ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಲ್ ಮತ್ತು ಹೂಪಿಯಿಂದ ಗ್ರಾಹಕರ ಮನೆ ಬಾಗಿಲಲ್ಲೇ ದ್ವಿಚಕ್ರ ವಾಹನಗಳ ಸರ್ವೀಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01, 2020: ಫಿನಿಶ್ಡ್ ಲ್ಯೂಬ್ರಿಕೆಂಟ್ಸ್ ನಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಶೆಲ್ ಲ್ಯೂಬ್ರಿಕೆಂಟ್ಸ್ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನಗಳ ಮಾರುಕಟ್ಟೆಯಾಗಿರುವ ಹೂಪಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರ ಮೂಲಕ ಭಾರತದಲ್ಲಿ ಸಂಪರ್ಕವಿಲ್ಲದೆ, ಸುಲಭವಾಗಿ ವಿಶ್ವಾಸಾರ್ಹತೆಯ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ.

Recommended Video

1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

ಕೋವಿಡ್-19 ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಯಾನಿಕ್ ಸಮುದಾಯಕ್ಕೆ ಆರ್ಥಿಕ ಆದಾಯದ ಮೂಲವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿ ಗ್ರಾಹಕರಿಗೆ ಸುರಕ್ಷಿತವಾದ ಮತ್ತು ವಿಶ್ವಾಸಾರ್ಹವಾದ ಸೇವೆಗಳನ್ನು ಒದಗಿಸುವುದಾಗಿದೆ.

 ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ

ಕೋವಿಡ್-19 ವ್ಯವಹಾರಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದ ಪರಿಣಾಮ, ಭಾರತೀಯ ಮೆಕ್ಯಾನಿಕ್ ಸಮುದಾಯದ ಬಹುತೇಕ ಮಂದಿ ಉದ್ಯೋಗವಿಲ್ಲದೇ ತಮ್ಮ ಊರುಗಳಿಗೆ ತೆರಳಬೇಕಾದ ಅನಿವಾರ್ಯತೆ ಬಂದೊದಗಿತ್ತು. ಇದರಿಂದಾಗಿ ಅವರಿಗೆ ದುಡಿಮೆ ಇಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Doorstep Bike Service And Repair In Bengaluru: Shell Lubricants Partnership With Hoopy

ಶೆಲ್ ಲ್ಯೂಬ್ರಿಕೆಂಟ್ಸ್ ಇಂಡಿಯಾದ ಕಂಟ್ರಿ ಹೆಡ್ ರಾಮನ್ ಓಝಾ ಅವರು ಈ ಉಪಕ್ರಮದ ಬಗ್ಗೆ ಮಾತನಾಡಿ, ಕಳೆದ ಕೆಲವು ತಿಂಗಳಲ್ಲಿ ನಾವು ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಗಳೊಂದಿಗೆ ಸಾವಿರಾರು ವರ್ಚುವಲ್ ಸಂವಾದಗಳನ್ನು ನಡೆಸಿದ ಸಂದರ್ಭದಲ್ಲಿ ತಮ್ಮ ವ್ಯವಹಾರಗಳು ಸಂಪೂರ್ಣ ಕುಸಿದಿವೆ ಮತ್ತು ತಮ್ಮ ಆದಾಯದ ಪರಿಸ್ಥಿತಿ ಅತಂತ್ರವಾಗಿದೆ ಎಂಬುದನ್ನು ನಮ್ಮ ಗಮನಕ್ಕೆ ತಂದರು. ಈ ಸಂಕಷ್ಟದಿಂದ ಪಾರು ಮಾಡಲು ಏನಾದರೂ ಮಾಡಬೇಕೆಂದು ನಮಗೆ ಮನವಿ ಮಾಡಿದರು ಮತ್ತು ಇದನ್ನು ಮನಗಂಡು ನಾವು ಈ ಉಪಕ್ರಮವನ್ನು ಆರಂಭಿಸುತ್ತಿದ್ದೇವೆ. ಇದು ಕೇವಲ ಮೆಕ್ಯಾನಿಕ್ ಸಮುದಾಯದ ಜೀವನೋಪಾಯವನ್ನು ಸುಧಾರಣೆ ಮಾಡುವುದಷ್ಟೇ ಅಲ್ಲ, ಅವರಲ್ಲಿ ಸ್ವಾವಲಂಬನೆಯ ಮಟ್ಟವನ್ನು ಸೃಷ್ಟಿಸಲಿದೆ'' ಎಂದು ತಿಳಿಸಿದರು.

ಶೆಲ್ ಮತ್ತು ಹೂಪಿ ಪಾಲುದಾರರಾಗಿ ಮೆಕ್ಯಾನಿಕ್ ಸಮುದಾಯ ಸುರಕ್ಷಿತವಾಗಿ ಹಿಂದಿನ ವ್ಯವಹಾರ ಮಟ್ಟಕ್ಕೆ ಹಿಂದಿರುಗುವಂತೆ ನೆರವಾಗಲಿದೆ. ಮುಂಬರುವ ದಿನಗಳಲ್ಲಿ, ಈ ಪಾಲುದಾರಿಕೆಯ ಮೂಲಕ 5000 ದಷ್ಟು ಮೆಕ್ಯಾನಿಕ್ ಗಳಿಗೆ ಸೂಕ್ತ ತರಬೇತಿ ಮತ್ತು ಅವರು ವ್ಯವಹಾರವನ್ನು ಆರಂಭಿಸಲು ನೆರವಾಗಲಿದೆ.

ಇಷ್ಟಲ್ಲದೆ ಮೆಕ್ಯಾನಿಕ್ ಗಳು ಆಟೋಮೋಟಿವ್ ಉದ್ಯಮದ ಪರಿಣತರಿಂದ ಇತ್ತೀಚಿನ ತಂತ್ರಜ್ಞಾನ ಸೇರಿದಂತೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಪಡೆದುಕೊಂಡು ಸಬಲರಾಗಿ, ಸ್ವಯಂ-ಸುಸ್ಥಿರತೆಯ ಮೆಕ್ಯಾನಿಕ್ ಗಳಾಗಿ ಹೊರಹೊಮ್ಮಲಿದ್ದಾರೆ. ಈ ಪಾಲುದಾರಿಕೆ ಮತ್ತು ಕಾರ್ಯಕ್ರಮವು ಮೆಕ್ಯಾನಿಕ್ ಗಳಿಗೆ ಸ್ಥಿರವಾದ ಬ್ಯುಸಿನೆಸ್ ಅನ್ನು ಖಾತರಿಪಡಿಸುತ್ತದೆ. ಈ ಮೂಲಕ ಗ್ಯಾರೇಜ್ ಗಳಲ್ಲಿ ಶೇ.30-40 ರಷ್ಟು ಹೆಚ್ಚು ಆದಾಯ ಗಳಿಸುವ ಅವಕಾಶಗಳನ್ನು ಸೃಷ್ಟಿಸಲಿವೆ.

ಪ್ರಸ್ತುತ ಕಾಂಟ್ಯಾಕ್ಟ್ ಲೆಸ್ ಸೇವೆಗಳಿಗೆ ಗ್ರಾಹಕರಿಂದ ಹೆಚ್ಚು ಬೇಡಿಕೆಗಳು ಬರುತ್ತಿವೆ. ನಮ್ಮ ಪಾಲುದಾರಿಕೆಯು ಮುಂಗಡ ಬುಕಿಂಗ್ ಮಾಡಬಹುದಾದ ತಂತ್ರಜ್ಞಾನ ಆಧಾರಿತ ಪ್ಲಾಟ್ ಫಾರ್ಮ್ ಮೂಲಕ ಸುಲಭ ದರದ ಸೇವೆಗಳನ್ನು ಒದಗಿಸುತ್ತದೆ. ಅಲ್ಲದೇ, ಗ್ರಾಹಕರಿಗೆ ತಮ್ಮ ಬೇಡಿಕೆ ಅಥವಾ ಬುಕಿಂಗ್ ನ ರಿಯಲ್-ಟೈಂ ಆಧಾರದಲ್ಲಿ ಟ್ರ್ಯಾಕ್ ಸೇವೆಯನ್ನೂ ಪಡೆಯಬಹುದಾಗಿದೆ.

ಅಲ್ಲದೇ, ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಆರಾಮವಾಗಿ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಎಲ್ಲೇ ಇದ್ದರೂ, ಯಾವುದೇ ಸಮಯದಲ್ಲಾದರೂ ವಿಶ್ವಾಸಾರ್ಹತೆಯ ಮತ್ತು ನುರಿತ ವೃತ್ತಿಪರರಿಂದ ತಮ್ಮ ವಾಹನಗಳ ಸರ್ವೀಸ್ ಮಾಡಿಸಿಕೊಳ್ಳಬಹುದಾಗಿದೆ.

English summary
Shell lubricants, has partnered with Hoopy, a unique technology-driven business to bring contactless, easily accessible,and immensely reliable two-wheeler doorstep servicing to India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X