ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ ಬಿಸಿ: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ?

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಮೊಬೈಲ್ ಫೋನ್‍ಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಿಸುವ ಯಾವುದೇ ಪ್ರಸ್ತಾವವನ್ನು ಪರಿಗಣಿಸದಂತೆ ಇಂಡಿಯಾ ಸೆಲ್ಯುಲರ್ & ಇಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ಸಂಸ್ಥೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.

ಮೊಬೈಲ್ ಹ್ಯಾಂಡ್‍ಸೆಟ್ ಮೇಲಿನ ಜಿಎಸ್‍ಟಿ ದರವನ್ನು ಶೇಕಡ 12ರಿಂದ 18ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಜಿಎಸ್‍ಟಿ ದರ ಬದಲಾವಣೆಯು ಮೊಬೈಲ್ ಫೋನ್ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದು ಬಹು ಸೇವೆಗಳ ಮತ್ತು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಂಥ ಪ್ರಮುಖ ಸೇವೆ ಮತ್ತು ಪ್ರೋಗಾಂಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಐಸಿಇಎ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಮೇಕ್ ಇನ್ ಇಂಡಿಯಾದಲ್ಲಿ ಮೊಬೈಲ್ ಫೋನ್ ವಲಯ ಚಾಂಪಿಯನ್ ವಲಯವಾಗಿ ರೂಪುಗೊಂಡಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಅತ್ಯಂತ ಉತ್ತಮ ಪ್ರಗತಿ ಸಾಧಿಸಿದ ವಲಯಗಳಲ್ಲಿ ಇದು ಒಂದಾಗಿದ್ದು, ಉತ್ಪಾದನೆ/ ಒಟ್ಟು ಪೂರೈಕೆ ಹೀಗೆ ಎಲ್ಲ ವಲಯಗಳಲ್ಲೂ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ ವ್ಯಾಪಕ

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ ವ್ಯಾಪಕ

ಸ್ಮಾರ್ಟ್ ಫೋನ್‍ಗಳಿಗ ಮಾರುಕಟ್ಟೆ ಬೇಡಿಕೆ ವ್ಯಾಪಕವಾಗಿದ್ದು, ಪ್ರತಿ ವರ್ಷ ಕೂಡಾ ಶ್ಲಾಘನೀಯ ದರದಲ್ಲಿ ಪ್ರಗತಿ ಕಾಣುತ್ತಿದೆ. 2013-14ರಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳಿಗೆ ಇದ್ದ ಬೇಡಿಕೆ ದರ 57000 ಕೋಟಿ ರೂಪಾಯಿ ಇದ್ದುದು 2018-19ರ ವೇಳೆಗೆ 1,80,000 ಕೋಟಿ ರೂಪಾಯಿ ಆಗಿ, ಪ್ರಗತಿದರ ಶೇಕಡ 315ರಷ್ಟಾಗಿದೆ. ಅಂತೆಯೇ ಮೊಬೈಲ್ ಹ್ಯಾಂಡ್‍ಸೆಟ್ ದೇಶೀಯ ಉತ್ಪಾದನೆ ಪ್ರಮಾಣ 2014-15ರಲ್ಲಿ 18900 ಕೋಟಿ ರೂಪಾಯಿ ಇದ್ದುದು 2018-19ರ ಅವಧಿಯಲ್ಲಿ ಇದು ಶೇಕಡ 315ರಷ್ಟು ಅಧಿಕ.

ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ

ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ

ಐಸಿಇಎ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳುವಂತೆ, "ಜಿಎಸ್‍ಟಿ ದರದಲ್ಲಿ ಯಾವುದೇ ಹೆಚ್ಚಳವಾದರೆ, ಅದು 2019ರ ಎನ್‍ಪಿಇ ಗುರಿಯನ್ನು ತಲುಪುವ ಸರ್ಕಾರದ ಯೋಜನೆಯ ಮೇಲೆ ಪರಿಣಾಮವಾಗುತ್ತದೆ. ನಿಮಗೆ ಈಗಾಗಲೇ ತಿಳಿದಿರುವಂತೆ 2019ರ ಎಲೆಕ್ಟ್ರಾನಿಕ್ಸ್ ನ ಹೊಸ ರಾಷ್ಟ್ರೀಯ ನೀತಿಗೆ ಅನುಸಾರವಾಗಿ, 2025-26ರ ಅವಧಿಗೆ ಮೊಬೈಲ್ ಹ್ಯಾಂಡ್‍ಸೆಟ್‍ನ ದೇಶೀಯ ಬಳಕೆ ಪ್ರಮಾಣದ ಮೌಲ್ಯ 80 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.

ದೇಶಿಯ ಬಳಕೆ ಮೌಲ್ಯ 25 ಶತಕೋಟಿ ಡಾಲರ್

ದೇಶಿಯ ಬಳಕೆ ಮೌಲ್ಯ 25 ಶತಕೋಟಿ ಡಾಲರ್

2018-19ರ ಅವಧಿಯಲ್ಲಿ ಮೊಬೈಲ್ ಹ್ಯಾಂಡ್‍ಸೆಟ್‍ಗಳ ದೇಶಿಯ ಬಳಕೆ ಮೌಲ್ಯ 25 ಶತಕೋಟಿ ಡಾಲರ್ ಇದ್ದರೂ, ದರವನ್ನು ತೀರಾ ಅಧಿಕಮಟ್ಟಕ್ಕೆ ಹೆಚ್ಚಾಗಿ ಅಂದಾಜಿಸಲಾಗಿದೆ. ಮಾರುಕಟ್ಟೆ ಬೇಡಿಕೆಯನ್ನು 80 ಶತಕೋಟಿ ಡಾಲರ್‍ಗೆ ಹೆಚ್ಚಿಸಬೇಕಾದರೆ, ಸಾಂಪ್ರದಾಯಿಕ ಪ್ರಗತಿದರದ ಅಂದಾಜನ್ನು ಮೀರಿ ಬೆಳೆಯುವ ನಿರೀಕ್ಷೆ ಇದೆ.

ಇಡೀ ಉದ್ಯಮಕ್ಕೆ ಮಾರಕವಾಗಲಿದೆ

ಇಡೀ ಉದ್ಯಮಕ್ಕೆ ಮಾರಕವಾಗಲಿದೆ

ಆದ್ದರಿಂದ ಈ ಚಾಂಪಿಯನ್ ಉತ್ಪನ್ನದ ಮೇಲಿನ ಜಿಎಸ್‍ಟಿ ದರವನ್ನು ಪರಿಷ್ಕರಿಸುವ ಯಾವುದೇ ಪ್ರಯತ್ನ, ಇಡೀ ಉದ್ಯಮಕ್ಕೆ ಮಾರಕವಾಗಲಿದೆ. ಈ ಸಂದರ್ಭದಲ್ಲಿ ಇಲ್ಲಿ ಉಲ್ಲೇಖಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಜಿಎಸ್‍ಟಿ ಪೂರ್ವ ಯುಗದಲ್ಲಿ ಕೂಡಾ, ವಿಎಟಿ ವ್ಯವಸ್ಥೆಯಡಿಯಲ್ಲಿ, ಮೊಬೈಲ್ ಸೆಟ್‍ಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇಕಡ 4-5ರಷ್ಟು ಮಾತ್ರ ಇತ್ತು ಎಂದು ವಿವರಿಸಿದ್ದಾರೆ.

English summary
The India Cellular and Electronics Association (ICEA), which represents handset makers and electronics industry, has appealed to Karnataka Chief Minister B.S Yediyurappa to not increase GST on mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X