ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Google Task Mate app: ಹಣ ಗಳಿಸಬಹುದು, ಹೇಗೆಂದು ತಿಳಿಯಿರಿ..

|
Google Oneindia Kannada News

ನವದೆಹಲಿ, ನವೆಂಬರ್ 24: ಸರ್ಚ್‌ ಇಂಜಿನ್ ದೈತ್ಯ ಸಂಸ್ಥೆಯು ಹೊಸ ಆ್ಯಪ್ ಬಿಡುಗಡೆಗೊಳಿಸಿದ್ದು, ತನ್ನ ಕಾರ್ಯಗಳನ್ನು ಪೂರ್ಣಗೊಳಿಸುವವರಿಗೆ ಹಣ ಕೂಡ ನೀಡುತ್ತದೆ. ಈ ಅಪ್ಲಿಕೇಶನ್ ಹೆಸರು ಟಾಸ್ಕ್‌ ಮೇಟ್ ಆ್ಯಪ್.

ಭಾರತದಲ್ಲಿ ಬಿಡುಗಡೆಗೊಂಡಿರುವ ಈ ಆ್ಯೊಪ್ ಮೂಲಕ ಕಂಪನಿಯು ಬಳಕೆದಾರರಿಗೆ ಕೆಲವು ನಿರ್ದಿಷ್ಟ ಕಾರ್ಯಗಳನ್ನು ನೀಡುತ್ತದೆ. ಈ ಕಾರ್ಯಗಳು ಪೂರ್ಣಗೊಳಿಸಿದರೆ ಕಂಪನಿಯು ಅಪ್ಲಿಕೇಶನ್‌ ಮೂಲಕ ಬಳಕೆದಾರರಿಗೆ ನಿರ್ದಿಷ್ಟ ಹಣವನ್ನು ಪಾವತಿಸುತ್ತದೆ.

 ಜಿಯೋಗೆ 33,737 ಕೋಟಿ ರೂ. ಪಾವತಿ ಮಾಡಿದ ಗೂಗಲ್: ಶೇ. 7.73ರಷ್ಟು ಪಾಲು ಜಿಯೋಗೆ 33,737 ಕೋಟಿ ರೂ. ಪಾವತಿ ಮಾಡಿದ ಗೂಗಲ್: ಶೇ. 7.73ರಷ್ಟು ಪಾಲು

ಟಾಸ್ಕ್‌ ಮೇಟ್‌ ಆ್ಯಪ್ ಎಲ್ಲಿ ಲಭ್ಯವಿದೆ?

ಟಾಸ್ಕ್‌ ಮೇಟ್‌ ಆ್ಯಪ್ ಎಲ್ಲಿ ಲಭ್ಯವಿದೆ?

ಗೂಗಲ್‌ನ ಟಾಸ್ಕ್‌ ಮೇಟ್ ಆ್ಯಪ್ ನಿಮಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಆದರೂ ಈ ಅಪ್ಲಿಕೇಶನ್ ಬಳಸಲು ಮುನ್ನ ಹೊಸ ಬಳಕೆದಾರರಿಗೆ ಉಲ್ಲೇಖಿತ ಕೋಡ್‌ಗಳ ಮೂಲಕ ಮಾತ್ರ ಸೇರಲು ಸಾಧ್ಯವಾಗುತ್ತದೆ.

ಪೇಮೆಂಟ್ ಸೌಲಭ್ಯ ಆರಂಭಿಸಿದ ವಾಟ್ಸಾಪ್: ಬಳಸುವುದು ಹೇಗೆ?ಪೇಮೆಂಟ್ ಸೌಲಭ್ಯ ಆರಂಭಿಸಿದ ವಾಟ್ಸಾಪ್: ಬಳಸುವುದು ಹೇಗೆ?

ರೆಫರಲ್ ಕೋಡ್ ಹೊಂದಿದ್ದರೆ ಇನ್‌ಸ್ಟಾಲ್ ಮಾಡಬಹುದು

ರೆಫರಲ್ ಕೋಡ್ ಹೊಂದಿದ್ದರೆ ಇನ್‌ಸ್ಟಾಲ್ ಮಾಡಬಹುದು

ಗೂಗಲ್ ಟಾಸ್ಕ್‌ ಮೇಟ್ ಆ್ಯಪ್ ಎಲ್ಲರಿಗೂ ಅಷ್ಟು ಸುಲಭವಾಗಿ ಲಭ್ಯವಿಲ್ಲ. ಹೊಸ ಅಪ್ಲಿಕೇಶನ್ ಆಯ್ದ ಪರೀಕ್ಷಕರಿಗೆ ಮಾತ್ರ ಸೀಮಿತವಾಗಿದೆ ಎಂದು ಗೂಗಲ್ ಉಲ್ಲೇಖಿಸಿದೆ. ಹೀಗಾಗಿ ಬಳಕೆದಾರರು ರೆಫರಲ್ ಕೋಡ್ ಹೊಂದಿದ್ದರೆ ಮಾತ್ರ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ಬಳಕೆ ಮಾಡಬಹುದು. ನಂತರ ಕೊಟ್ಟಿರುವ ಟಾಸ್ಕ್‌ಗಳು ಮುಗಿಸಿದರೆ ನಿಮಗೆ ಹಣ ಸಿಗಲಿದೆ.

ನಿರ್ದಿಷ್ಟ ಸಮಯ, ಕಾರ್ಯವನ್ನು ನೀಡಲಾಗುತ್ತದೆ

ನಿರ್ದಿಷ್ಟ ಸಮಯ, ಕಾರ್ಯವನ್ನು ನೀಡಲಾಗುತ್ತದೆ

ಅಪ್ಲಿಕೇಶನ್‌ನ ವಿವರಣೆಯ ಪ್ರಕಾರ ಗೂಗಲ್ ನೀಡುವ ಕಾರ್ಯವನ್ನು ನೀವು ಎಲ್ಲಿಂದರಾದರೂ ಪೂರ್ಣಗೊಳಿಸಬಹುದು. ಆದರೆ ಒಂದು ನಿರ್ದಿಷ್ಟ ಕಾರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಅಂದಾಜು ಸಮಯವನ್ನು ಸಹ ಗೂಗಲ್ ಒದಗಿಸುತ್ತದೆ.

ಗೂಗಲ್ ಟಾಸ್ಕ್‌ ಪೂರೈಸಿದರೆ ಸ್ಥಳೀಯ ಕರೆನ್ಸಿಯಲ್ಲಿ ಹಣ ನೀಡುತ್ತದೆ

ಗೂಗಲ್ ಟಾಸ್ಕ್‌ ಪೂರೈಸಿದರೆ ಸ್ಥಳೀಯ ಕರೆನ್ಸಿಯಲ್ಲಿ ಹಣ ನೀಡುತ್ತದೆ

ಗೂಗಲ್ ಟಾಸ್ಕ್‌ ಮೇಟ್‌ ಆ್ಯಪ್ ನೀಡಿದ ಕಾರ್ಯವನ್ನು ಪೂರೈಸಿದರೆ ಬಳಕೆದಾರರಿಗೆ ಅವರದ್ದೇ ಸ್ಥಳೀಯ ಕರೆನ್ಸಿಯಲ್ಲಿ ಹಣವನ್ನು ನೀಡಲಾಗುತ್ತದೆ.

ಗೂಗಲ್ ಟಾಸ್ಕ್‌ಮೇಟ್ ಬಳಕೆ ಹೇಗೆ?

ಗೂಗಲ್ ಟಾಸ್ಕ್‌ಮೇಟ್ ಬಳಕೆ ಹೇಗೆ?

ಟಾಸ್ಕ್ ಮೇಟ್ ಅಪ್ಲಿಕೇಶನ್ ಪ್ರಸ್ತುತ ಬೀಟಾದಲ್ಲಿದೆ ಮತ್ತು ಬಳಕೆದಾರರು ಅಪ್ಲಿಕೇಶನ್ ಬಳಸಲು ಅನುಮತಿಸಲು ಗೂಗಲ್ ಇನ್ವೈಟ್‌ ಆಧಾರಿತ ವ್ಯವಸ್ಥೆಯನ್ನು ಅವಲಂಬಿಸಿದೆ. ಒಮ್ಮೆ ನೀವು ಇನ್ವೈಟ್‌ ಪಡೆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೂರ್ಣಗೊಳಿಸಲು ಗೂಗಲ್ ನಿಮಗೆ ಸರಳ ಕಾರ್ಯಗಳನ್ನು ನೀಡುತ್ತದೆ. ಟಾಸ್ಕ್ ಮೇಟ್‌ನಲ್ಲಿ ಹೋಗಲು ಮೂರು ಹಂತಗಳಿವೆ.


ಗೂಗಲ್‌ನ ಸಮೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ಲೇ ಸ್ಟೋರ್ ಕ್ರೆಡಿಟ್‌ಗಳನ್ನು ಗಳಿಸಲು ಬಳಕೆದಾರರಿಗೆ ರಿವಾರ್ಡ್ಸ್ ಅಪ್ಲಿಕೇಶನ್ ಅನುಮತಿಸುತ್ತದೆ. ಈ ಪ್ಲೇ ಸ್ಟೋರ್ ಕ್ರೆಡಿಟ್‌ಗಳನ್ನು ಪ್ಲೇ ಮೂವೀಸ್, ಪ್ಲೇ ಬುಕ್ಸ್ ಮುಂತಾದ ಖರೀದಿಗಳಿಗೆ ಬಳಸಬಹುದು. ಒಮ್ಮೆ ನೀವು ಅನೇಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಗಮನಾರ್ಹವಾದ ಮೊತ್ತವು ನಿಮಗೆ ಲಭ್ಯವಾಗಿದ್ದರೆ ಪ್ರೊಫೈಲ್ ಪೇಜ್‌ಗೆ ಹೋಗಿ ಕ್ಯಾಶ್ ಔಟ್ ಆಯ್ಕೆ ಮಾಡಬಹುದು. ಅಲ್ಲದೆ ನೀವು ರಿಜಿಸ್ಟರ್ ಮಾಡಿದ ಬ್ಯಾಂಕ್‌ಗೆ ಮೊತ್ತವನ್ನು ವರ್ಗಾಯಿಸುತ್ತದೆ.

ಗೂಗಲ್ ಸಮೀಕ್ಷೆಯಲ್ಲಿ ಯಾವುದಾದರೂ ನಿರ್ದಿಷ್ಟ ಅಂಗಡಿ/ಮಳಿಗೆಯ ಫೋಟೋಗಳನ್ನು ತೆಗೆದುಕೊಳ್ಳಲು, ಅಂಗಡಿ ವಿವರಗಳನ್ನು ಪರಿಶೀಲಿಸಲು ಮುಂತಾದ ಕಾರ್ಯಗಳನ್ನು ಮಾಡಬೇಕಾಗುತ್ತದೆ.

English summary
Google is currently testing a new app in India that will allow users earn money by doing some simple tasks. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X