ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಸಿಲುಕಿಕೊಂಡಿದೆ ಭಾರತೀಯ ತೈಲ ಕಂಪನಿಗಳ ಕೋಟಿ ಕೋಟಿ ಹಣ

|
Google Oneindia Kannada News

ನವದೆಹಲಿ, ಮೇ 28: ರಷ್ಯಾ ಮೇಲೆ ಅನೇಕ ದೇಶಗಳು ಆರ್ಥಿಕ ನಿಷೇಧ ಹೇರಿರುವುದು ಭಾರತದ ಕೆಲ ತೈಲ ಕಂಪನಿಗಳಿಗೆ ತುಸು ಸಂಕಟಕ್ಕೀಡು ಮಾಡಿದೆ. ರಷ್ಯಾದ ಎರಡು ತೈಲಕ್ಷೇತ್ರಗಳಿಂದ (Oil Fields) ಭಾರತೀಯ ಕಂಪನಿಗಳಿಗೆ ಬರಬೇಕಿರುವ ನೂರಾರು ಕೋಟಿ ಹಣ ರಷ್ಯಾದಲ್ಲೇ ಸಿಲುಕಿಕೊಂಡಿದೆ. ಒಂದು ಅಂದಾಜಿನ ಪ್ರಕಾರ ಈ ಎರಡು ತೈಲಕ್ಷೇತ್ರಗಳ ಲಾಭಾಂಶದಲ್ಲಿ (Dividends) ಭಾರತೀಯ ಕಂಪನಿಗಳಿಗೆ 8 ಬಿಲಿಯನ್ ರೂಬಲ್ (ಸುಮಾರು 974 ಕೋಟಿ ರೂಪಾಯಿ) ಹಣದ ಪಾಲು ಬರಬೇಕಿದೆ.

ಈ ಹಣವನ್ನು ರಷ್ಯಾದ ಬ್ಯಾಂಕುಗಳ ಮೂಲಕ ಭಾರತದ ತೈಲ ಕಂಪನಿಗಳು ಪಡೆಯಬೇಕು. ಆದರೆ, ಆರ್ಥಿಕ ದಿಗ್ಬಂಧನ (Sanctions) ಕಾರಣದಿಂದ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ

ಭಾರತದ ತೈಲ ಕಂಪನಿಗಳಾದ ಆಯಿಲ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಈ ಮೂರು ಸಂಸ್ಥೆಗಳು ಸೇರಿದ ಗುಂಪು ರಷ್ಯಾದ ಪೂರ್ವ ಸೈಬೀರಿಯಾದಲ್ಲಿರುವ ವ್ಯಾಂಕೋರ್ನೆಫ್ಟ್ (Vankorneft) ಮತ್ತು ಟಾಸ್-ಯುರ್ಯಾಖ್ (Tass-Yuryakh) ತೈಲಗಣಿ ಯೋಜನೆಗಳಲ್ಲಿ ಕ್ರಮವಾಗಿ ಶೇ. 23.9 ಮತ್ತು ಶೇ. 29.9ರಷ್ಟು ಪಾಲು ಹೊಂದಿದೆ. ವಾಂಕೋರ್ ತೈಲಗಣಿಗಳಲ್ಲಿ ಬರುವ ಲಾಭಾಂಶವನ್ನು ಆರು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಟಾಸ್-ಯುರ್ಯಾಖ್ ತೈಲಗಣಿಯಲ್ಲಿ ಮೂರು ತಿಂಗಳಿಗೊಮ್ಮೆ ಲಾಭಾಂಶ ನೀಡಲಾಗುತ್ತದೆ.

ಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐಸರಕಾರಿ ಡಿಜಿಟಲ್ ಕರೆನ್ಸಿ: ಅಳೆದು ತೂಗುತ್ತಿರುವ ಆರ್‌ಬಿಐ

"ನಮ್ಮ ಲಾಭಾಂಶವು ರಷ್ಯನ್ ಬ್ಯಾಂಕುಗಳಲ್ಲಿ ಸೇರಿಕೊಂಡಿದ್ದು, ಅದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ" ಎಂದು ಆಯಿಲ್ ಇಂಡಿಯಾ ಸಂಸ್ಥೆಯ ಹಣಕಾಸು ವಿಭಾಗದ ಮುಖ್ಯಸ್ಥ ಹರೀಶ್ ಮಾಧವ್ ಹೇಳಿದ್ದಾರೆ.

ನಿವ್ವಳ ಲಾಭಧಲ್ಲಿ ಶೇ. 92.32ರಷ್ಟು ಹೆಚ್ಚಳ

ನಿವ್ವಳ ಲಾಭಧಲ್ಲಿ ಶೇ. 92.32ರಷ್ಟು ಹೆಚ್ಚಳ

ಸರಕಾರಿ ಸ್ವಾಮ್ಯದ ತೈಲ ಕಂಪನಿಯಾದ ಆಯಿಲ್ ಇಂಡಿಯಾದ ತ್ರೈಮಾಸಿಕ ಆದಾಯದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಮಾಧವ್ ಈ ವಿಚಾರವನ್ನು ತಿಳಿಸಿದ್ದಾರೆ.

ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಆಯಿಲ್ ಇಂಡಿಯಾದ ನಿವ್ವಳ ಲಾಭ 1630 ಕೋಟಿ ರೂಪಾಯಿಗೆ ಏರಿದೆ. ಇದು ಹಿಂದಿನ ಅವಧಿಯದ್ದಕ್ಕಿಂತ ನಿವ್ವಳ ಲಾಭಧಲ್ಲಿ ಶೇ. 92.32ರಷ್ಟು ಹೆಚ್ಚಳವಾಗಿದೆ. ಕಚ್ಛಾ ತೈಲ ಬೆಲೆಗಳು ಏರಿಕೆ ಆಗಿದ್ದು ಆಯಿಲ್ ಇಂಡಿಯಾಗೆ ಅನುಕೂಲ ಮಾಡಿಕೊಟ್ಟಿದೆ.

ಬಿಪಿಸಿಎಲ್ ಮಾರಾಟ ಪ್ರಯತ್ನ ವಿಫಲ; ಸರಕಾರದ ಮುಂದಿನ ಆಯ್ಕೆ?ಬಿಪಿಸಿಎಲ್ ಮಾರಾಟ ಪ್ರಯತ್ನ ವಿಫಲ; ಸರಕಾರದ ಮುಂದಿನ ಆಯ್ಕೆ?

ಆಯಿಲ್ ಇಂಡಿಯಾ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ

ಆಯಿಲ್ ಇಂಡಿಯಾ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ

ಇದೇ ವೇಳೆ, ರಷ್ಯಾದ ತೈಲಕ್ಷೇತ್ರಗಳಿಂದ ಭಾರತದ ಕೆಲ ಕಂಪನಿಗಳು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಇತರ ಭಾರತೀಯ ಕಂಪನಿಗಳಿಗೆ ಇಲ್ಲಿ ಹೂಡಿಕೆ ಮಾಡುವ ಅವಕಾಶ ತೆರೆದಿದೆ. ಆದರೆ, ಯಾವ ಕಂಪನಿಯೂ ಈ ಅವಕಾಶಕ್ಕೆ ಮುಗಿಬೀಳುತ್ತಿಲ್ಲ. ಆಯಿಲ್ ಇಂಡಿಯಾ ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ ಎಂದು ಆ ಸಂಸ್ಥೆಯ ಅಧ್ಯಕ್ಷ ಎಸ್ ಸಿ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆಸ್ತಿಯನ್ನು ಬಿಟ್ಟು ಹೊರಬರಲು ನಿರ್ಧಾರ

ಆಸ್ತಿಯನ್ನು ಬಿಟ್ಟು ಹೊರಬರಲು ನಿರ್ಧಾರ

ರಷ್ಯಾದ ತೈಲ ಮತ್ತು ಅನಿಲ ಗಣಿಗಳಲ್ಲಿ ಭಾರತ್ ಪೆಟ್ರೋಲಿಯಮ್ ಮತ್ತು ಎಕ್ಸಾನ್ ಮೊಬೈಲ್ ಕಾರ್ಪೊರೇಷನ್ (Exxon Mobile Corp) ಸಂಸ್ಥೆಗಳು ಪಾಲುಹೊಂದಿವೆ. ಆದರೆ, ಈಗ ಈ ಆಸ್ತಿಯನ್ನು ಬಿಟ್ಟು ಹೊರಬರಲು ಈ ಎರಡೂ ಕಂಪನಿಗಳು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಈ ಆಸ್ತಿ ಖರೀದಿಸುವ ಸಾಧ್ಯತೆ ಇದ್ದರೆ ಪರಿಶೀಲಿಸಿ ಎಂದು ಭಾರತ ಸರಕಾರ ತನ್ನ ಇತರ ತೈಲೋತ್ಪನ್ನ ಕಂಪನಿಗಳಿಗೆ ಕೇಳಿದೆ.

ಶೆಲ್ ಸಂಸ್ಥೆ ಕೂಡ ಮಾರಾಟ ಮಾಡಲ ನಿರ್ಧಾರ

ಶೆಲ್ ಸಂಸ್ಥೆ ಕೂಡ ಮಾರಾಟ ಮಾಡಲ ನಿರ್ಧಾರ

ಶೆಲ್ ಸಂಸ್ಥೆ ಕೂಡ ರಷ್ಯಾದ ಪ್ರಮುಖ ನೈಸರ್ಗಿಕ ಅನಿಲ ಘಟಕವೊಂದರಲ್ಲಿರುವ ತನ್ನ ಪಾಲನ್ನು ಭಾರತೀಯ ಕಂಪನಿಗಳಿಗೆ ಮಾರಲು ಸಿದ್ಧವಿದೆ. ಭಾರತದ ಅತಿದೊಡ್ಡ ಅನಿಲ ವಾಹಕ ಸಂಸ್ಥೆ ಜಿಎಐಎಲ್ (GAIL India Ltd) ರಷ್ಯಾದ ತೈಲ ಮತ್ತು ಅನಿಲ ಘಟಕಗಳನ್ನು ಖರೀದಿಸಲು ಯೋಜಿಸಿದ್ದು, ವಾಣಿಜ್ಯಾತ್ಮಕವಾಗಿ ಲಾಭ ತಂದುಕೊಡಬಲ್ಲದು ಎಂದನಿಸಿದರೆ ಖರೀದಿಗೆ ಮುಂದಾಗಬಹುದು ಎಂದು ಅ ಕಂಪನಿಯ ಛೇರ್ಮನ್ ನಿನ್ನೆ ಶುಕ್ರವಾರ ಹೇಳಿದ್ದರು.

(ಒನ್ಇಂಡಿಯಾ ಸುದ್ದಿ)

English summary
Indian companies with stakes in two Russian assets are unable to repatriate 8 billion roubles in dividends due to tough western sanctions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X