ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಇ-ಫಿಲ್ಲಿಂಗ್: 11 ಲಕ್ಷ ಆಧಾರ್ ಲಿಂಕ್

|
Google Oneindia Kannada News

ನವದೆಹಲಿ, ಆಗಸ್ಟ್.10 ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಒಟಿಪಿ ಮತ್ತು ಆಧಾರ್ ಕಾರ್ಡ್ ದಾಖಲೆ ಆಧಾರದಲ್ಲಿ ಮಾಡಬೇಕೆಂದುಕೊಂಡಿದ್ದ ಸರ್ಕಾರದ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸುಮಾರು 7.5 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ ನ್ನು ಒಟಿಪಿ ಆಧಾರದಲ್ಲಿಯೇ ನೋಂದಣಿ ಮಾಡಿಕೊಳ್ಳಲಾಗಿದೆ. 11 ಲಕ್ಷ ಆಧಾರ್ ಕಾರ್ಡ್ ಗಳನ್ನು ಪ್ಯಾನ್ ಕಾರ್ಡ್ ದಾಖಲಾತಿಯಡಿ ಲಿಂಕ್ ಮಾಡಿಕೊಳ್ಳಲಾಗಿದೆ.[ವಿವಾಹ ಸಂಬಂಧಿತ ಅಂತರ್ಜಾಲ ತಾಣಕ್ಕೆ ಆಧಾರ್ ಕಡ್ಡಾಯ]

E-filing of ITR: Over 7.5 lakh returns verified, 11 L Aadhaar linked

ಕಳೆದ ತಿಂಗಳು ಜಾರಿಯಾದ ಹೊಸ್ ಇ ಫಿಲ್ಲಿಂಗ್ ವ್ಯವಸ್ಥೆಗೆ ಆಧಾರ್ ಕಾರ್ಡ್ ನೀಡಲು ಹೇಳಲಾಗಿತ್ತು. ಜತೆಗೆ ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇ-ಮೇಲ್ ಆಧಾರದಲ್ಲಿ ಮರುಪಾವತಿ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು.

ಇ_ಫಿಲ್ಲಿಂಗ್ ವ್ಯವಸ್ಥೆ ಆಗಸ್ಟ್ 31ರವರೆಗೆ ಜಾರಿಯಲ್ಲಿ ಇರುತ್ತದೆ. 15 ಲಕ್ಷಕ್ಕೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ ನ್ನು ಇದರಡಿಯೇ ನೋಂದಾವಣಿ ಮಾಡಿಕೊಳ್ಳಲಾಗುವುದು ಎಂದು ಬೆಂಗಳೂರು ಕಚೇರಿಯ ಹಿರಿಯ ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?]

ಆನ್ ಲೈನ್ ಐಟಿಆರ್ ಫಿಲ್ಲಿಂಗ್ ಪೋರ್ಟಲ್ ಗೆ ಭೇಟಿ ನೀಡಿ
ಇದೊಂದು ಅತ್ಯಂತ ಸುಲಭದ ಕ್ರಮವಾಗಿದ್ದು ಆದಾಯ ತೆರಿಗೆ ಮರುಪಾವತಿ ಮಾಡಬಹುದು. ಯಾವುದೇ ವ್ಯಕ್ತಿಯಾದರೂ ತಮ್ಮ ನೋಂದಾವಣಿಯಾದ ಮೊಬೈಲ್ ಗೆ ಒಟಿಪಿ ಪಡೆದುಕೊಂಡರೇ ಮರುಪಾವತಿ ಮುಗಿಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಅಂಚೆ ವ್ಯವಹಾರವಿಲ್ಲ
ಸಂಪೂರ್ಣ ಕಂಪ್ಯೂಟರ್ ಆಧಾರಿತವಾಗಿಯೇ ವ್ಯವಸ್ಥೆ ಕೆಲಸ ಮಾಡುತ್ತದೆ. ಈ ಬಗೆಯಲ್ಲಿ ರಿಟರ್ನ್ಸ್ ಪಾವತಿ ಮಾಡಲು ಮುಂದಾದರೆ ಯಾವ ಕಾರಣಕ್ಕೂ ಐಟಿಆರ್-ವಿ ಗಾಗಿ ಅಂಚೆ ಮೂಲಕ ವ್ಯವಹಾರ ಮಾಡಲು ಸಾಧ್ಯವಿಲ್ಲ.

English summary
The Income Tax department's ambitious OTP-based ITR filing system for taxpayers has started on a high note with its portal electronically verifying over 7.5 lakh returns and linking over 11 lakh Aadhaar numbers with the PAN database. The new e-filing system, enabled last month, allows online verification of a person's Income Tax Returns (ITR) by using either Aadhaar number, internet banking, ATM or email, thereby ending the practice of sending paper acknowledgement to its office in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X