ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?

|
Google Oneindia Kannada News

ನವದೆಹಲಿ, ಮೇ 13: ಪ್ರಧಾನಿ ಮೋದಿ ಅವರ ಆಶಯದಂತೆ ಐದು ಸ್ತಂಭಗಳನ್ನು ಬಲ ಪಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು.

ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದೆ. ಈಗ 2019-20ನೇ ಸಾಲಿನ ಐಟಿ ರಿಟರ್ನ್ಸ್ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!

ಜುಲೈ 31, 2020 ಹಾಗೂ ಅಕ್ಟೋಬರ್ 31, 2020 ಇದ್ದ ಕೊನೆ ದಿನಾಂಕವನ್ನು ನವೆಂಬರ್ 30, 2020ಕ್ಕೆ ನಿಗದಿ ಮಾಡಲಾಗಿದೆ. ಇದರ ಜೊತೆಗೆ ತೆರಿಗೆ ಲೆಕ್ಕಪರಿಶೋಧನೆ(tax audit) ಕೊನೆ ದಿನಾಂಕವನ್ನು ಸೆಪ್ಟೆಂಬರ್ 30, 2020ರಿಂದ ಅಕ್ಟೋಬರ್ 31, 2020ಕ್ಕೆ ನಿಗದಿ ಪಡಿಸಲಾಗಿದೆ.

ಏನು ಲಾಭವಾಗಲಿದೆ?

ಏನು ಲಾಭವಾಗಲಿದೆ?

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ತೆರಿಗೆದಾರರಿಗೆ ನಿರಾಳವಾಗುವ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಸಿಗುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯುವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ದಿನಾಂಕವನ್ನು ಪರಿಷ್ಕರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.

ತೆರಿಗೆದಾರರಿಗೆ ಅನುಕೂಲವಾಗಲಿದೆ

ತೆರಿಗೆದಾರರಿಗೆ ಅನುಕೂಲವಾಗಲಿದೆ

ಈ ಮೂಲಕ ಭಾರತ ಸರ್ಕಾರವು ನೀಡಿರುವ ವಿವಿಧ ಟೈಮ್‌ಲೈನ್ ವಿಸ್ತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ತೆರಿಗೆದಾರರಿಗೆ ಅನುಕೂಲವಾಗಲಿದೆ. 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್‌ಗಳನ್ನು ಸಿಬಿಡಿಟಿ ಪರಿಷ್ಕರಿಸುತ್ತಿದೆ. ಏಪ್ರಿಲ್ ತಿಂಗಳಾಂತ್ಯಕ್ಕೆ ಅಧಿಕೃತ ನೋಟಿಫಿಕೇಷನ್ ಸಿಗಲಿದೆ ಎಂದು ವಿತ್ತ ಸಚಿವಾಲಯವು ಹೇಳಿದೆ.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

ತೆರಿಗೆ ಕ್ಲೇಮ್ ಗೆ ಅರ್ಹ ದಿನಾಂಕ ವಿಸ್ತರಣೆ

ತೆರಿಗೆ ಕ್ಲೇಮ್ ಗೆ ಅರ್ಹ ದಿನಾಂಕ ವಿಸ್ತರಣೆ

2020ರ ಮಾರ್ಚ್ 30ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಏಪ್ರಿಲ್ 1 ರಿಂದ 2020 ರ ಜೂನ್ 30 ರವರೆಗೆ ನಡೆಸಿದ ಆರ್ಥಿಕ ವಹಿವಾಟುಗಳು ತೆರಿಗೆ ಕ್ಲೇಮ್ ಗೆ ಅರ್ಹವಾಗಿವೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಎರಡನೇ ಅವಧಿಗೆ ವಿಸ್ತರಣೆಯಾಗಿದೆ. ಸೆಕ್ಷನ್ 80 ಸಿ, 80ಡಿ, 80 ಜಿ ಅಡಿಯಲ್ಲಿ ಹೂಡಿಕೆಗಳು, ಎಲ್ ಐಸಿ, ಪಿಪಿಎಫ್ ಹೂಡಿಕೆಗಳು ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ತೆರಿಗೆ ಕ್ಲೇಮ್ ಪ್ರಯೋಜನದ ಕಾಲಮಿತಿಗಳನ್ನು ಜೂನ್ 30ರ ವರೆಗೆ ಸರ್ಕಾರ ವಿಸ್ತರಿಸಿದೆ.

ಮರುಪಾವತಿ ತಕ್ಷಣವೇ ಸಿಗಲಿದೆ

ಮರುಪಾವತಿ ತಕ್ಷಣವೇ ಸಿಗಲಿದೆ

ವಿವಿಧ ಮಾಲೀಕತ್ವ, ಪಾಲುದಾರಿಕೆ, ಎಲ್ ಎಲ್ ಪಿ, ಸಹಕಾರಿ ಸಂಸ್ಥೆ, ಚಾರಿಟೇಬಲ್ ಟ್ರಸ್ಟ್, ಕಾರ್ಪೊರೇಟ್ ವ್ಯಾಪ್ತಿಗೆ ಬರದ ಎಲ್ಲಾ ವ್ಯವಹಾರಿಕ ಸಂಸ್ಥೆಗಳ ಬಾಕಿ ಮರುಪಾವತಿ ಪಡೆಯಬಹುದಾಗಿದೆ. ಇದರ ಜೊತೆಗೆ ವಿವಾದ್ ಸೇ ವಿಶ್ವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ ಮೊತ್ತ ಹಾಗೂ ದಂಡವಿಲ್ಲದೆ ಪಾವತಿಯನ್ನು ಡಿಸೆಂಬರ್ 31ರ ತನಕ ಮಾಡಲು ಅವಕಾಶ ಸಿಗಲಿದೆ.

English summary
Finance Minister Nirmala Sitharaman today extended the due date of all income-tax returns for the financial year 2019-20 from July 31, 2020 and October 31, 2020 to November 30, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X