ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018-19ನೇ ಸಾಲಿನ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಪ್ರಸಕ್ತ ವರ್ಷದ ನೇರ ತೆರಿಗೆ ಸಂಗ್ರಹದ ಒಟ್ಟಾರೆ ಪ್ರಮಾಣವು ನವೆಂಬರ್ ವೇಳೆಗೆ 6.5 ಲಕ್ಷ ಕೋಟಿ ಮುಟ್ಟಿದ್ದು, ಕಳೆದ ವರ್ಷದ ಒಟ್ಟು ಸಂಗ್ರಹಕ್ಕೆ ಹೋಲಿಸಿದರೆ ಶೇ 15.7ರಷ್ಟು ಹೆಚ್ಚಳ ಕಂಡಿದೆ.

ಐದು ರಾಜ್ಯಗಳ ಎಕ್ಸಿಟ್ ಪೋಲ್ ಪರಿಣಾಮ: ಸೆನ್ಸೆಕ್ಸ್ ಸೂಚ್ಯಂಕ ಕುಸಿತಐದು ರಾಜ್ಯಗಳ ಎಕ್ಸಿಟ್ ಪೋಲ್ ಪರಿಣಾಮ: ಸೆನ್ಸೆಕ್ಸ್ ಸೂಚ್ಯಂಕ ಕುಸಿತ

2018ರ ಏಪ್ರಿಲ್‌ನಿಂದ ನವೆಂಬರ್‌ ಅವಧಿಯಲ್ಲಿ 1.23 ಲಕ್ಷ ಕೋಟಿ ರೂ. ಹಣ ಮರುಪಾವತಿ (ರಿಫಂಡ್) ಆಗಿದ್ದು, ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಶೇ 20.8ರಷ್ಟು ಹೆಚ್ಚಳವಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?

ಮರುಪಾವತಿ ಹಣದ ಹೊಂದಾಣಿಕೆ ಬಳಿಕ ಒಟ್ಟು ಸಂಗ್ರಹವು ಶೇ 14.7ರ ಏರಿಕೆಯೊಂದಿಗೆ 5.51 ಲಕ್ಷ ಕೋಟಿ ರೂ.ಗೆ ತಲುಪಿದೆ.

direct tax collections higher 15.7 per cent for fiscal year 2018-19

ನೇರ ತೆರಿಗೆಯ ಆಯವ್ಯಯ ಅಂದಾಜಿನ ಶೇ 48ರಷ್ಟು ಒಟ್ಟು ಸಂಗ್ರಹದ ಮೂಲಕ ಸಿಗುತ್ತದೆ. 2018-19ನೇ ಹಣಕಾಸು ವರ್ಷಕ್ಕೆ 11.50 ಲಕ್ಷ ಕೋಟಿ ಇರಲಿದೆ.

ರಿಸರ್ವ್ ಬ್ಯಾಂಕ್ ರೆಪೋ ದರ 6.5% ಯಥಾ ಸ್ಥಿತಿ ಮುಂದುವರಿಕೆರಿಸರ್ವ್ ಬ್ಯಾಂಕ್ ರೆಪೋ ದರ 6.5% ಯಥಾ ಸ್ಥಿತಿ ಮುಂದುವರಿಕೆ

ಕಾರ್ಪೊರೇಟ್ ಆದಾಯ ತೆರಿಗೆ (ಸಿಐಟಿ) ಮತ್ತು ಪ್ರೊಫೆಷನಲ್ ಆದಾಯ ತೆರಿಗೆ (ಪಿಐಟಿ) ಬೆಳವಣಿಗೆ ದರದಲ್ಲಿಯೂ ಸುಧಾರಣೆ ಕಂಡುಬಂದಿದೆ. ಸಿಐಟಿಯ ಒಟ್ಟು ಸಂಗ್ರಹ ಶೇ 17.7ರಷ್ಟಿದ್ದು, ಒಟ್ಟು ಬೆಳವಣಿಗೆ ಶೇ 18.4ರಷ್ಟಿದೆ. ಪಿಐಟಿಯು ಶೇ 18.3ರ ಒಟ್ಟು ಸಂಗ್ರಹ ಹೊಂದಿದ್ದು, ಶೇ 16ರಷ್ಟು ಒಟ್ಟು ಬೆಳವಣಿಗೆ ಇದೆ.

English summary
Direct Tax collections for fiscal year of 2018-19 soar up to 15.7% with gross collections are at 6.75 lakh crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X