ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಚ್ಎಫ್ಎಲ್‌ನಿಂದ 3,688 ಕೋಟಿ ರುಪಾಯಿ ವಂಚನೆ:RBIಗೆ ವರದಿ ಸಲ್ಲಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್

|
Google Oneindia Kannada News

ನವದೆಹಲಿ, ಜುಲೈ 10: ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್ಎಫ್ಎಲ್)ನಿಂದ ರಿಸರ್ವ್ ಬ್ಯಾಂಕಿಗೆ ಒಟ್ಟು 3,688.58 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ(ಎನ್ ಪಿಎ) ಮೊತ್ತ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 1,246.58 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ. 2018 ರಲ್ಲಿ ಕೋಟ್ಯಾಧಿಪತಿ ಆಭರಣ ವ್ಯಾಪಾರಿ ನೀರವ್ ಮೋದಿ ಅವರನ್ನು ಒಳಗೊಂಡ 11,300 ಕೋಟಿ ರೂ.ಗಳ ವಂಚನೆಯಿಂದ ಸರ್ಕಾರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಪೆಟ್ಟು ಬಿದ್ದಿದೆ.

ಕೊರೊನಾ ಸಂಕಷ್ಟದಲ್ಲೂ, ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ 3 ದುಬಾರಿ ಆಡಿ ಕಾರು!ಕೊರೊನಾ ಸಂಕಷ್ಟದಲ್ಲೂ, ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳಿಗೆ 3 ದುಬಾರಿ ಆಡಿ ಕಾರು!

ಬ್ಯಾಂಕಿಂಗ್ ನಿಯಮಗಳಿಗೆ ವಂಚನೆಯಿಂದ ಪ್ರಭಾವಿತವಾದ ಖಾತೆಯ ಮೇಲಿನ ಪ್ರಮಾಣವು ಶೇಕಡಾ 100 ರಷ್ಟಿರಬೇಕು, ಇದು ನಾಲ್ಕು ತ್ರೈಮಾಸಿಕಗಳಲ್ಲಿ ಮಾಡಲ್ಪಟ್ಟಿದೆ. ಆದರೆ ಫೈನಾನ್ಸ್ ಕಂಪೆನಿಯು ಪಡೆದ ಒಟ್ಟು 97 ಸಾವಿರ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲಗಳಲ್ಲಿ 31 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿದೆ ಎಂದು ವರದಿಯಲ್ಲಿ ಹೇಳಿದೆ.

DHFL Fraud Case: Punjab National Bank Reports Rs 3689 Crore

ಕಂಪೆನಿ ಕಡೆಯಿಂದ ಬ್ಯಾಂಕಿಗೆ 3 ಸಾವಿರದ 688 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಆರ್‌ಬಿಐಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ ಎಂದು ಷೇರು ವಿನಿಮಯ ಸಲ್ಲಿಕೆ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಡಿಎಚ್ಎಫ್ಎಲ್‌ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದ ನಂತರ ರಿಸರ್ವ್ ಬ್ಯಾಂಕ್ ಡಿಎಚ್ಎಲ್ಎಫ್ ಗೆ ದಿವಾಳಿತನ ನಿಯಮದಡಿ ನೊಟೀಸ್ ಕಳುಹಿಸಿತ್ತು. ಎಸ್ಎಫ್ಐಒ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಡಿಎಚ್ಎಲ್ಎಫ್ ವಿರುದ್ಧ ತನಿಖೆ ಆರಂಭಿಸಿದ್ದವು.

English summary
Punjab National Bank on Thursday reported a loan of Rs 3,688.58 crore granted to Dewan Housing Finance Limited (DHFL) as fraud to the Reserve Bank of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X