ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ - ಡಿಸೆಂಬರ್ ವರೆಗೆ ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಏರಿಕೆ

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 9: 2017-18ನೇ ಆರ್ಥಿಕ ವರ್ಷದ ಮೊದಲ 9 ತಿಂಗಳ ನೇರ ತೆರಿಗೆ ಸಂಗ್ರಹದಲ್ಲಿ ಭಾರೀ ಏರಿಕೆಯಾಗಿದೆ. ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ರೂ. 6.56 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ.

ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಶೇಕಡಾ 18.2 ಏರಿಕೆಯಾಗಿದೆ ಎಂದು ಹಣಕಾಸು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಬಳದಾರ ವರ್ಗಕ್ಕೆ ಜೇಟ್ಲಿ ನೀಡಲಿದ್ದಾರೆ ಬಜೆಟ್ ನಲ್ಲಿ ಸಿಹಿಸುದ್ದಿ?ಸಂಬಳದಾರ ವರ್ಗಕ್ಕೆ ಜೇಟ್ಲಿ ನೀಡಲಿದ್ದಾರೆ ಬಜೆಟ್ ನಲ್ಲಿ ಸಿಹಿಸುದ್ದಿ?

ಜನರು ಪಾವತಿಸುವ ಆದಾಯ ತೆರಿಗೆ, ಆಸ್ತಿ ತೆರಿಗೆ ಮತ್ತು ಕಂಪೆನಿಗಳು ಪಾವತಿಸುವ ಕಾರ್ಪೊರೇಟ್ ತೆರಿಗೆಗಳನ್ನು ನೇರ ತೆರಿಗೆ ಎನ್ನಲಾಗುತ್ತದೆ.

Direct tax collections rise 18.2pc in Apr-Dec

ಪ್ರಸ್ತುತ ತೆರಿಗೆ ಸಂಗ್ರಹ 2017-18ರ ಬಜೆಟ್ ಅಂದಾಜಿನ (ರೂ. 9.8 ಲಕ್ಷ ಕೋಟಿ) ಶೇಕಡಾ 67ರಷ್ಟಾಗಿದೆ.

ಇನ್ನು ತೆರಿಗೆ ಮರುಪಾವತಿ ಹೊರತುಪಡಿಸಿ ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಶೇಕಡಾ 12.6 ಏರಿಕೆಯಾಗಿದೆ. ಅಂದರೆ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ರೂ. 7.68 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ರೂ. 1.12 ಲಕ್ಷ ಕೋಟಿ ಹಣವನ್ನು ಜನರಿಗೆ ಮರಳಿಸಲಾಗಿದೆ.

ಮುಂಗಡ ತೆರಿಗೆ ಸಂಗ್ರಹದಲ್ಲೂ ಶೇಕಡಾ 12.7 ಏರಿಕೆಯಾಗಿದ್ದು ರೂ. 3.18 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಾರ್ಪೊರೇಟ್ ಟ್ಯಾಕ್ಸ್ ವಿಚಾರಕ್ಕೆ ಬಂದಾಗ ಈ ಪ್ರಮಾಣ ಶೇಕಡಾ 10.9 ಇದ್ದು ಆದಾಯ ತೆರಿಗೆ ಮುಂಗಡ ಪಾವತಿಯಲ್ಲಿ ಶೇಕಡಾ 21.6 ಏರಿಕೆಯಾಗಿದೆ.

English summary
Direct tax collections soared 18.2 per cent during the first nine months of current fiscal at Rs 6.56 lakh crore, the finance ministry said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X