ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವಾ ತೆರಿಗೆ ಹೆಚ್ಚಿಗೆ ಕೇಳಿದರೆ ದೂರು ಕೊಡಿ

|
Google Oneindia Kannada News

ನವದೆಹಲಿ, ಏ. 20: ನೀವು ಹೊಟೆಲ್ ಗೆ, ಸಿನಿಮಾ ಮಂದಿರಕ್ಕೆ ತೆರಳಿದ ವೇಳೆ ನೀಡುವ ಬಿಲ್ ಅಥವಾ ಟಿಕೆಟ್ ಮೇಲೆ ಒಮ್ಮೆ ಕಣ್ಣಾಡಿಸುವುದು ಒಳಿತು. ಯಾರಾದರೂ ಶೇ. 14 ಸೇವಾ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರೆ ಅವರ ಬಗ್ಗೆ ಸ್ಥಳೀಯ ತೆರಿಗೆ ಕಚೇರಿಗೆ ತೆರಳಿ ದೂರು ದಾಖಲಿಸಿ.

ಬಜೆಟ್ ನಲ್ಲಿ ಹೇಳಿದಂತೆ ನಾಗರೀಕರು ಶೇ. 14 ರಷ್ಟು ಸೇವಾ ತೆರಿಗೆಯನ್ನು ಈಗಲೇ ಪಾವತಿ ಮಾಡಬೇಕಾಗಿಲ್ಲ. ಸಂಸತ್ತಿನಲ್ಲಿ ಸಂಸತ್ತಿನಲ್ಲಿ ಹಣಕಾಸು ಮಸೂದೆ ಇನ್ನೂ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪಾವತಿ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.[ಬಜೆಟ್ ಶಾಕ್ : ಹೋಟೆಲ್ ಊಟ ಇನ್ಮುಂದೆ ದುಬಾರಿ?]

tax

ಬಜೆಟ್​ನಲ್ಲಿ ಸೇವಾತೆರಿಗೆಯನ್ನು ಶೇ. 12 ರಿಂದ ಶೇ. 14ಕ್ಕೆ ಏರಿಕೆ ಮಾಡುವುದಾಗಿ ತಿಳಿಸಿತ್ತು. ಹಣಕಾಸು ಮಸೂದೆಇನ್ನೂ ಅನುಮೋದನೆಯಾಗಿಲ್ಲ. ಅಂಗೀಕಾರವಾದ ನಂತರ ಸಚಿವಾಲಯ ಹೆಚ್ಚುವರಿ ಸೇವಾ ತೆರಿಗೆ ಸಂಗ್ರಹಕ್ಕೆ ಅಧಿಸೂಚನೆಯನ್ನು ಹೊರಡಿಸಲಿದೆ.

ಸರ್ಕಾರದ ಹೆಸರಿನಲ್ಲಿ ಯಾರಾದರೂ ಶೇ. 14 ಸೇವಾ ತೆರಿಗೆ ಸಂಗ್ರಹ ಮಾಡುತ್ತಿದ್ದರೆ ಅವರ ವಿರುದ್ಧ ತೆರಿಗೆ ಆಯುಕ್ತರಿಗೆ ದೂರು ದಾಖಲಿಸಬಹುದು ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಶಕ್ತಿಕಾಂತ ದಾಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.[ಕೇಂದ್ರ ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ? ]

ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಲ್ಲಿ ಸೇವಾ ತೆರಿಗೆಯನ್ನು ಹೆಚ್ಚು ಮಾಡಿದ್ದರು. ಅಲ್ಲದೇ ಬಂಡವಾಳ ಕ್ರೂಢಿಕರಣಕ್ಕೆ ಇದು ನೆರವಾಗಲಿದೆ ಎಂದು ಹೇಳಿದ್ದರು. ಆದರೆ ಅಧಿಕೃತ ಅಧಿಸೂಚನೆ ಹೊರಡಿಸುವ ಮುನ್ನ ಸೇವಾ ತೆರಿಗೆ ಹೆಚ್ಚಳ ವಸೂಲಿ ಅಪರಾಧವಾಗುತ್ತದೆ ಎಂದು ತಿಳಿಸಿದೆ.

English summary
The Finance Ministry asked people not to pay higher service tax of 14 per cent, proposed in the budget, as the Finance Bill has not yet been passed by Parliament. Revenue Secretary Shktikanta Das said customers should lodge a complaint with the local Chief Commissioner if any establishment asks for 14 per cent service tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X