• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ರೀಮ್11 ಬಳಿ ಐಪಿಎಲ್ ಟೈಟಲ್ ಹಕ್ಕು 4 ತಿಂಗಳು ಮಾತ್ರ!

|

ಬೆಂಗಳೂರು, ಆ. 18: ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020 ಶೀರ್ಷಿಕೆ ಪ್ರಾಯೋಜಕತ್ವದ ರೇಸಿನಲ್ಲಿ ಡ್ರೀಮ್11 ಗೆಲುವು ಸಾಧಿಸಿದೆ. ಭಾರಿ ಕುತೂಹಲ ಕೆರಳಿಸಿದ್ದ ಬಿಡ್ಡಿಂಗ್ ನಲ್ಲಿ ಡ್ರೀಮ್ಸ್11 ಸಂಸ್ಥೆಗೆ ಟೈಟಲ್ ಹಕ್ಕು ನೀಡಲಾಗಿದೆ ಎಂದು ಮಾಜಿ ಕ್ರಿಕೆಟರ್, ಐಪಿಎಲ್ ಚೇರ್‌ಮೆನ್ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.

   ಚೀನಾ ಕಂಪನಿ Vivo ಗೆ ಸೆಡ್ಡು ಹೊಡೆದು IPL ಗೆ ಎಂಟ್ರಿ ಕೊಟ್ಟ Dream 11 | Oneindia Kannada

   ಡ್ರೀಮ್ಸ್11 ಸುಮಾರು 222 ಕೋಟಿ ರು ನೀಡಿ ಪಡೆದ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕು 4 ತಿಂಗಳು 13 ದಿನಗಳ ಕಾಲ ಅವಧಿಯನ್ನು ಹೊಂದಿದೆ.

   ಐಪಿಎಲ್ ಟೈಟಲ್ ಹಕ್ಕು ಹೊಂದಿದ್ದ ಚೀನಾ ಮೂಲದ ಸಂಸ್ಥೆ ವಿವೊ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಮುಖ್ಯ ಪ್ರಾಯೋಜಕರಾಗಲು ಹತ್ತು ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿದ್ದವು. ಈ ನಡುವೆ ಟಾಟಾ ಸನ್ಸ್ ಸಂಸ್ಥೆ ಈ ರೇಸಿನಲ್ಲಿ ಉಳಿದ ಕಂಪನಿಗಳಿಗಿಂತ ಮುಂದಿದೆ ಎಂಬ ಸುದ್ದಿ ಬಂದಿತ್ತು.

   ಆಯ್ಕೆಗೆ ಏನು ಮಾನದಂಡ

   ಆಯ್ಕೆಗೆ ಏನು ಮಾನದಂಡ

   ಗರಿಷ್ಠ ಮೌಲ್ಯದ ಬಿಡ್ ಮಾಡಿದ ಸಂಸ್ಥೆಗೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಸಿಗುವುದಿಲ್ಲ, ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಲ್ಲವನ್ನು ಪರಿಗಣಿಸಿ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧಾರ ಕೈಗೊಂಡಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ. ಆದರೆ ಎಲ್ಲಾ ಪ್ರಮುಖ ಸಂಸ್ಥೆಗಳನ್ನು ಹಿಂದಿಕ್ಕಿ ಫ್ಯಾಂಟಸಿ ಲೀಗ್ ದಿಗ್ಗಜ ಸಂಸ್ಥೆ ಡ್ರೀಮ್11 ಈ ಹಕ್ಕು ಪಡೆದುಕೊಂಡಿದೆ.

   ಶೀರ್ಷಿಕೆ ಪ್ರಾಯೋಜಕತ್ವ ಪಡೆದ ಕಂಪನಿಯ ಲೋಗೋ ತಂಡಗಳ ಆಟಗಾರರ ಜೆರ್ಸಿಯಲ್ಲಿ ಎದ್ದು ಕಾಣಲಿದೆ. ಪ್ರಶಸ್ತಿ ವಿತರಣಾ ಸಮಾರಂಭಲ್ಲೂ ಪ್ರಮುಖವಾಗಿ ಕಾಣಿಸಲಿದೆ.

   ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ

   ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ

   ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ ಹೊಂದಿತ್ತು. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ ಮುಂದಿನ 4 ತಿಂಗಳ ಅವಧಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕಿಗೆ 300ರಿಂದ 350 ಕೋಟಿ ರೂ. ಮೊತ್ತದ ಒಪ್ಪಂದದ ನಿರೀಕ್ಷೆಯಲ್ಲಿದೆ. ಇದಲ್ಲದೆ, ರಾಷ್ಟ್ರೀಯತೆ, ಸ್ಥಳೀಯ ಕಂಪನಿ, ಚೀನಾ ಸಂಪರ್ಕವಿಲ್ಲದ ಸಂಸ್ಥೆಯ ಹುಡುಕಾಟ ನಡೆಸಲಾಗಿತ್ತು. ಈಗ ಡ್ರೀಮ್11ನ 222 ಕೋಟಿ ರುಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

   ಯಾವ ಯಾವ ಸಂಸ್ಥೆಗಳು ರೇಸಿನಲ್ಲಿದ್ದವು

   ಯಾವ ಯಾವ ಸಂಸ್ಥೆಗಳು ರೇಸಿನಲ್ಲಿದ್ದವು

   ಟಾಟಾ ಗ್ರೂಪ್ ಅಲ್ಲದೆ ದೇಶದ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಪತಂಜಲಿ ಹೊರತುಪಡಿಸಿ, ಇನ್ನೂ ಅನೇಕ ಕಂಪನಿಗಳು ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ವ್ಯವಹಾರಗಳನ್ನು ಪಡೆಯಲು ಬಯಸಿದ್ದವು. ಇವುಗಳಲ್ಲಿ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್11 ಮತ್ತು ಭಾರ್ತಿ ಕ್ರಿಕೆಟ್ ತಂಡಕ್ಕೆ ಜರ್ಸಿ ಪ್ರಾಯೋಜಕ ಬೈವ್ಸ್, ಬೆಂಗಳೂರಿನ ಆನ್ ಲೈನ್ ಲರ್ನಿಂಗ್ ಸಂಸ್ಥೆ ಅನ್ ಅಕಾಡೆಮಿ ಸೇರಿದೆ.

   ಐಪಿಎಲ್ 13 ಯಾವಾಗ? ಎಲ್ಲಿ?

   ಐಪಿಎಲ್ 13 ಯಾವಾಗ? ಎಲ್ಲಿ?

   13ನೇ ಆವೃತ್ತಿಯ ಐಪಿಎಲ್ ಯುಎಇಯ ದುಬೈ, ಅಬು ದಾಭಿ ಹಾಗೂ ಶಾರ್ಜಾದಲ್ಲಿ ನಡೆಯಲಿದೆ. ಮಾರ್ಚ್ 19ಕ್ಕೆ ಆರಂಭವಾಗಬೇಕಿದ್ದ ಟೂರ್ನಮೆಂಟ್ ಕೊರೊನಾವೈರಸ್ ಸೋಂಕು ಭೀತಿಯಿಂದ ಮುಂದೂಡಲ್ಪಟ್ಟಿತ್ತು.

   ಸೆಪ್ಟೆಂಬರ್ 19ರಿಂದ ನವೆಂಬರ್ 10, 2020ರ ತನಕ 53 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 10 ಹಗಲು ರಾತ್ರಿ ಪಂದ್ಯಗಳಿದ್ದು, 3.30 ಮಧ್ಯಾಹ್ನ (ಭಾರತೀಯ ಕಾಲಮಾನ) ಹಾಗೂ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

   English summary
   Dream11 wins IPL 2020 title sponsorship rights for ₹222 crore. Dream11 will hold the rights for four months and 13 days.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X