ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರಿಯಿಡೀ ಡಾಮಿನೋಸ್ ಪಿಜ್ಜಾ ಆರ್ಡರ್, ಮೊದಲಿಗೆ ಗುರ್ ಗಾಂವ್ ನಲ್ಲಿ ಪ್ರಯೋಗ

|
Google Oneindia Kannada News

ನವದೆಹಲಿ, ಮಾರ್ಚ್ 10: ಜುಬಿಲಿಯಂಟ್ ಫುಡ್ ವರ್ಕ್ಸ್ ನ ಡಾಮಿನೋಸ್ ಪಿಜ್ಜಾ ಹೊಸ ಪ್ರಯೋಗಕ್ಕೆ ಇಳಿದಿದೆ. ಅದು ಗುರುಗಾಂವ್ ನಲ್ಲಿ. ಅದೇನು ಅಂತೀರಾ? ಇಡೀ ರಾತ್ರಿ ಪಿಜ್ಜಾ ಡೆಲಿವರಿ ಮಾಡುವ ಯೋಜನೆಯದು. ಕಳೆದ ಡಿಸೆಂಬರ್ ಅಂತ್ಯಕ್ಕೆ ಜೆಎಫ್ ಎಲ್ ನ ಲಾಭದಲ್ಲಿ ಶೇ 32ರಷ್ಟು ಕುಸಿತ ಕಂಡಿತ್ತು.

ವರದಿಯೊಂದರ ಪ್ರಕಾರ, "ಗುರುಗಾಂವ್ ನಲ್ಲಿ ರಾತ್ರಿ ವೇಳೆ ಕಾರ್ಯನಿರ್ವಹಿಸುವ ಕಚೇರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಪ್ರಯೋಗಾತ್ಮಕವಾಗಿ ಎಂಬಂತೆ ಅದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ಇಡೀ ರಾತ್ರಿ ಕಾರ್ಯ ನಿರ್ವಹಿಸುವುದಕ್ಕೆ ಮಳಿಗೆಗಳಿಗೇನೂ ಹೆಚ್ಚಿನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ.[ಅಪನಗದೀಕರಣ ನಂತರ ಆರ್ ಬಿಐನಿಂದ 12 ಲಕ್ಷ ಹೊಸ ನೋಟು ಚಲಾವಣೆಗೆ]

Dominos

"ಈ ರೀತಿ ಮಾಡುವುದರಿಂದ ಆಯಾ ಮಳಿಗೆಯ ಮಾರಾಟದಲ್ಲಿ ಹೆಚ್ಚಳವಾಗುತ್ತದೆ. ಜತೆಗೆ ಕಾರ್ಯನಿರ್ವಹಿಸುವ ವೆಚ್ಚವು ಕೂಡ ಸ್ವಲ್ಪ ಮಟ್ಟಿಗೆ ಹಂಚಿಕೆ ಆಗುತ್ತದೆ. ಆದರೆ ಸಿಬ್ಬಂದಿಗೆ ಹಾಗೂ ಸುರಕ್ಷತೆಗೆ ಸ್ವಲ್ಪ ಮಟ್ಟಿನ ಖರ್ಚು ಬರುತ್ತದೆ. ಅದನ್ನು ನಿರ್ವಹಿಸಬೇಕಾಗುತ್ತದೆ" ಎಂದು ಹೇಳಲಾಗಿದೆ.

English summary
Domino's Pizza is piloting all night delivery in Gurgaon, in what is a trial project, as it looks to revive sales in a subdued consumption environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X