಅಧ್ಯಕ್ಷ ಎಂ.ಕೆ.ಶರ್ಮಾ ಹೇಳಿಕೆ

ಐಸಿಐಸಿಐ ಬ್ಯಾಂಕ್ ನ ಅಧ್ಯಕ್ಷ ಎಂ.ಕೆ.ಶರ್ಮಾ ಬಯಲು ಮಾಡಿರುವ ಪ್ರಕಾರ, 3,250 ಕೋಟಿ ರುಪಾಯಿ ಸಾಲ ಮಂಜೂರು ಮಾಡುವ ಸಮಿತಿಯಲ್ಲಿ ಕೊಚ್ಚರ್ ಕೂಡ ಇದ್ದರು. ಆದರೆ ಚಂದಾ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶ ಇರಲಿಲ್ಲ ಎಂದು ಬ್ಯಾಂಕ್ ನ ಮಂಡಳಿ ಸ್ಪಷ್ಟವಾಗಿ ಹೇಳಿತು. ಪ್ರಾಥಮಿಕ ವಿಚಾರಣೆಗೆ ಸಿಬಿಐನಿಂದ ಮಾರ್ಚ್ ನಲ್ಲೇ ಪ್ರಕರಣ ದಾಖಲಿಸಿಕೊಳ್ಳುವಾಗ ದೀಪಕ್ ಹಾಗೂ ಧೂತ್ ಹೆಸರನ್ನು ಸೇರಿಸಲಾಯಿತೇ ವಿನಾ ಚಂದಾ ಹೆಸರು ಆರಂಭದಲ್ಲಿ ತೆಗೆದುಕೊಳ್ಳಲಿಲ್ಲ.

English summary
The Enforcement Directorate (ED) on January 10 attached assets of former ICICI Bank CEO Chanda Kochhar and her family, as per a CNBC-TV18 report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X