ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಮಾಡಿದ ಕಡಿತವೆಲ್ಲ ವ್ಯರ್ಥ: ಮತ್ತೆ ಏರಿತು ಡೀಸೆಲ್, ಪೆಟ್ರೋಲ್ ಬೆಲೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಜನರ ಮೇಲಿನ ಹೊರೆ ತಗ್ಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಕೇಂದ್ರ ಸರ್ಕಾರ ಮಾಡಿದ್ದ 2.50 ರೂ. ಕಡಿತ ಸಂಪೂರ್ಣ ವ್ಯರ್ಥವಾಗಿದೆ. ಸತತ ಹತ್ತನೇ ದಿನವೂ ಏರಿಕೆ ಕಂಡಿರುವ ಡೀಸೆಲ್, ಸರ್ಕಾರ ತಗ್ಗಿಸಿದ್ದ ದರಕ್ಕಿಂತಲೂ ಹೆಚ್ಚಳ ಕಂಡಿದೆ.

ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ: ಬಿತ್ತು ಗ್ರಾಹಕರ ಜೇಬಿಗೆ ಕತ್ತರಿಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ: ಬಿತ್ತು ಗ್ರಾಹಕರ ಜೇಬಿಗೆ ಕತ್ತರಿ

ಅಬಕಾರಿ ಸುಂಕ ಮತ್ತು ತೈಲ ಕಂಪೆನಿಗಳ ಸಬ್ಸಿಡಿಯ ಮೂಲಕ ಕೇಂದ್ರ ಸರ್ಕಾರ ಅ. 5ರಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ 2.50 ರೂ. ಇಳಿಕೆ ಮಾಡಿತ್ತು.

ಪೆಟ್ರೋಲ್ ಬೆಲೆ ಇಳಿಕೆ ಸುತ್ತ; ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ!ಪೆಟ್ರೋಲ್ ಬೆಲೆ ಇಳಿಕೆ ಸುತ್ತ; ದೊರೆ ಮಾಡಿದ ತಪ್ಪಿಗೆ ದಂಡನೆ ಇಲ್ಲ!

ಈಗ ಈ ಕಡಿತ ಚಾಲ್ತಿಯಲ್ಲಿ ಇದ್ದರೂ, ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ದರ ಏರಿಕೆಯಿಂದಾಗಿ ಡೀಸೆಲ್ ಬೆಲೆ ಲೀಟರ್‌ಗೆ ಅದನ್ನೂ ಮೀರಿ ಮತ್ತೆ ಏರಿಕೆಯಾಗಿದೆ.

diesel price hiked again, wiped govt cuts 10 days ago

ಕಳೆದ ಹತ್ತು ದಿನಗಳ ಹಿಂದೆ ಕೇಂದ್ರ ಸರ್ಕಾರ 2.50 ರೂ ಇಳಿಕೆ ಮಾಡಿದ್ದರೆ, ಅಲ್ಲಿಂದ ಇಲ್ಲಿಯವರೆಗೆ ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 2.51 ರೂ. ಹೆಚ್ಚಳ ಆಗಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ದೆಹಲಿಯಲ್ಲಿ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 75.46 ರೂ ಇದೆ. ಸರ್ಕಾರ ಸುಂಕ ಕಡಿತ ಘೋಷಣೆ ಮಾಡಿದ ಸಂದರ್ಭದಲ್ಲಿ 75.45 ದರವಿತ್ತು.

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

ಈ ಹತ್ತು ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 1.22 ರೂ. ಏರಿಕೆಯಾಗಿದೆ. ಪ್ರಸ್ತುತ ಪೆಟ್ರೋಲ್ ಬೆಲೆ 82.72 ರೂ. ಇದೆ. ಅಕ್ಟೋಬರ್ 4ರಂದು ಲೀಟರ್‌ಗೆ 84 ರೂ. ದರವಿತ್ತು.

English summary
Petrol and Diesel rate continues to hiked. Diesel price wipe out cut of 2.50 Rs per litre by government on October 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X