ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ: ನಾಗಾಭರಣ

|
Google Oneindia Kannada News

ಬೆಂಗಳೂರು, ಸೆ. 17: ಬೆಂಗಳೂರಿನ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆ ಗೆಳೆಯ ವಿ-ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಖ್ಯಾತ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ರವಿ ಹಾಗೂ ಕವಿ ಹಾಗೂ ಸಾಹಿತಿ ದುಂಡಿರಾಜು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ. ನಾವು ನಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ಅದು ನಮ್ಮನ್ನು ಮೀರಿ ಬೆಳೆಯುತ್ತಾ ಹೋಗುತ್ತೆ. ಇಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ವಿ-ಪೇ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಆಗಾಗಿ ನಾವು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಆಪ್ ನ ಮೂಲ ಭಾಷೆ ಕೂಡ ಕನ್ನಡವಾಗಿರಬೇಕು ಎಂದು ಸಲಹೆ ನೀಡಿದರು.

ಫೋನ್‌ಪೇ ಇದ್ರೆ ಹಂಗಾಮಾದ ಪ್ರೀಮಿಯಂ ಸೇವೆ ಗಳಿಸಿಫೋನ್‌ಪೇ ಇದ್ರೆ ಹಂಗಾಮಾದ ಪ್ರೀಮಿಯಂ ಸೇವೆ ಗಳಿಸಿ

ನಾನು, ನನ್ನದು ಎಂದು ಹೆಮ್ಮೆಯಿಂದ ಬಂದಾಗ ನನ್ನತನ ಉಳಿಯುತ್ತೆ. ಅದರ ಮುಖಾಂತರ ನಾವು ಇಡೀ ಪ್ರಚಂಚಕ್ಕೆ ಒಂದು ಮಾದರಿ ಇಡಬಹುದು. ನಮ್ಮ ಬಗ್ಗೆ ನಾವು ಹೆಮ್ಮೆ ಪಡೆದುಕೊಂಡಾಗ ಮಾತ್ರ ಪ್ರಪಂಚಕ್ಕೆ ಮಾದರಿ ಆಗಬಹುದು.

ಇಂದು ಬಿಡುಗಡೆ ಆಗಿರುವ ಆಪ್ ಇಡಿ ಭಾರತಕ್ಕೆ ಕೊಡುಗೆ ಆಗಬೇಕು. ನೀವು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಇವತ್ತು ತಂತ್ರಾಂಶಗಳಲ್ಲಿ ಗಣಕತಂತ್ರಗಳಲ್ಲಿ ಕನ್ನಡವನ್ನು ಬಹಳ ಚೆನ್ನಾಗಿ ಬಳಸುತ್ತಿದ್ದೇವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆಪ್ ಗಳು ರೆಡಿಯಾಗಿವೆ. ಯಾರಿಗೂ ಕೀಳರಿಮೆ ಬೇಡ, ಕನ್ನಡದಲ್ಲಿ ಎಲ್ಲವೂ ಆಗುತ್ತೆ. ನವೆಂಬರ್ ಒಂದರಿಂದ ಯುಆರ್ ಎಲ್ ಕೂಡ ಕನ್ನಡದಲ್ಲೇ ಬರಲಿದೆ ಎಂದು ಇದೇ ವೇಳೆ ತಿಳಿಸಿದರು.

ವಿ-ಪೇ ಆಪ್ ಮತ್ತು ವಿ-ಕಾರ್ಡ್

ವಿ-ಪೇ ಆಪ್ ಮತ್ತು ವಿ-ಕಾರ್ಡ್

ಸ್ಪರ್ಧೆ ಇಲ್ಲದ ಬದುಕಿಲ್ಲ. ಇಂತಹ ಸನ್ನಿವೇಶವನ್ನು ಒಂದು ಸವಾಲಾಗಿ ಸ್ವೀಕರಿಸಬೇಕು. ಆ ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಬೇಕು, ಅಂತಹ ಅದ್ಭುತ ಅವಕಾಶ ನಿಮ್ಮೆಲ್ಲರಿಗೂ ಸಿಕ್ಕಿದೆ, ಅದನ್ನು ಬಳಸಿಕೊಂಡು ವಿಶ್ವಾಸ್ ವಿ-ಪೇ ರೈತರ ಮನೆಮನದಲ್ಲೂ ಮಾತಾದರೇ ತಾನೇತಾನಾಗಿ ಇಡೀ ಭಾರತಕ್ಕೆ ಮಾದರಿ ಆಗುತ್ತದೆ. ಅಂತಹ ಕೆಲಸ ನಿಮ್ಮದಾಗಲಿ ಎಂದು ಆಶಿಸಿದರು.

ಇನ್ನು ಈ ವಿ-ಪೇ ಸಂಸ್ಥೆಯ ಪ್ರತಿಯೊಬ್ಬ ಪ್ರತಿನಿಧಿ ಕೂಡ ನಿಮ್ಮ ನಿಮ್ಮ ರೈತರನ್ನ, ಕನ್ನಡಮನಸ್ಸುಗಳನ್ನು ಒಟ್ಟುಗೂಡಿಸಿದರೇ ವಿಶ್ವಾಸ್ ವಿ-ಪೇ ಪ್ರತಿಯೊಂದು ಮನೆಯನ್ನು ತಲುಪುತ್ತೆ, ಅದರ ಮುಖಾಂತರ ಅದು ನಿಜವಾದ ಭಾರತೀಯತೆಯನ್ನು ಹೇಳುತ್ತಾ ಹೋಗುತ್ತೆ. ಭಾರತೀಯತೆ ಅಂದ್ರೆ ಪ್ರತಿವೊಂದು ರಾಜ್ಯವೂ ತನ್ನತನವನ್ನ ಹೇಳಿದಾಗ ಅದು ಭಾರತೀಯತೆಯೇ ಆಗಿರುತ್ತೆ.

ವಿ-ಪೇ ಆಪ್ ಮತ್ತು ವಿ-ಕಾರ್ಡ್

ವಿ-ಪೇ ಆಪ್ ಮತ್ತು ವಿ-ಕಾರ್ಡ್

ಎಲ್ಲ ಸಂಸ್ಕೃತಿಗಳ ಆಗರ ಭಾರತ. ಭಾರತೀಯ ಪರಂಪರೆ ನಮಗೆ ತಿಳಿಸಿರುವಂತಹ ಗುರು ಕಾಣಿಕೆ ಏನಿದೆ, ಅದನ್ನ ನಾವೀಗ ಸಲ್ಲಿಸುತ್ತಿದ್ದೇವೆ. ಗುರು ಕಾಣಿಕೆ ಸಲ್ಲಿಸೋಕೆ ಇದೊಂದು ವೇದಿಕೆ ಸಜ್ಜಾಗಿದೆ. ವಿ-ಪೇ ಅನ್ನೋದು ವಿ ಅರ್ನ್ ಅನ್ನುವಾಗೇ ಆಗಲಿ, ವಿ-ಪೇ ಭಾರತಕ್ಕೆ ಮಾದರಿ ಆಗಲಿ ಎಂದು ಆಶಿಸಿದರು.

ಮುಖ್ಯವಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿಪಡಿಸಲಾಗಿದೆ. ವಿ ಪೇ- ಆಪ್ ಮುಖಾಂತರ ಹಣ ವರ್ಗಾವಣೆ, ಎಲ್ಲಾ ರೀತಿಯ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ ಮಾಡಬಹುದಾಗಿದೆ.

ವಿ-ಪೇ ಆಪ್ ಮತ್ತು ವಿ-ಕಾರ್ಡ್

ವಿ-ಪೇ ಆಪ್ ಮತ್ತು ವಿ-ಕಾರ್ಡ್

ಇನ್ನು ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗಡೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೇ ರೈತ ವ್ಯವಸಾಯಕ್ಕೆ ಬಳಸುವ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೂ ವಿ ಪೇ ಆಪ್ ಮತ್ತು ವಿ-ಕಾರ್ಡ್ ಉಪಯೋಗವಾಗಲಿದೆ. ವಿ ಪೇ ಆಪ್ ಮತ್ತು ವಿ-ಕಾರ್ಡ್ ಮೂಲಕ ಖರೀದಿ ಮಾಡಿದಾಗ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿ-ಪೇ ಆಪ್ ಮತ್ತು ವಿ-ಕಾರ್ಡ್

ವಿ-ಪೇ ಆಪ್ ಮತ್ತು ವಿ-ಕಾರ್ಡ್

ಪ್ರತಿ ತಾಲೂಕಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಫ್ರಾಂಚೈಸಿಗಳನ್ನು ಹೊಂದಿದೆ. ಈ ಫ್ರಾಂಚೈಸಿಗಳ ಮೂಲಕ ಗ್ರಾಹಕರು ವಿ ಪೇ ಆಪ್ ಮತ್ತು ವಿ-ಕಾರ್ಡ್ ಬಳಕೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಎಂಡಿ ಎನ್. ವಿಶ್ವ, ನಿರ್ದೇಶಕರಾದ ಸಂಗಮೇಶ್ ಮತ್ತು ಯಲ್ಲಪ್ಪ ಅವರು ಉಪಸ್ಥಿತರಿದ್ದರು. ಬೆಂಗಳೂರಿನ ವಿಶ್ವಾಸ್ ವರ್ಲ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಆಪ್ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ.

English summary
Director TS Nagabharana, Body builder Ravi and writer Dundiraj today launched VPay App and VPay Card from Vishwas Tech Pvt Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X