ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Digital rupee ಚಲಾವಣೆ ಹೇಗಿರಲಿದೆ?, ಆರ್‌ಬಿಐನಿಂದ ಸುಳಿವು

|
Google Oneindia Kannada News

ನವದೆಹಲಿ, ಫೆಬ್ರವರಿ 10: ಡಿಜಿಟಲ್ ರೂಪಾಯಿ ನಿಖರವಾಗಿ ಸಾಮಾನ್ಯ ರೂಪಾಯಿಯಂತೆ ಇರುತ್ತದೆ, ಆದರೆ ಡಿಜಿಟಲ್ ಸ್ವರೂಪದಲ್ಲಿರುತ್ತದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ ರವಿ ಶಂಕರ್ ಫೆಬ್ರವರಿ 10 ರಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿ ರವಿ ಶಂಕರ್, ಇದು 1 ರಿಂದ 1ಕ್ಕೆ ಬದಲಾವಣೆ ಮಾಡಬಹುದಾದ ಡಿಜಿಟಲ್‌ ಕರೆನ್ಸಿ ಎಂದು ತಿಳಿಸಿದ್ದಾರೆ.

"ಈ Digital rupee ಡಿಜಿಟಲ್ ಸ್ವರೂಪದಲ್ಲಿ ಮಾತ್ರ ಇರುತ್ತದೆ. ಸಾಮಾನ್ಯ ರೂಪಾಯಿಯನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಇರಿಸುವಂತೆ, ಡಿಜಿಟಲ್ ರೂಪಾಯಿಯನ್ನು ನಿಮ್ಮ ಮೊಬೈಲ್‌ನಲ್ಲಿ ಸಾಧನವಾಗಿ ಇರಿಸಬಹುದು," ಎಂದು ಹೇಳಿದ, ಆರ್‌ಬಿಐ ಡೆಪ್ಯುಟಿ ಗವರ್ನರ್ ಟಿ ರವಿ ಶಂಕರ್ ಡಿಜಿಟಲ್ ರೂಪಾಯಿ ಮತ್ತು ಖಾಸಗಿ ಕ್ರಿಪ್ಟೋಕರೆನ್ಸಿಗಳ ನಡುವಿನ ವ್ಯತ್ಯಾಸವನ್ನು ಕೂಡಾ ವಿವರಿಸಿದರು.

Digital Rupee: ಬಜೆಟ್ 2022: ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನDigital Rupee: ಬಜೆಟ್ 2022: ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ

ಡಿಜಿಟಲ್ ರೂಪಾಯಿ ಮತ್ತು ಖಾಸಗಿ ಕ್ರಿಪ್ಟೋಕರೆನ್ಸಿಗಳ ನಡುವಿನ ವ್ಯತ್ಯಾಸವೆಂದರೆ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ನೀಡಲಿದೆ. ಕ್ರಿಪ್ಟೋಕರೆನ್ಸಿ ಆರ್‌ಬಿಐ ನೀಡುವುದು ಅಲ್ಲ ಅದು ಖಾಸಗಿ ಎಂದು ತಿಳಿಸಿದರು. ಇನ್ನು ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, "ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದಂತೆ, ಆರ್‌ಬಿಐ ನಿಲುವು ತುಂಬಾ ಸ್ಪಷ್ಟವಾಗಿದೆ. ಖಾಸಗಿ ಕ್ರಿಪ್ಟೋಕರೆನ್ಸಿಗಳು ನಮ್ಮ ಆರ್ಥಿಕ ಸ್ಥಿರತೆಗೆ ದೊಡ್ಡ ಬೆದರಿಕೆಯಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.

Digital Rupee Will Be Exactly Like Normal, Physical Rupee Says RBI Deputy Governor

ಕ್ರಿಪ್ಟೋಕರೆನ್ಸಿ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ ಆರ್‌ಬಿಐ ಗವರ್ನರ್

"ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರಿಗೆ ಈ ಬಗ್ಗೆ ಎಚ್ಚರಿಕೆ ನೀಡುವುದು ನನ್ನ ಕರ್ತವ್ಯ. ಯಾರು ಹೂಡಿಕೆದಾರರು ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ ಅವರು ತಮ್ಮ ಸ್ವಂತ ಅಪಾಯದಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಆಧಾರವಾಗಿರುವ ಇಲ್ಲ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು," ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಆರ್‌ಬಿಐ ಡಿಜಿಟಲ್‌ ಕರೆನ್ಸಿ ಬಗ್ಗೆ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, "ಆರ್‌ಬಿಐ ಡಿಜಿಟಲ್ ರೂಪಾಯಿಯನ್ನು 2022-23 ರಲ್ಲಿ ಪ್ರಾರಂಭಿಸಲಾಗುವುದು," ಎಂದು ಮಾಹಿತಿ ನೀಡಿದ್ದಾರೆ. "ನಾವು ಅದರ ಬಿಡುಗಡೆಗೆ ಇನ್ನೂ ಸಮಯವನ್ನು ಊಹಿಸಲು ಸಾಧ್ಯವಿಲ್ಲ. ಡಿಜಿಟಲ್ ರೂಪಾಯಿ ಮತ್ತು ಸಾಮಾನ್ಯ ರೂಪಾಯಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಕ್ರಿಪ್ಟೋಕರೆನ್ಸಿಯನ್ನು ಖಾಸಗಿಯಾಗಿ ರಚಿಸಲಾಗಿದೆ ಮತ್ತು ಇದು ಆರ್ಥಿಕ ಸ್ಥಿರತೆಗೆ ಬೆದರಿಕೆಯಾಗಿದೆ," ಎಂದು ಹೇಳಿದರು.

"ಬಿಟ್‌ಕಾಯಿನ್, ಎಥೆರಿಯಮ್ ಕಾನೂನುಬದ್ಧವಲ್ಲ": ಹಣಕಾಸು ಕಾರ್ಯದರ್ಶಿ ಮಹತ್ವದ ಹೇಳಿಕೆ

ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿ

ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬ್ಲಾಕ್‌ಚೈನ್‌ ಟೆಕ್ನಾಲಜಿ ಮೂಲಕ ಡಿಜಿಟಲ್ ರೂಪಾಯಿ ವಿತರಣೆಗೆ ನಿರ್ಧರಿಸಿದೆ. 2022-23ರಲ್ಲಿ ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಡಿಜಿಟಲ್ ಹಣ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆರ್‌ಬಿಐ ತನ್ನದೇ ಆದ ವರ್ಚ್ಯುವಲ್ ಕರೆನ್ಸಿ ಆವೃತ್ತಿಯನ್ನು ಹೊರತರುವ ಪ್ರಕ್ರಿಯೆಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಮೊದಲೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2022ನೇ ಸಾಲಿನ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ ಎಂದು ನಿರ್ಮಲಾ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

Kanatakaದಲ್ಲಿ ಹೊತ್ತಿದ Hijab ಕಿಡಿಯಿಂದ Uttar Pradesh Election ಫಲಿತಾಂಶದ ಮೇಲೆ ಎಫೆಕ್ಟ್? | Oneindia Kannada

English summary
Digital rupee will be exactly like normal, physical rupee Says RBI Deputy Governor T Rabi Sankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X