ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಸಾಲ: ಇಂತಹ ಅಪ್ಲಿಕೇಶನ್‌ಗಳಿಂದ ನೀವು ದೂರವಿರಿ!

|
Google Oneindia Kannada News

ನವದೆಹಲಿ, ಜನವರಿ 15: ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗಿದ್ದ ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ. ಹೀಗಾಗಿಯೇ ಬಾಯಿಗೆ ಬಂದಷ್ಟು ಗ್ರಾಹಕರಿಗೆ ಬಡ್ಡಿ ದರ ವಿಧಿಸುತ್ತಿದ್ದ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ಗೂಗಲ್‌ ಇಂಡಿಯಾ ಪ್ಲೇ ಸ್ಟೋರ್‌ನಿಂದ ಇತ್ತೀಚೆಗೆ ತೆಗೆದುಹಾಕಿದೆ.

ತನ್ನ ನೀತಿಗಳನ್ನು ಉಲ್ಲಂಘಿಸಿದ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ಗುರುವಾರ ಪ್ರಕಟಿಸಿದೆ. ಆದಾಗ್ಯೂ, ತೆಗೆದುಹಾಕಲಾದ ಅಪ್ಲಿಕೇಶನ್‌ಗಳ ಸಂಖ್ಯೆ ಅಥವಾ ಅಪ್ಲಿಕೇಶನ್‌ಗಳನ್ನು ಗೂಗಲ್ ಬಹಿರಂಗಪಡಿಸಿಲ್ಲ.

 ಲೋನ್ ಇಲ್ಲದೆ ಕಾರು ಸಿಗಲಿದೆ: ಮಾರುತಿ ಸುಜುಕಿ ಕಾರುಗಳಿಗೆ ಆಫರ್! ಲೋನ್ ಇಲ್ಲದೆ ಕಾರು ಸಿಗಲಿದೆ: ಮಾರುತಿ ಸುಜುಕಿ ಕಾರುಗಳಿಗೆ ಆಫರ್!

ಬಳಕೆದಾರರ ದೂರು ಮತ್ತು ಸರ್ಕಾರಿ ಸಂಸ್ಥೆಗಳು ಸಲ್ಲಿಸಿದ ಮಾಹಿತಿ ಆಧಾರದಲ್ಲಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಲಾಗಿದೆ. ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾದ ಕನಿಷ್ಠ 10 ಭಾರತೀಯ ಸಾಲ ಅಪ್ಲಿಕೇಶನ್‌ಗಳು ಕೂಡ ಗೂಗಲ್ ನಿಯಮಗಳನ್ನು ಉಲ್ಲಂಘಿಸಲಾಗಿದೆ.

ಸಾರ್ವಜನಿಕರಿಗೆ ಆರ್‌ಬಿಐ ಎಚ್ಚರಿಕೆ

ಸಾರ್ವಜನಿಕರಿಗೆ ಆರ್‌ಬಿಐ ಎಚ್ಚರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಅನಧಿಕೃತ ಡಿಜಿಟಲ್ ಲೋನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರದಿಂದಿರಲು ಸಾರ್ವಜನಿಕರಿಗೆ ಸಲಹೆ ನೀಡಿತು. ಇತ್ತೀಚಿನ ದಿನಗಳಲ್ಲಿ ತೆಲಂಗಾಣದಲ್ಲಿ ಮೂರು ಸಾಲಗಾರರು ಆತ್ಮಹತ್ಯೆ ಮಾಡಿಕೊಂಡ ನಂತರ ಆರ್‌ಬಿಐನಿಂದ ಈ ಸಲಹೆಯು ಬಂದಿದೆ.

ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದ ಗೂಗಲ್ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದ ಗೂಗಲ್

ಜನರು ಏಕೆ ಎಚ್ಚರಿಕೆಯಿಂದಿರಬೇಕು?

ಜನರು ಏಕೆ ಎಚ್ಚರಿಕೆಯಿಂದಿರಬೇಕು?

1) ಇತ್ತೀಚಿನ ದಿನಗಳಲ್ಲಿ ಜನರು ಮತ್ತು ಚಿಕ್ಕ ಬಿಜೆನೆಸ್ ಮಾಡುವ ಜನರು ತ್ವರಿತವಾಗಿ ಮತ್ತು ಯಾವುದೇ ಹೆಚ್ಚು ಸಮಯವಿಲ್ಲದೆ ಸಾಲವನ್ನು ಪಡೆಯಬಹುದು ಎಂದು ಜನರನ್ನು ಆಕರ್ಷಿಸುವ ಆ್ಯಪ್‌ಗಳು ಅಥವಾ ಅಪ್ಲಿಕೇಶನ್‌ ಹೆಚ್ಚಾಗಿದೆ.

2) ಈ ರೀತಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹೆಚ್ಚಿನ ಬಡ್ಡಿದರಗಳನ್ನು ಮತ್ತು ಹೆಚ್ಚುವರಿ ಗುಪ್ತ ಶುಲ್ಕಗಳನ್ನು ವಿಧಿಸುತ್ತವೆ. ಉದಾಹರಣೆಗೆ ಶೇಕಡಾ 18ರಿಂದ ಶೇಕಡಾ 50ರವರೆಗೆ ಬಡ್ಡಿ ಇರುತ್ತದೆ.

3) ನೀವು ಈ ರೀತಿಯ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿದಾಗ ಆನ್‌ಲೈನ್ ಮೂಲಕ ಸಾಲ ನೀಡುವವರು ಬಳಕೆದಾರರ ಡೇಟಾವನ್ನು ಸೆರೆಹಿಡಿಯುತ್ತಾರೆ.

4) ಈ ಅಪ್ಲಿಕೇಶನ್‌ಗಳು ಪಾರದರ್ಶಕವಾಗಿಲ್ಲ ಮತ್ತು ಗ್ರಾಹಕರಿಗೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ

50,000 ರೂ. ವರೆಗೆ ತ್ವರಿತವಾಗಿ ಸಾಲ ನೀಡುವ ಆ್ಯಪ್‌ಗಳು

50,000 ರೂ. ವರೆಗೆ ತ್ವರಿತವಾಗಿ ಸಾಲ ನೀಡುವ ಆ್ಯಪ್‌ಗಳು

ಅನಧಿಕೃತ ಸಾಲ ನೀಡುವ ಈ ರೀತಿಯ ಆ್ಯಪ್‌ಗಳು ಹೆಚ್ಚಿನ ಬಡ್ಡಿದರದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ತ್ವರಿತ ವೈಯಕ್ತಿಕ ಸಾಲಗಳನ್ನು ನೀಡುತ್ತಾರೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಹಲವಾರು ಅಪ್ಲಿಕೇಶನ್‌ಗಳಲ್ಲಿ, ಹೆಚ್ಚಿನವು ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ಈ ಅಪ್ಲಿಕೇಶನ್ ಮುಖಾಂತರ ಗ್ರಾಹಕರು ವೈಯಕ್ತಿಕ ವಿವರಗಳು, ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಆಧಾರ್ ಕಾರ್ಡ್ ನಕಲು ಮತ್ತು ಪ್ಯಾನ್‌ನಲ್ಲಿ ಕಾರ್ಡ್ ನಕಲನ್ನು ಅಪ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಬಹುದು. 1,000 ರಿಂದ 50,000 ರೂ.ಗಿಂತ ಕಡಿಮೆ ಸಾಲವನ್ನು ಏಳು ದಿನಗಳವರೆಗೆ ಪಡೆಯಬಹುದು.

ಯಾವೆಲ್ಲಾ ಆ್ಯಪ್‌ಗಳಿವೆ?

ಯಾವೆಲ್ಲಾ ಆ್ಯಪ್‌ಗಳಿವೆ?

ಪ್ಲೇ ಸ್ಟೋರ್‌ನಲ್ಲಿ ಇಂತಹ ನೂರು ಆ್ಯಪ್‌ಗಳಿದ್ದು, ಅದರಲ್ಲಿ ತ್ವರಿತವಾಗಿ ಸಾಲು ನೀಡುವ ಆ್ಯಪ್‌ಗಳು ಇಂತಿವೆ. ಕ್ಯಾಶ್ ಮಾಮ, ಲೋನ್ ಜೋನ್, ಧನಾ ಧನ್ ಲೋನ್, ಕ್ಯಾಶ್ ಅಪ್, ಕ್ಯಾಶ್ ಬಸ್, ಮೇರಾ ಲೋನ್, ಹೇ ಫಿಶ್, ಮಂಕಿ ಕ್ಯಾಶ್, ಕ್ಯಾಶ್ ಎಲಿಫೆಂಟ್, ವಾಟರ್ ಎಲಿಫೆಂಟ್, ಕ್ವಿಕ್ ಕ್ಯಾಶ್, ಕಿಷ್ತ್‌, ಲೋನ್‌ಕ್ಲೌಡ್, ಇನ್ಸ್‌ಸ್ಟಾ ರುಪೀ ಲೋನ್, ಫ್ಲಾಶ್ ರುಪೀ-ಕ್ಯಾಶ್ ಲೋನ್, ಮಾಸ್ಟರ್‌ಮೆಲನ್ ಕ್ಯಾಶ್‌ಟ್ರೈನ್, ಗೆಟ್‌ರುಪಿ, ಇಪೇ ಲೋನ್, ಪಾಂಡ ಐಕ್ರೆಡಿಟ್, ಈಸಿ ಲೋನ್, ರುಪೀಕ್ಲಿಕ್, ಓಕ್ಯಾಶ್, ಕ್ಯಾಶ್‌ಮ್ಯಾಪ್‌, ಸ್ನಾಪಿಟ್, ರ್ಯಾಪಿಡ್‌ರುಪೀ, ರೆಡಿ ಕ್ಯಾಶ್, ಲೋನ್ ಬಜಾರ್, ಲೋನ್‌ಬ್ರೊ, ಕ್ಯಾಶ್‌ ಪೋಸ್‌, ಕ್ಯಾಶ್ ಪೋರ್ಟ್‌, ರಶ್, ಪ್ರೊ ಫಾರ್ಚುನ್ ಬ್ಯಾಗ್, ರುಪೀ ಲೋನ್, ರೊಬೊಕ್ಯಾಶ್, ಕ್ಯಾಶ್‌ಟಿಎಂ, ಉದ್ದಾರ್ ಲೋನ್, ಕ್ರೆಡಿಟ್‌ ಫ್ರೀ

ಗ್ರಾಹಕರಿಗೆ ಯಾವ ರೀತಿಯ ಪರಿಣಾಮ ಬೀರಲಿದೆ?

ಗ್ರಾಹಕರಿಗೆ ಯಾವ ರೀತಿಯ ಪರಿಣಾಮ ಬೀರಲಿದೆ?

ಸಾಲ ಹಿಂತಿರುಗಿಸಲು ವಿಫಲವಾದರೆ ಅಥವಾ ವಿಳಂಭವಾದರೆ ಭಾರೀ ದಂಡವನ್ನು ಈ ಅಪ್ಲಿಕೇಶನ್‌ಗಳು ವಿಧಿಸುತ್ತವೆ. ಈ ಅಪ್ಲಿಕೇಶನ್‌ಗಳು ಏಜೆಂಟ್ಸ್‌ , ಬ್ಲ್ಯಾಕ್‌ಮೇಲ್ ಮತ್ತು ಬೆದರಿಕೆಯ ಹಾದಿಯನ್ನು ಬಳಸುತ್ತಾರೆ. ಏಳು ದಿನಗಳವರೆಗೆ ಸಾಲ ನೀಡುವ ಈ ಅಪ್ಲಿಕೇಶನ್‌ಗಳು ಹಣ ವಸೂಲಾತಿಗೆ ಬೇರೆ ಮಾರ್ಗಗಳನ್ನು ಹಿಡಿಯುತ್ತವೆ.

ಈ ಏಜೆಂಟರಿಂದ ಅನೇಕರಿಂದ ಕರೆಗಳನ್ನು ಮಾಡುವ ಮೂಲಕ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತದೆ. ನಂತರ, ಕುಟುಂಬ ಸದಸ್ಯರಿಗೆ ನಿಂದನೀಯ ಕರೆಗಳನ್ನು ಮಾಡಲಾಗುತ್ತದೆ. ಜೊತೆಗೆ ಬೆದರಿಕೆಗಳು ಪ್ರಾರಂಭವಾಗುತ್ತದೆ. ಅಂತಿಮವಾಗಿ, ಅವರು ಗ್ರಾಹಕರ ಸಂಬಂಧಿಕರು ಮತ್ತು ಸ್ನೇಹಿತರ ಸಂಪರ್ಕ ಸಾಧಿಸಿ ಡೀಫಾಲ್ಟರ್ (ಸಾಲ ಹಿಂದಿರುಗಿಸದ) ಅನ್ನು ದೂಷಿಸುವ ವಾಟ್ಸಾಪ್ ಸಂದೇಶಗಳನ್ನು ಅವರಿಗೆ ಕಳುಹಿಸುತ್ತಾರೆ.

English summary
Here The Details Of Why You Should Safeguard Yourself From Digital Loan apps
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X