ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡುಕಾಟಿಯಿಂದ ಭಾರತದಲ್ಲಿ ಅತ್ಯಾಧುನಿಕ ಬೈಕ್ ಬಿಡುಗಡೆ

|
Google Oneindia Kannada News

ನವದೆಹಲಿ, ಜುಲೈ 26: ಡುಕಾಟಿ ಅತ್ಯಂತ ನಿರೀಕ್ಷಿತ ಅಡ್ವೆಂಚರ್ ಟೂರರ್ ಹೊಚ್ಚಹೊಸ ಮಲ್ಟಿಸ್ಟ್ರಾಡಾ ವಿ4 ಮತ್ತು ವಿ4 ಎಸ್ ಬಿಡುಗಡೆ ಮಾಡಿದ್ದು ಬೆಲೆ ಕ್ರಮವಾಗಿ ರೂ.18.99 ಲಕ್ಷಗಳು ಮತ್ತು ರೂ.23.10 ಲಕ್ಷಗಳನ್ನು ಹೊಂದಿವೆ. ಮಲ್ಟಿಸ್ಟ್ರಾಡಾ ವಿ4 ಸಂಪೂರ್ಣವಾದ ಹೊಚ್ಚಹೊಸ ಮೋಟಾರ್ ಸೈಕಲ್ ಆಗಿದೆ.

ಈ ಮಲ್ಟಿಸ್ಟ್ರಾಡಾದ 4ನೇ ತಲೆಮಾರು ಡುಕಾಟಿ ತಂತ್ರಜ್ಞಾನದ ಶ್ರೇಷ್ಠತೆ, ಕಾರ್ಯಕ್ಷಮತೆ ಮತ್ತು ಸಾಮಥ್ರ್ಯವನ್ನು ಪ್ರತಿನಿಧಿಸುತ್ತದೆ. ಈ ಹೆಸರು ಬಲವಾದ ಉದ್ದೇಶವನ್ನೂ ಈಡೇರಿಸುತ್ತದೆ, "ಮಲ್ಟಿ" ಎಂದರೆ "ಹಲವು" ಎಂದಾಗಿದೆ ಆದ್ದರಿಂದ "ಮಲ್ಟಿ-ಸ್ಟ್ರಾಡಾ" ಎಂದರೆ "ಹಲವು ರಸ್ತೆಗಳು", ಆದ್ದರಿಂದ ಎಲ್ಲ ರಸ್ತೆಗಳನ್ನು ಸುಲಭವಾಗಿ ಪ್ರಭಾವಿಸಬಲ್ಲ ಬೈಕ್‍ನ ಶುದ್ಧ ಸಾಮಥ್ರ್ಯವನ್ನು ದೃಢಪಡಿಸುತ್ತದೆ, ಅದಕ್ಕೆ ಅದರ ಹೊಸ ವಿ4 ಗ್ರಾನ್‍ಟುರಿಸ್ಮೊ ಎಂಜಿನ್ ಕಾರಣವಾಗಿದೆ, ಇದು ಇಂಟಿಗ್ರೇಟೆಡ್ ಸೇಫ್ಟಿ ಮತ್ತು ಬ್ಯಾಲೆನ್ಸ್ಡ್ ಚಾಸೀಸ್ ಹೊಂದಿದೆ.

ಈಗ, ಈ ಹೊಚ್ಚಹೊಸ ತಲೆಮಾರಿನೊಂದಿಗೆ, ಡುಕಾಟಿ ತನ್ನ ಪ್ರತಿಮಾತ್ಮಕ ಡೂ-ಇಟ್-ಆಲ್ ಮೆಷಿನ್ ಅನ್ನು ಕೂಡಾ ಮರುರೂಪಿಸಿಕೊಂಡಿದೆ. ಅತ್ಯಂತ ದೊಡ್ಡ ಬದಲಾವಣೆಯು ಈ ಯೋಜನೆಯ ಹೃದಯದಲ್ಲಿ ಪ್ರಾರಂಭವಾಗುತ್ತದೆ, ಇದರ ಶಕ್ತಿಯುತ ಎಂಜಿನ್ ವಿ4 ಗ್ರಾನ್‍ಟುರಿಸ್ಮೊ ಎಂಜಿನ್ ಕಡಿಮೆ ರಿವ್‍ಗಳಲ್ಲಿ ಅತ್ಯಂತ ಮೃದು ಕಾರ್ಯ ನಿರ್ವಹಣೆ ಖಚಿತಪಡಿಸುತ್ತದೆ ಮತ್ತು ಅತ್ಯಂತ ಶ್ಲಾಘನೆಗೆ ಒಳಪಟ್ಟ ಡೆಸ್ಮೊಸ್‍ಡಿಸಿ ಸ್ಟ್ರೇಡೇಲ್ ತನ್ನ ಕರ್ತವ್ಯವನ್ನು ಪನಿಗೇಲ್ ವಿ4 ಮತ್ತು ಸ್ಟ್ರೀಟ್‍ಫೈಟರ್ ವಿ4ನಲ್ಲಿ ಮಾಡುತ್ತದೆ. ಹೊಚ್ಚಹೊಸ ವಿ4 ಗ್ರಾನ್‍ಟುರಿಸ್ಮೊ ಎಂಜಿನ್ ಕಡಿಮೆ ರಿವ್‍ಗಳಲ್ಲಿ ಮತ್ತು ಲೀನಿಯರ್ ಟಾರ್ಕ್ ಕರ್ವ್‍ಗಳಲ್ಲಿ ಅತ್ಯಂತ ಮೃದುವಾದ ಕಾರ್ಯ ನಿರ್ವಹಣೆ ದೃಢಪಡಿಸುತ್ತದೆ. ಆದ್ದರಿಂದ ರೈಡರ್‍ಗಳು ಹೆಚ್ಚು ತಾಂತ್ರಿಕ ಮತ್ತು ಕಠಿಣ ಪ್ರದೇಶಗಳನ್ನು ಪ್ರಯತ್ನರಹಿತವಾಗಿ ಹೆಚ್ಚು ಶಕ್ತಿ ಪೂರೈಸುವ ಮೂಲಕ ಗೆಲ್ಲಲು ಶಕ್ತವಾಗುವ ಮೂಲಕ ರೈಡರ್‍ಗೆ ಹೆಚ್ಚು ನಿಯಂತ್ರಣ ಹಾಗೂ ಎಲ್ಲ ರಸ್ತೆಗಳನ್ನೂ ಆಳಲು ವಿಶ್ವಾಸ ನೀಡುತ್ತದೆ.

ಮಲ್ಟಿಸ್ಟ್ರಾಡಾ ಅಂದು ವಿನೂತನ ಬಗೆಯ ಮೋಟಾರ್‍ಸೈಕಲ್ ಆಗಿದ್ದು ಆನ್-ಅಸ್ಫಾಲ್ಟ್ ಸ್ಪೋರ್ಟಿ ರೈಡಿಂಗ್ ಸಂಯೋಜಿಸುವುದೇ ಅಲ್ಲದೆ ಒಟ್ಟಾರೆ ಸಂತೃಪ್ತಿ ಮತ್ತು ಸುಲಭವಾದ ಆಫ್-ರೋಡ್ ನಿರ್ವಹಣೆಯನ್ನು ಅಸಾಧಾರಣ ಸೌಖ್ಯವನ್ನು ದೂರ ಪ್ರಯಾಣಗಳಲ್ಲಿ ಮತ್ತು ಪ್ರತಿನಿತ್ಯದ ಬಳಕೆಯಲ್ಲಿ ನೀಡುತ್ತದೆ.

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್

ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ, "ಕಾಯುವಿಕೆ ಬಹಳ ದೀರ್ಘವಾಗಿತ್ತು, ಆದರೆ ಈ ಬೈಕ್‍ಗಾಗಿ ತಾಳ್ಮೆಯಿಂದ ಕಾಯುತ್ತಿದ್ದ ಎಲ್ಲ ಡುಕಾಟಿಸ್ಟಿಗಳಿಗೆ ಅರ್ಹವಾದುದಾಗಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ. ಇದನ್ನು ಹೇಳಲು ಬೇರೆ ವಿಧಾನವಿಲ್ಲ ಆದರೆ ಮಲ್ಟಿಸ್ಟ್ರಾಡಾ ವಿ4 ಅತ್ಯಾಧುನಿಕ ತಂತ್ರಜ್ಞಾನದ ಅದ್ಭುತವಾಗಿದ್ದು ಅದು ನಿಮ್ಮನ್ನು ಸುಲಭವಾಗಿ ವಿಶ್ವದಾದ್ಯಂತ ಕೊಂಡೊಯ್ಯಬಲ್ಲದು. ಹೊಸ ಗ್ರಾನ್‍ಟುರಿಸ್ಮೊ ವಿ4 ಎಂಜಿನ್ ಟೂರಿಂಗ್ ಮತ್ತು ಆಫ್ ರೋಡ್ ರೈಡಿಂಗ್ ಅನ್ನು ದೃಷ್ಟಿಯಲ್ಲಿರಿಸಿಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಈ ಇಡೀ ಯೋಜನೆಯ ಕೇಂದ್ರದಲ್ಲಿದೆ. ನಾನು ಬರೀ ಡುಕಾಟಿಸ್ಟಿಗಳಿಗೆ ಮಾತ್ರವಲ್ಲದೆ ಈ ವಲಯ ಕುರಿತಾಗಿಯೂ ಥ್ರಿಲ್ ಆಗಿದ್ದೇನೆ ಮಲ್ಟಿಸ್ಟ್ರಾಡಾ ವಿ4 ಬಳಕೆದಾರರಿಗೆ ಕಾರ್ಯಕ್ಷಮತೆ, ವಿನ್ಯಾಸ ಮತ್ತು ತಂತ್ರಜ್ಞಾನವು ಯಾವುದೇ ಉತ್ಸಾಹಿಯ ವಾರವನ್ನು ಆತ/ಆಕೆಯ ಮಂಡಿಯ ಮೇಲಿರುವಂತೆ ಮಾಡುತ್ತದೆ! ನಾನು ಅದನ್ನು ಭಾರತದಲ್ಲಿ ನೋಡಲು ಮುಖ್ಯವಾಗಿ ಕಡಿಮೆ ಆಯ್ಕೆ ಮಾಡಿಕೊಂಡ ರಸ್ತೆಗಳಲ್ಲಿ ಕಾಣಲು ಬಯಸಿದ್ದೇನೆ." ಎಂದರು.

ಎಂಜಿನ್

ಎಂಜಿನ್

ಮಲ್ಟಿಸ್ಟ್ರಾಡಾ ವಿ4 ಮತ್ತು ವಿ4 ಎಸ್ ವಿ4 ಗ್ರಾನ್‍ಟುರಿಸ್ಮೊ ಎಂಜಿನ್ ಹೊಂದಿವೆ, ವಿ4-90ಲಿ, ಕೌಂಟರ್-ರೊಟೇಟಿಂಗ್ ಕ್ರಾಂಕ್‍ಶಾಫ್ಟ್, ಟ್ವಿನ್ ಪಲ್ಸ್ ಫೈರಿಂಗ್ ಆರ್ಡರ್ ಹೊಂದಿದ್ದು ಅದು 10,500ಆರ್‍ಪಿಎಂನಲ್ಲಿ 170 ಎಚ್‍ಪಿ ನೀಡುತ್ತದೆ ಮತ್ತು 8,750ಆರ್‍ಪಿಎಂನಲ್ಲಿ 125 ಎನ್‍ಎಂ ಟಾರ್ಕ್ ನೀಡುತ್ತದೆ. ಈ ಲಿಕ್ವಿಡ್-ಕೂಲ್ಡ್ ಎಂಜಿನ್ ಪ್ರತಿ ಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿದೆ ಮತ್ತು ಬೋರ್ ಮತ್ತು ಸ್ಟ್ರೋಕ್ ಅಳತೆಗಳು ಕ್ರಮವಾಗಿ 83 ಮತ್ತು 53.5 ಎಂಎಂ ಹೊಂದಿವೆ. ಮಲ್ಟಿಸ್ಟ್ರಾಡಾ ವಿ4 ಮತ್ತು ವಿ4 ಎಸ್ 46ಎಂಎಂ ಸುಧಾರಿತ ರೈಡ್-ಬೈ-ವೈರ್ ಸಿಸ್ಟಂನಿಂದ ನಿಯಂತ್ರಿತ ಸಿಲಿಂಡ್ರಿಕಲ್-ಸೆಕ್ಷನ್ ಥ್ರಾಟಲ್ ಬಾಡೀಸ್ ಮೂಲಕ ಇಂಧನ ಮಿಶ್ರಣವನ್ನು ಗುಟುಕುರಿಸಿಕೊಳ್ಳುತ್ತದೆ.

ಸೆಲ್ಫ್-ಸರ್ವೊ ವೆಟ್ ಸ್ಲಿಪ್ಪರ್ ಕ್ಲಚ್ ಅನ್ನು ಈಗ ಕಡಿಮೆ ಲಿವರ್ ಪ್ರಯತ್ನದಿಂದ ನಿರ್ವಹಿಸಬಹುದು ಅದಕ್ಕೆ ಹೊಸ ಹೈಡ್ರಾಲಿಕ್ ಕಂಟ್ರೋಲ್ ಸಿಸ್ಟಂ ನೆರವಾಗುತ್ತದೆ. ಮಲ್ಟಿಸ್ಟ್ರಾಡಾ ವಿ4 ಮತ್ತು ವಿ4 ಎಸ್ ಎಂಜಿನ್ 15,000 ಕಿ.ಮೀ.ಗಳಷ್ಟು ಮೇಂಟೆನೆನ್ಸ್ ಇಂಟರ್‍ವಲ್‍ಗಳನ್ನು ಹೊಂದಿದ್ದು ವಾಲ್ವ್ ಕ್ಲಿಯರೆನ್ಸ್ ಇನ್ಸ್‍ಪೆಕ್ಷನ್ ಅನ್ನು ಪ್ರತಿ 60,000 ಕಿ.ಮೀ.ಗೆ ಮಾಡಬೇಕಾಗುತ್ತದೆ ಅದು ಉದ್ಯಮದಲ್ಲಿ ಅತ್ಯಂತ ದೀರ್ಘ ಮೈನ್ ಸರ್ವೀಸ್ ಇಂಟರ್‍ವಲ್ ಆಗಿದೆ. ಈ ಕೊಡುಗೆಗಳು ರೈಡರ್‍ಗೆ ಮನಃಶ್ಯಾಂತಿ ನೀಡುತ್ತವೆ ಮತ್ತು ಅನುಮಾನಗಳಿಲ್ಲದೆ ದೂರ ದಾರಿಗಳನ್ನು ಆಕ್ರಮಿಸಲು ನಂಬಿಕೆ ನೀಡುತ್ತವೆ, ಅಲ್ಲದೆ ಗಮನಾರ್ಹವಾಗಿ ನಿರ್ವಹಣೆಯ ವೆಚ್ಚವನ್ನೂ ಕಡಿಮೆ ಮಾಡುತ್ತವೆ.

ರಾಡಾರ್

ರಾಡಾರ್

ಡುಕಾಟಿ ಮಲ್ಟಿಸ್ಟ್ರಾಡಾ ವಿ4 ವಿಶ್ವದಲ್ಲಿ ರಾಡಾರ್ ತಂತ್ರಜ್ಞಾನ ಅಳವಡಿಸಿಕೊಂಡ ಮೊದಲ ಉತ್ಪಾದನೆಯ ಬೈಕ್ ಆಗಿದೆ. ರಾಡಾರ್‍ಗಳು ಸುಧಾರಿತ ನೆರವಿನ ಸಿಸ್ಟಂಗಳಾಗಿದ್ದು ರೈಡಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸುವ ಸಾಮಥ್ರ್ಯ ಹೊಂದಿದೆ ಅದಕ್ಕೆ ಸುತ್ತಮುತ್ತಲಿನ ಮೋಟಾರ್‍ಸೈಕಲ್ ಅನ್ನು ವಾಸ್ತವದಲ್ಲಿ ಮರಳಿ ಕಟ್ಟುವ ಸಾಮಥ್ರ್ಯಇರುತ್ತದೆ. ತಾಂತ್ರಿಕ ಪರಹಾರವು ಎರಡು ಕಾರ್ಯಗಳನ್ನು ನಿರ್ವಹಿಸುತ್ತದೆ: ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್.

ಅಡಾಪ್ಟಿವ್ ಇಂಟೆಲಿಜೆಂಟ್ ಸಿಸ್ಟಮ್ಸ್ ವಾಹನದ ರೈಡರ್‍ಗಳ ರೈಡಿಂಗ್‍ಗೆ ಪೂರಕವಾಗಿವೆ ಎಂದು ಎತ್ತಿ ಹೇಳಲಾಗಿದೆ ಮತ್ತು ಸದಾ ನಿಯಂತ್ರಣದಲ್ಲಿರಬೇಕು ಮತ್ತು ರೈಡರ್‍ನಿಂದ ಹೊಂದಿಸಿಕೊಳ್ಳಬೇಕು. ಅಡ್ವಾನ್ಸ್‍ಡ್ ಸಿಸ್ಟಂಗಳು ಸ್ವಯಂಚಾಲಿತ ರೈಡಿಂಗ್ ಸಿಸ್ಟಂಗಳಲ್ಲ ಮತ್ತು ಆದ್ದರಿಂದ ರೈಡರ್ ಅನ್ನು ಬದಲಾಯಿಸುವುದಿಲ್ಲ. ರಸ್ತೆಯ ಮೇಲೆ ಮತ್ತು ರೇಸ್‍ಟ್ರ್ಯಾಕ್ ಮೇಲೆ ಸದಾ ಸುರಕ್ಷತೆಗೆ ಗಮನದಿಂದ ಡುಕಾಟಿ ರೈಡರ್ ರೈಡಿಂಗ್‍ಗೆ ಜವಾಬ್ದಾರಿಯಾಗಿರುತ್ತಾನೆ ಎನ್ನುವುದನ್ನು ಎತ್ತಿ ತೋರುತ್ತದೆ ಮತ್ತು ಸದಾ ವಿವಿಧ ಪಾರಿಸರಿಕ ಸನ್ನಿವೇಶಗಳಲ್ಲಿ ವಿವೇಕಯುತ ವರ್ತನೆಯನ್ನು ಕಾಪಾಡುವ ಅಗತ್ಯವನ್ನು ಎತ್ತಿ ತೋರುತ್ತದೆ.

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ಫ್ರಂಟ್ ರಾಡಾರ್ ಅನ್ನು ಪರಿಪೂರ್ಣವಾಗಿ ಬೈಕ್‍ಗೆ ಜೊಡಿಸಲಾಗಿದೆ, ಅದು ಕಂಟ್ರೋಲ್ಡ್ ಬ್ರೇಕಿಂಗ್ ಮತ್ತು ಆಕ್ಸಲರೇಷನ್‍ನಿಂದ 30ರಿಂದ 160 ಕಿ.ಮೀ/ಗಂಟೆ ವೇಗ ಇರುವಾಗ ಇತರೆ ವಾಹನಗಳಿಂದ ಸ್ವಯಂಚಾಲಿತವಾಗಿ ದೂರವನ್ನು ಹೊಂದಿಸುತ್ತದೆ(ನಾಲ್ಕು ಚಕ್ರಗಳ ಮೇಲೆ ಆಯ್ಕೆ ಮಾಡಬಹುದು). ನಿರ್ದಿಷ್ಟವಾಗಿ ಡಿಸೆಲರೇಷನ್ ಮತ್ತು ಆಕ್ಸಲರೇಷನ್ ದೃಷ್ಟಿಯಿಂದ ಸಿಸ್ಟಂನ ಅಥಾರಿಟಿಯು ರೈಡರ್‍ಗೆ ಯಾವುದೇ ಸನ್ನಿವೇಶದಲ್ಲೀ ಸತತವಾದ ನಿಯಂತ್ರಣ ಕಾಪಾಡಿಕೊಳ್ಳಲು ಸೀಮಿತಗೊಳಿಸಲಾಗಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್(ಎಸಿಸಿ) ಸಿಸ್ಟಂ ಅನ್ನು ಎಡ ಬ್ಲಾಕ್‍ನಲ್ಲಿರುವ ವಿಶೇಷ ಬಟನ್‍ಗಳನ್ನು ಬಳಸಿ ಸಕ್ರಿಯಗೊಳಿಸಬಹುದು ಮತ್ತು ಹೊಂದಿಸಬಹುದು ಡಿಕ್ಯೂಎಸ್ ಅಪ್ ಅಂಡ್ ಡೌನ್‍ನಿಂದ ರೈಡರ್ ಆಕ್ಸಲರೇಷನ್ ಮತ್ತು ಡಿಸೆಲರೇಷನ್ ಹಂತಗಳಲ್ಲಿ ಎಸಿಸಿ ನಿಷ್ಕ್ರಿಯಗೊಳಿಸದೆ ಮೇಲೆ ಮತ್ತು ಕೆಳಕ್ಕೆ ಬದಲಾಯಿಸಬಹುದು. ಎಸಿಸಿ ಸಿಸ್ಟಂ ಹೆಚ್ಚು ಅನುಕೂಲಕರ ರೈಡಿಂಗ್ ಅನ್ನು ಮುಖ್ಯವಾಗಿ ದೂರದ ಮೋಟಾರ್‍ವೇ ಪ್ರಯಾಣಗಳಲ್ಲಿ ನೀಡುತ್ತದೆ.

ತಂತ್ರಜ್ಞಾನ

ತಂತ್ರಜ್ಞಾನ

ಮಲ್ಟಿಸ್ಟ್ರಾಡಾ ವಿ4 5" ಕಲರ್ ಟಿಎಫ್‍ಟಿ ಡಿಸ್ಪ್ಲೇಯೊಂದಿಗೆ ಜೋಡಿಸಲ್ಪಟ್ಟಿದ್ದು ಯಾವುದೇ ಬೆಳಕಿನ ಪರಿಸ್ಥಿತಿಗಳಿಗೆ ಆಪ್ಟಿಮಲ್ ರೆಸೊಲ್ಯೂಷನ್ ಮತ್ತು ಪರಿಪೂರ್ಣ ರೀಡಬಿಲಿಟಿ ನೀಡುತ್ತದೆ. ಸುಲಭವಾಗಿ ಓದಬಲ್ಲ ಗ್ರಾಫಿಕ್ಸ್ ಗುಂಡಗಿನ ಡಿಜಿಟಲ್ ಟ್ಯಾಕೊಮೀಟರ್ ಹೊಂದಿದ್ದು ಅದು ಗೇರ್ ನಂಬರ್ ಮತ್ತು ಇತರೆ ಉಪಯುಕ್ತ ಮಾಹಿತಿಯಾದ ಫ್ಯೂಯೆಲ್ ಗಾಜ್, ಉಷ್ಣತೆ ಮತ್ತು ಎಂಜಿನ್ ಉಷ್ಣತೆಯನ್ನು ಪ್ರದರ್ಶಿಸುತ್ತದೆ ಪ್ಯಾನೆಲ್‍ಗಳು ಎಲೆಕ್ಟ್ರಾನಿಕ್ ಕಂಟ್ರೋಲ್‍ಗಳು ಮತ್ತಿತರೆ ಮಾಹಿತಿಯನ್ನು ಪ್ರದರ್ಶಿಸುತ್ತವೆ.

ಮಲ್ಟಿಸ್ಟ್ರಾಡಾ ವಿ4 ಎಸ್ ಹೊಂದಿಸಬಲ್ಲ 6.5" ಕಲರ್ ಟಿಎಫ್‍ಟಿ ಯೂನಿಟ್ ಹೊಂದಿದೆ. ಅಲ್ಲದೆ ಎಸ್ ಆವೃತ್ತಿಯಲ್ಲಿ ಜಾಯ್‍ಸ್ಟಿಕ್ ಅನ್ನು ಎಡ ಸ್ವಿಚ್‍ಗೇರ್‍ಗೆ ಸೇರಿಸಲಾಗಿದ್ದು ಅದು ಹೊಸ ಮತ್ತು ಅಂತರ್ಬೋಧೆಯ ಮೆನು ಮೂಲಕ ಸುಲಭ ನ್ಯಾವಿಗೇಷನ್ ನೀಡುತ್ತದೆ. ಇತರೆ ಹೊಸ ವಿಶೇಷತೆಗಳಲ್ಲಿ ಡುಕಾಟಿ ಕನೆಕ್ಟ್ ಸಿಸ್ಟಂ ಹೊಂದಿದ್ದು ಅದು ಬ್ಲೂಟೂಥ್ ಮತ್ತು ವೈ-ಫೈ ಮೂಲಕ ಡ್ಯಾಶ್‍ಬೋರ್ಡ್ ಮೇಲೆ ಮೊಬೈಲ್ ಫೋನ್ ಆ್ಯಪ್‍ನ ಮಿರರಿಂಗ್' ಕಾರ್ಯ ನಿರ್ವಹಿಸುತ್ತದೆ ಮತ್ತು ಜಾಯ್‍ಸ್ಟಿಕ್ ಮೂಲಕ ನಿಯಂತ್ರಿಸಬಹುದು. ಇದು ಸಸ್ಪೆನ್ಷನ್ ಸೆಟ್ಟಿಂಗ್ಸ್‍ನಂತಹ ಹೆಚ್ಚುವರಿ ಮಾಹಿತಿಯನ್ನು ಸೈಜಿಕ್ ಜಿಪಿಎಸ್ ನ್ಯಾವಿಗೇಷನ್ ಆ್ಯಪ್ ಮೂಲಕ ಪ್ರದರ್ಶಿಸುತ್ತದೆ, ಅಲ್ಲದೆ ಟಿಎಫ್‍ಟಿ ಯೂನಿಟ್‍ನಲ್ಲಿಯೇ ನ್ಯಾವಿಗೇಷನ್ ಸಿಸ್ಟಂ ಮ್ಯಾಪ್ ನೀಡುತ್ತದೆ. ಇದರೊಂದಿಗೆ ಬಳಕೆದಾರ ಬ್ಲೂಟೂಥ್ ಮೂಲಕ ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂ(ಡಿಎಂಎಸ್) ಅನ್ನು ಒಳಬರುವ/ಹೊರಹೋಗುವ ಕರೆಗಳ ನಿರ್ವಹಣೆಗೆ ಮತ್ತು ಸಂಗೀತ ಆಲಿಸಲು ಬಳಸಬಹುದು.

English summary
Ducati today announced the launch of its much-awaited adventure tourer, the all-new Multistrada V4 and V4 S, priced at INR 18.99 Lacs and INR 23.10 Lacs respectively (Ex-Showroom Pan India).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X