• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಪಿಐಐಟಿ ಶ್ರೇಯಾಂಕ ಪಟ್ಟಿ; 17 ರಿಂದ ಮೊದಲ ಸ್ಥಾನಕ್ಕೆ ಜಿಗಿದ ಕರ್ನಾಟಕ

|
Google Oneindia Kannada News

ಬೆಂಗಳೂರು, ಜೂನ್‌ 30: ಸುಲಲಿತ ವ್ಯವಹಾರ (ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌) ಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.

2020ರ ಸೆಪ್ಟೆಂರ್‌ನಲ್ಲಿ ಬಿಡುಗಡೆಯಾಗಿದ್ದ ಕಳೆದ ಸಾಲಿನ ಶ್ರೇಯಾಂಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ, "ಟಾಪ್ ಅಚೀವರ್‌" ಆಗಿ ಹೊರಹೊಮ್ಮಿರುವುದು ವಿಶೇಷ. 2020ರ ವಹಿವಾಟು ಸುಧಾರಣೆ ಕ್ರಿಯಾ ಯೋಜನೆಯಲ್ಲಿ (ಎಸ್‌ಬಿಆರ್‌ಎಪಿ) ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಾರ್ಷಿಕ ಸುಧಾರಣಾ ಕ್ರಮಗಳ ಪರಿಶೀಲನಾ ವರದಿ ಬಿಡುಗಡೆಯಾಗಿದೆ.

ಕಳೆದ ವರ್ಷ ಡಿಪಿಐಐಟಿ ಸೂಚಿಸಿದ್ದ 187 ಸುಧಾರಣಾ ಕ್ರಮಗಳಲ್ಲಿ ಶೇ.100ರಷ್ಟು ಅನುಷ್ಠಾನಗೊಳಿಸಿದ್ದರೂ, ಕರ್ನಾಟಕ 2019 ರಲ್ಲಿ 17ನೇ ಸ್ಥಾನಕ್ಕೆ ಕುಸಿದಿತ್ತು. ಹಲವು ಸುಧಾರಣಾ ಕ್ರಮಗಳ ಅನುಷ್ಠಾನದ ಜತೆಗೆ ರಾಜ್ಯದ 30ಕ್ಕೂ ಹೆಚ್ಚು ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಪೂರಕ ಪ್ರಯತ್ನಗಳಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯ, ಈ ಶ್ರೇಣಿಗೆ ಏರಲು ಸಾಧ್ಯವಾಗಿದೆ.

ಆಂಧ್ರ ಪ್ರದೇಶ, ಗುಜರಾತ್‌, ಹರ್ಯಾಣ, ಪಂಜಾಬ್‌, ತಮಿಳುನಾಡು, ತೆಲಂಗಾಣ ಸಹ "ಅಗ್ರ ಸಾಧಕ" ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಡಿಪಿಐಐಟಿ ಶ್ರೇಯಾಂಕ ನಿರ್ಧರಿಸುತ್ತದೆ

ಡಿಪಿಐಐಟಿ ಶ್ರೇಯಾಂಕ ನಿರ್ಧರಿಸುತ್ತದೆ

ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ ನಿಯಂತ್ರಣ ಕಾಯ್ದೆ, ಪರಿಸರ ಪರವಾನಗಿ, ಪ್ರಕ್ರಿಯೆಗಳ ಸರಳೀಕರಣ, ಬಳಕೆದಾರರ ಸಂಪರ್ಕ, ಪ್ರತಿಕ್ರಿಯೆ, ಕುಂದುಕೊರತೆಗಳ ನಿವಾರಣೆ ಸೇರಿದಂತೆ ವಿವಿಧ ಅಂಶಗಳ ಸಮೀಕ್ಷೆ ನಡೆಸಿದ ಡಿಪಿಐಐಟಿ ಶ್ರೇಯಾಂಕ ನಿರ್ಧರಿಸುತ್ತದೆ.

ನಮ್ಮ ಸರ್ಕಾರ ಸುಲಲಿತ ವ್ಯವಹಾರಕ್ಕೆ ಒತ್ತು

ನಮ್ಮ ಸರ್ಕಾರ ಸುಲಲಿತ ವ್ಯವಹಾರಕ್ಕೆ ಒತ್ತು

"ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಕೈಗಾರಿಕಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ಇದ್ದ ತೊಡಕು ನಿವಾರಿಸಲಾಗಿದೆ. ನಮ್ಮ ಸರ್ಕಾರ ಸುಲಲಿತ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಹೂಡಿಕೆದಾರರು ನಮ್ಮ ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡುತ್ತಿದ್ದಾರೆ" ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌. ನಿರಾಣಿ ಹೇಳಿದರು.

ಕರ್ನಾಟಕ ಉದ್ಯೋಗ ಮಿತ್ರ

ಕರ್ನಾಟಕ ಉದ್ಯೋಗ ಮಿತ್ರ

"ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಪೂರಕವಾದ ಸುಧಾರಣಾ ಕ್ರಮಗಳ ಅನುಷ್ಠಾನವನ್ನು ಖಾತ್ರಿಪಡಿಸುವ ನೋಡಲ್‌ ಏಜೆನ್ಸಿ 'ಕರ್ನಾಟಕ ಉದ್ಯೋಗ ಮಿತ್ರ' ಡಿಪಿಐಐಟಿ ಮಾಡಿದ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಫಲವಾಗಿ ರಾಜ್ಯ ಇಂದು ಅಗ್ರ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ" ಎಂದು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಡಾ.ಇ ವಿ ರಮಣರೆಡ್ಡಿರವರು ಹೇಳಿದ್ದಾರೆ.

ಕೈಗಾರಿಕಾ ಪೂರಕ ಸೌಲಭ್ಯ ನೀಡುವಲ್ಲಿ ಸಫಲ

ಕೈಗಾರಿಕಾ ಪೂರಕ ಸೌಲಭ್ಯ ನೀಡುವಲ್ಲಿ ಸಫಲ

ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ರಾಜ್ಯದಲ್ಲಿ ಉದ್ಯಮ ಸ್ನೇಹಿ ಕ್ರಮಗಳ ಜಾರಿ ಮತ್ತು ಕೈಗಾರಿಕಾ ಪೂರಕ ಸೌಲಭ್ಯ ಒದಗಿಸುವಲ್ಲಿ 'ಕರ್ನಾಟಕ ಉದ್ಯೋಗ ಮಿತ್ರ' ಸಫಲವಾಗಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ಮೂಲಕ ರಾಜ್ಯ ಅಗ್ರ ಶ್ರೇಯಾಂಕ ಪಡೆಯುವಂತಾಗಿದೆ ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರು ಗುಂಜನ್‌ ಕೃಷ್ಣ ಹೇಳಿದ್ದಾರೆ.

ಕರ್ನಾಟಕ ಕೈಗಾರಿಕ ಸ್ನೇಹಿ ಕಾರ್ಯಕ್ರಮಗಳು ಮತ್ತು ಪರಿಣಾಮಕಾರಿಯಾಗಿ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ನಿರಂತರವಾದ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಸುಲಲಿತ ವ್ಯವಹಾರಗಳ ಶ್ರೇಯಾಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ ದೊರೆತಿದೆ. 17ನೇ ಸ್ಥಾನದಿಂದ ಟಾಪ್‌ ಅಚೀವರ್‌ ಆಗಿ ರಾಜ್ಯ ಹೊರಹೊಮ್ಮಿದೆ.

Recommended Video

   Bommai ಹಾಗು Modiಯವರು Bosch ಬಗ್ಗೆ ಹೇಳಿದ್ದೇನು? | Oneindia Kannada
   English summary
   Karnataka in top rank in survey report released by the Department of Industry and Internal Trade Promotion (DPIIT) on 'Easy of Doing Business', know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X