ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಲ್ಲ, ಎರಡಲ್ಲ, 510 ಕೋಟಿ ರೂ.ಗೆ ಹರಾಜಾಯ್ತು 'ಎಣ್ಣೆ' ಅಂಗಡಿ!

|
Google Oneindia Kannada News

ಜೈಪುರ, ಮಾರ್ಚ್ 9: ಎರಡು ಎದುರಾಳಿ ಕುಟುಂಬಗಳ ಜಿದ್ದಾಜಿದ್ದಿ ಹೇಗಿರುತ್ತದೆ ಎಂಬುದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ರಾಜಸ್ಥಾನದ ಹನುಮನಗಡ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಮದ್ಯದಂಗಡಿ ಹರಾಜು ಪ್ರಕ್ರಿಯೆ ದಂಗುಬಡಿಸುವಂತಿದೆ. 'ಎಣ್ಣೆ'ಗೆ ಇರುವ ಬೇಡಿಕೆಯಂತೆಯೇ ಅದರ ಅಂಗಡಿ ಮಾಲೀಕತ್ವಕ್ಕೆ ಎಂತಹ ಬೇಡಿಕೆ ಇದೆ ಎಂದು ಜನರು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

ಇಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಿದ್ದ ಹರಾಜು ಪ್ರಕ್ರಿಯೆ ಮಧ್ಯರಾತ್ರಿಯ ಬಳಿಕ ನಡೆದಿದೆ. ಅದೂ ಒಂದಲ್ಲ, ಎರಡಲ್ಲ, ಬರೋಬ್ಬರಿ 510 ಕೋಟಿ ರೂಪಾಯಿಗೆ. ಅಲ್ಲಿಯವರೆಗೂ ಪೈಪೋಟಿ ನೀಡಿದ್ದ ಎದುರಾಳಿ ಕುಟುಂಬ, ಕೊನೆಗೂ ಹೈರಾಣಾಗಿ ಸೋಲೊಪ್ಪಿಕೊಂಡಿದೆ. ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ಹರಾಜಿನಲ್ಲಿ ಭಾಗವಹಿಸಿ ಬಿಡ್ ಗೆದ್ದ ಕುಟುಂಬ ನಗುತ್ತಿದೆಯೋ, ಅಳುತ್ತಿದೆಯೊ ಎನ್ನುವುದು ಗೊತ್ತಾಗಿಲ್ಲ.

ಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿಕುಡುಕರಿಗೆ ಕಹಿ ಸುದ್ದಿ ಇಲ್ಲ, ಇಲಾಖೆಗೆ ಆದಾಯ ಹೆಚ್ಚಳ ಗುರಿ

ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಇ-ಹರಾಜು ನಡೆಸುವುದು ಸಾಮಾನ್ಯ. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದಾಗ ಮದ್ಯದಂಗಡಿಗಳ ಇ-ಹರಾಜನ್ನು ರದ್ದುಗೊಳಿಸಿದ್ದರು. ಆದರೆ ಈಗ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಸರ್ಕಾರ ಅದನ್ನು ಪುನರಾರಂಭಿಸಿದೆ. ಸುಮಾರು 7000 ಅಂಗಡಿಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ.

510 ಕೋಟಿ ರೂ ಬಿಡ್

510 ಕೋಟಿ ರೂ ಬಿಡ್

ಹನುಮನಗಡದ ನೋಹರ್‌ನಲ್ಲಿ ಮದ್ಯದಂಗಡಿಗೆ 72.70 ಲಕ್ಷ ಮೂಲ ಬೆಲೆ ನಿಗದಿಗೊಳಿಸಲಾಗಿತ್ತು. ಕಳೆದ ವರ್ಷ ಅದನ್ನು ಲಾಟರಿ ಮೂಲಕ 65 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಆದರೆ ಇ-ಹರಾಜಿನಲ್ಲಿ ಮತ್ತೆ ಅದನ್ನು ಮಾರಾಟಕ್ಕಿಟ್ಟಿದ್ದು, ಇಡೀ ಸನ್ನಿವೇಶವನ್ನೇ ಬದಲಿಸಿದೆ. ಅದು ಇತಿಹಾಸದಲ್ಲಿಯೇ ಅತ್ಯಧಿಕ, 510 ಕೋಟಿ ರೂ ಬಿಡ್ ಪಡೆದುಕೊಂಡಿದೆ.

708 ಪಟ್ಟು ಅಧಿಕ ಬೆಲೆಗೆ ಹರಾಜು

708 ಪಟ್ಟು ಅಧಿಕ ಬೆಲೆಗೆ ಹರಾಜು

ಲಿಕ್ಕರ್ ಶಾಪ್‌ಗೆ ಹರಾಜಿನಲ್ಲಿ 72.70 ಲಕ್ಷ ರೂ ಮೂಲಬೆಲೆ ನಿಗದಿಗೊಳಿಸಲಾಗಿತ್ತು. ಆದರೆ ಅದು ಮೂಲ ಬೆಲೆಯ 708 ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದೆ. ಕಿರಣ್ ಕನ್ವಾರ್ ಎಂಬುವವರು 510 ಕೋಟಿ ರೂ ಬಿಡ್ ಸಲ್ಲಿಸಿದ್ದಾರೆ. ಬಿಡ್ ಮಾಡಿದ ಮೊತ್ತದ ಶೇ 2ರಷ್ಟು ಮೊತ್ತವನ್ನು ಠೇವಣಿಯಾಗಿ ಇರಿಸುವಂತೆ ಬಿಡ್ಡರ್‌ಗೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಮೂರುದಿನದಲ್ಲಿ ಠೇವಣಿ ಇರಿಸದೆ ಹೋದರೆ ಅವರ ಬಿಡ್ಡಿಂಗ್ ರದ್ದಾಗಲಿದೆ ಎಂದು ಅಬಕಾರಿ ನೀತಿಯ ಹೆಚ್ಚುವರಿ ಆಯುಕ್ತ ಸಿಆರ್ ದೆವಾಸಿ ತಿಳಿಸಿದ್ದಾರೆ.

ಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆಗೆ ಲಾಭಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆಗೆ ಲಾಭ

ಎರಡು ಕುಟುಂಬಗಳ ಪೈಪೋಟಿ

ಎರಡು ಕುಟುಂಬಗಳ ಪೈಪೋಟಿ

ಲಿಕ್ಕರ್ ಶಾಪ್‌ಗೆ ಬಿಡ್ ಸಲ್ಲಿಸುವ ಸಂಬಂಧ ಪ್ರತಿಷ್ಠೆ ಮುಂದಿಟ್ಟ ಎರಡು ಕುಟುಂಬಗಳು ನಿರಂತರ ಬಿಡ್ ಸಲ್ಲಿಸುತ್ತಲೇ ಹೋಗಿವೆ. ಕೊನೆಗೆ 500 ಕೋಟಿ ರೂಪಾಯಿಯವರೆಗೂ ಪೈಪೋಟಿ ನೀಡಿದ ಕುಟುಂಬ, ಎದುರಾಳಿ 510 ಕೋಟಿ ರೂಪಾಯಿಗೆ ಬಿಡ್ ಸಲ್ಲಿಸಿದ ಬಳಿಕ ಹರಾಜಿನಿಂದ ಹಿಂದೆ ಸರಿದಿದೆ.

ವೈನ್‌ಶಾಪ್‌ಗೆ ಬೇಡಿಕೆ ಅಧಿಕ

ವೈನ್‌ಶಾಪ್‌ಗೆ ಬೇಡಿಕೆ ಅಧಿಕ

ರಾಜಸ್ಥಾನ ಸರ್ಕಾರವು ಇ-ಹರಾಜು ಮೂಲಕ ನಡೆಸುತ್ತಿರುವ ವೈನ್ ಶಾಪ್ ಮಾರಾಟಕ್ಕೆ ಭಾರಿ ಬೇಡಿಕೆ ಉಂಟಾಗುತ್ತಿದೆ. ಚುರು ಜಿಲ್ಲೆಯಲ್ಲಿಯೂ ಒಂದು ಲಿಕ್ಕರ್ ಅಂಗಡಿ 11 ಕೋಟಿ ರೂ.ಗೆ ಹರಾಜಾಗಿದ್ದರೆ, ಜೈಪುರದ ಸಂಗನೆರ್‌ನ ಮತ್ತೊಂದು ಅಂಗಡಿ 8.91 ಕೋಟಿಗೆ ಹರಾಜಾಗಿದೆ.

English summary
E-auction of a wine shop in Rajasthan's Hanumanagarh district's Nohar village started with Rs 72.70 lakh and bidding was ended with Rs 510 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X