• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರು, ಸ್ಟಾರ್ಟ್‌ ಅಪ್‌ಗಳಿಗೆ ಆರ್‌ಬಿಐನಿಂದ ಸುಲಭ ಸಾಲದ ಟಾನಿಕ್

|

ನವದೆಹಲಿ, ಸೆಪ್ಟೆಂಬರ್ 05: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಬ್ಯಾಂಕಿಂಗ್ ಕ್ಷೇತ್ರದ ಆದ್ಯತೆಯ ವಲಯದ ಸಾಲ (ಪಿಎಸ್‌ಎಲ್) ವಿಭಾಗದ ಅಡಿಯಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಹಣಕಾಸು ಒದಗಿಸಲು ಕ್ರಮ ಕೈಗೊಂಡಿದೆ. ಕಡಿಮೆ ಆದ್ಯತೆಯ ವಲಯ ಹೊಂದಿರುವ ಜಿಲ್ಲೆಗಳಿಗೆ ಹೆಚ್ಚಿನ ಸಾಲದ ಹರಿವನ್ನು ಪ್ರಸ್ತಾಪಿಸಿದೆ.

ಆದ್ಯತೆಯ ವಲಯದ ಸಾಲದ ಹರಿವಿನ ಪ್ರಾದೇಶಿಕ ಅಸಮಾನತೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಆರ್‌ಬಿಐ ತನ್ನ ಪರಿಷ್ಕೃತ ಆದ್ಯತೆಯ ವಲಯದ ಸಾಲ (ಪಿಎಸ್‌ಎಲ್) ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಅಂದರೆ ಇದರರ್ಥ ಪ್ರಾಥಮಿಕ ವಲಯಗಳಿಗೆ ಸಾಲ ನೀಡುವುದಾಗಿದೆ.

2019-20ರಲ್ಲಿ ಬರೋಬ್ಬರಿ 1.85 ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ವಂಚನೆ: ಆರ್‌ಬಿಐ

ಆರ್‌ಬಿಐನ ಈ ಮಾರ್ಗಸೂಚಿಗಳಲ್ಲಿ, ಹೊಸ ವಲಯಗಳು ಮತ್ತು ರೈತರಿಗೆ ಸುಲಭ ಸಾಲ ನೀಡಲು ಒತ್ತು ನೀಡಲಾಗಿದೆ. ಆರ್ಥಿಕ ವಾತಾವರಣವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಈ ಕ್ಷೇತ್ರಗಳ ಜೊತೆಗೆ ಇತರೆ ಕೆಲವು ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಬ್ಯಾಂಕ್‌ ನಿಂದ ಸ್ಟಾರ್ಟ್ ಅಪ್ ಗಳಿಗೆ ನೀಡಲಾಗುವ ಸುಮಾರು 50 ಕೋಟಿ ರೂ.ವರೆಗಿನ ಸಾಲಗಳು ಆದ್ಯತೆಯ ವಲಯಕ್ಕೆ ನೀಡಲಾಗುವ ಸಾಲಗಳ ವ್ಯಾಪ್ತಿಗೆ ಬರಲಿದೆ. ಗ್ರಿಡ್ ಸಂಪರ್ಕಿತ ಸೌರ ಪಂಪ್‌ಗಳನ್ನು ಅಳವಡಿಸಲು ರೈತರಿಗೆ ನೀಡಲಾಗುವ ಸಾಲವೂ ಕೂಡ ಇದರ ಅಡಿಯಲ್ಲಿ ಬರಲಿದೆ.

ಕಂಪ್ರೆಸ್ಸ್ಡ್ ಬಯೋ ಗ್ಯಾಸ್ ಸ್ಥಾವರವನ್ನು ಸ್ಥಾಪಿಸಲು ರೈತರು ಸಾಲವನ್ನು ತೆಗೆದುಕೊಂಡರೆ, ಅದು ಬ್ಯಾಂಕುಗಳ ಆದ್ಯತೆಯ ವರ್ಗದ ಸಾಲಗಳ ಅಡಿ ಬರಲಿದೆ. ರೈತ ಉತ್ಪಾದಕ ಸಂಸ್ಥೆ ಮತ್ತು ರೈತ ಉತ್ಪಾದಕ ಕಂಪನಿಗಳಿಗೆ 5 ಕೋಟಿ ರೂ.ವರೆಗಿನ ಸಾಲಗಳು ಆದ್ಯತೆಯ ವಲಯದ ಸಾಲಕ್ಕೆ ಒಳಪಡುತ್ತವೆ. ಬೆಳೆ ಸಾಲ, ಯಂತ್ರೋಪಕರಣಗಳಿಗೆ ಸಾಲ, ಸಿಂಪಡನೆ, ಕೊಯ್ಲು ಮತ್ತು ಗ್ರೇಡಿಂಗ್ ನಂತಹ ಚಟುವಟಿಕೆಗಳಿಗೆ ಪ್ರತಿ ಸಂಸ್ಥೆಗೆ 2 ಕೋಟಿ ರೂ.ಗಳ ಸಾಲವನ್ನು ಈ ವರ್ಗದಲ್ಲಿ ಪರಿಗಣಿಸಲಾಗುವುದು.

ನವೀಕರಿಸಬಹುದಾದ ಇಂಧನಕ್ಕೂ, ಇದುವರೆಗೆ ನೀಡಲಾಗುತ್ತಿದ್ದ 15 ಕೋಟಿ ರೂಪಾಯಿಗಳ ಸಾಲದ ಮಿತಿಯನ್ನು 30 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಗೆ ಯಾರಾದರೂ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಂಡರೆ ಅವರಿಗೆ 5 ಕೋಟಿ ರೂಪಾಯಿ ಬದಲಾಗಿ 10 ಕೋಟಿ ರೂಪಾಯಿಗಳವರೆಗೆ ನೀಡಲಾಗುವ ಸಾಲವನ್ನು ಆದ್ಯತೆಯ ಸಾಲ ವಿಭಾಗದ ಅಡಿಯಲ್ಲಿ ಪರಿಗಣಿಸಲಾಗುವುದು.

ಇದುವರೆಗೆ ಬ್ಯಾಂಕ್ ಗಳು ಯಾವ ಜಿಲ್ಲೆಗಳಲ್ಲಿ ಆದ್ಯತೆ ಶ್ರೇಣಿಯ ಸಾಲವನ್ನು ಕಡಿಮೆ ಹಂಚಿಕೆ ಮಾಡುತ್ತಿದ್ದವೋ, ಇದೀಗ ಆ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

ಆದ್ಯತಾ ವಲಯ ಸಾಲ (ಪಿಎಸ್‌ಎಲ್) ಮಾರ್ಗಸೂಚಿಗಳ ವ್ಯಾಪಕ ಪರಿಶೀಲನೆಯ ನಂತರ ಈ ಪರಿಷ್ಕರಣೆಯನ್ನು ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಸಣ್ಣ, ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ ಮಾತ್ರವಲ್ಲದೆ ಹೊಸ ಸ್ಟಾರ್ಟ್‌ ಅಪ್‌ಗಳಿಗೆ ಹಾಗೂ ಆರೋಗ್ಯ ಮೂಲ ಸೌಕರ್ಯವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ.

ಆರ್‌ಬಿಐ ಕಳೆದ ವಾರ ಒಂದು ವರ್ಷ (ವೈ-ಒ-ವೈ) ಆಧಾರದ ಮೇಲೆ, ಆಹಾರೇತರ ಬ್ಯಾಂಕ್ ಸಾಲದ ಬೆಳವಣಿಗೆಯು ಜುಲೈ 2020 ರಲ್ಲಿ ಶೇ 6.7 ರಷ್ಟಿದ್ದು, 2019 ರ ಜುಲೈನಲ್ಲಿ ಶೇ 11.4 ರ ಬೆಳವಣಿಗೆಗಿಂತ ಕಡಿಮೆಯಾಗಿದೆ ಎಂದು ಹೇಳಿದೆ.

English summary
RBI on Friday brought financing of start-ups under the priority sector lending (PSL) category of the banking sector, proposed more credit flow to districts with lower PSL
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X