• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾಖಲೆಯ ಏರಿಕೆ ಕಂಡ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು: 3 ದಿನದಲ್ಲಿ ಸುಮಾರು 900 ರೂ. ಏರಿಕೆ

|

ನವದೆಹಲಿ, ಸೆಪ್ಟೆಂಬರ್ 18: ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು ಶುಕ್ರವಾರ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಡಾ. ರೆಡ್ಡಿ ಅವರ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಭಾರೀ ಏರಿಕೆ ದಾಖಲಿಸಿದ್ದಲ್ಲದೆ ಹೊಸ 52 ವಾರಗಳ ದಾಖಲೆಯನ್ನು ತಲುಪಿದೆ.

ರಷ್ಯಾದ ಸಾವರಿನ್ ಹೆಲ್ತ್ ಫಂಡ್ ಭಾರತದ ರೆಡ್ಡೀಸ್ ಲ್ಯಾಬೊರೇಟರಿಗೆ ಸ್ಪುಟ್ನಿಕ್ V ಲಸಿಕೆಯ 100 ಮಿಲಿಯನ್ ಡೋಸ್‌ಗಳನ್ನು ನೀಡುವುದಾಗಿ ತಿಳಿಸಿದ ಬಳಿಕ ಸೆ.16ರಂದು ಏರಿಕೆ ಕಾಣಲಾರಂಭಿಸಿದ ಷೇರುಗಳು ಶುಕ್ರವಾರ ಮತ್ತೊಂದು ಮಟ್ಟವನ್ನು ತಲುಪಿದೆ.

ಒಂದೇ ತಿಂಗಳಲ್ಲಿ ಹೂಡಿಕೆದಾರರ ಹಣವನ್ನ ದ್ವಿಗುಣಗೊಳಿಸಿದ ಷೇರು: ಯಾವುದು ಗೊತ್ತೆ?

ಇದಕ್ಕೆ ಪ್ರಮುಖ ಕಾರಣ ಕ್ಯಾನ್ಸರ್ ಚಿಕಿತ್ಸೆಯ ರೆವ್ಲಿಮಿಡ್ ಬಗ್ಗೆ ಯುಎಸ್ ಮೂಲದ ಬ್ರಿಸ್ಟಲ್-ಮೈಯರ್ಸ್ ಸ್ಕ್ವಿಬ್ ಘಟಕ, ಸೆಲ್ಜೆನ್ ಜೊತೆ ಪೇಟೆಂಟ್ ಮೊಕದ್ದಮೆಯನ್ನು ಇತ್ಯರ್ಥಪಡಿಸಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಹೇಳಿದ ನಂತರ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು ಶುಕ್ರವಾರ ಶೇ. 10 ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇಯಲ್ಲಿ 506.10 ರೂಪಾಯಿ ಏರಿಕೆಗೊಂಡು 5,333.35 ರೂಪಾಯಿಗೆ ಜಿಗಿದಿದೆ. ಇಂದು ವಹಿವಾಟಿನಲ್ಲಿ ಗರಿಷ್ಠ 5,496.95 ರೂಪಾಯಿ ವರೆಗೆ ತಲುಪಿತ್ತು. ಇನ್ನು ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ 500.10 ರೂಪಾಯಿ ಏರಿಕೆಗೊಂಡು 5,326.70ಗೆ ವಹಿವಾಟು ಅಂತ್ಯಗೊಳಿಸಿದೆ.

"ಮೊಕದ್ದಮೆಯಲ್ಲಿನ ಎಲ್ಲಾ ಬಾಕಿ ಹಕ್ಕುಗಳ ಇತ್ಯರ್ಥದಲ್ಲಿ, ನಿಯಂತ್ರಕ ಅನುಮೋದನೆಗೆ ಒಳಪಟ್ಟು ಮಾರ್ಚ್ 2022 ರ ನಂತರ ಗೌಪ್ಯ ದಿನಾಂಕದಂದು ಅಮೆರಿಕಾದಲ್ಲಿ ಪರಿಮಾಣ-ಸೀಮಿತ ಪ್ರಮಾಣದ ಜೆನೆರಿಕ್ ಲೆನಾಲಿಡೋಮೈಡ್ ಕ್ಯಾಪ್ಸುಲ್‌ಗಳನ್ನು ಮಾರಾಟ ಮಾಡಲು ಡಾ. ರೆಡ್ಡಿ ಅವರಿಗೆ ಪರವಾನಗಿ ನೀಡಲು ಸೆಲ್ಜೆನ್ ಒಪ್ಪಿಕೊಂಡಿದ್ದಾರೆ" ಎಂದು ಡಾ. ರೆಡ್ಡಿ ಗುರುವಾರ ಮಾರುಕಟ್ಟೆ ಸಮಯದ ನಂತರ ನಿಯಂತ್ರಕ ಫೈಲಿಂಗ್‌ನಲ್ಲಿ ಹೇಳಿದೆ.

ಡಾ. ರೆಡ್ಡಿಸ್, ಲುಪಿನ್, ಸಿಪ್ಲಾ ಮತ್ತು ಸನ್ ಫಾರ್ಮಾ ಸೇರಿದಂತೆ ದೇಶದ 10 ಔಷಧ ತಯಾರಕರ ಕಾರ್ಯಕ್ಷಮತೆಯನ್ನು ಹೊಂದಿರುವ ನಿಫ್ಟಿ ಫಾರ್ಮಾ ಸೂಚ್ಯಂಕವು ಶೇಕಡಾ 3.66 ರಷ್ಟು ಜಿಗಿದಿದೆ.

English summary
Dr.Reddy's Laboratories shares surged more than 10 per cent to a record high on Friday, after the it had settled a patent litigation with US-based Bristol-Myers Squibb's unit, Celgene, over cancer treatment Revlimid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X