ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

|
Google Oneindia Kannada News

ನವದೆಹಲಿ, ನವೆಂಬರ್ 18: ಷೇರುಪೇಟೆ ಎನ್ನುವುದು ಯಾವಾಗ ಅದೃಷ್ಟ ತಂದುಕೊಡುತ್ತದೆಯೋ ಅಥವಾ ನೆಲಕಚ್ಚಿಸಿ ಬಿಡುವುದೋ ಎಂಬುದನ್ನು ನೂರಕ್ಕೆ ನೂರರಷ್ಟು ಅರಿತಿದ್ದವರು ತುಂಬಾ ವಿರಳ. ಕೆಲವೇ ವಹಿವಾಟಿನಲ್ಲಿ ಷೇರುಗಳು ಗಗನಕ್ಕೇರಲೂಬಹುದು, ತಳಭಾಗ ಮುಟ್ಟಲುಬಹುದು.

ಹೀಗೆ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಊಹಿಸಲಾಗದಷ್ಟು ಲಾಭ ತಂದುಕೊಟ್ಟ ಷೇರುಗಳಲ್ಲಿ ಒಂದು ಟ್ರಾನ್ಸ್‌ಗ್ಲೋಬ್ ಫುಡ್ಸ್‌. ಈ ಕಂಪನಿ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ ಹೂಡಿಕೆದಾರರಿಗೆ ಬಲವಾದ ಲಾಭವನ್ನು ನೀಡಿದೆ.

44,000 ಗಡಿ ಮುಟ್ಟಿದ ಸೆನ್ಸೆಕ್ಸ್: 2021ಕ್ಕೆ 50,000, 2024ಕ್ಕೆ 1,00,000 ಪಾಯಿಂಟ್ಸ್‌?44,000 ಗಡಿ ಮುಟ್ಟಿದ ಸೆನ್ಸೆಕ್ಸ್: 2021ಕ್ಕೆ 50,000, 2024ಕ್ಕೆ 1,00,000 ಪಾಯಿಂಟ್ಸ್‌?

ಶೇ. 8,050ರಷ್ಟು ಲಾಭ

ಶೇ. 8,050ರಷ್ಟು ಲಾಭ

ಟ್ರಾನ್ಸ್‌ಗ್ಲೋಬ್ ಫುಡ್ಸ್ ಷೇರು ಬೆಲೆ ಒಂದು ವರ್ಷದ ಹಿಂದೆ 2.80 ರೂ.ಗಳಷ್ಟಿತ್ತು. ಆದರೆ ಇತ್ತೀಚೆಗಷ್ಟೇ ನವೆಂಬರ್ 14 ರಂದು 228.20 ರೂ.ಗೆ ವಹಿವಾಟು ಅಂತ್ಯಗೊಂಡಿತು. ಈ ಅವಧಿಯಲ್ಲಿ ಶೇ. 8,050ರಷ್ಟು ಲಾಭ ಗಳಿಸಿತು.

ಒಂದು ಲಕ್ಷ ಹೂಡಿಕೆಗೆ 81 ಲಕ್ಷ ರೂಪಾಯಿ

ಒಂದು ಲಕ್ಷ ಹೂಡಿಕೆಗೆ 81 ಲಕ್ಷ ರೂಪಾಯಿ

ಹೌದು, ಟ್ರಾನ್ಸ್‌ಗ್ಲೋಬ್ ಷೇರು ಕಳೆದ ಒಂದು ವರ್ಷದಲ್ಲಿ ಏರಿಕೆಯನ್ನು ಕಂಡಿರುವುದನ್ನು ಸೆನ್ಸೆಕ್ಸ್ ಈ ಅವಧಿಯಲ್ಲಿ ಹೋಲಿಸಿದರೆ ಶೇ. 8.78ರಷ್ಟು ಲಾಭ ಗಳಿಸಿದೆ.

ಒಂದು ವರ್ಷದ ಹಿಂದೆ ಒಂದು ಲಕ್ಷ ರೂ.ಗಳ ಹೂಡಿಕೆ ಮಾಡಿದವರಿಗೆ , ಷೇರಿನ ಒಟ್ಟಾರೆ ಮೌಲ್ಯ ಇಂದು 81.50 ಲಕ್ಷ ರೂ.ಗೆ ಏರುತ್ತಿತ್ತು.

ತೈಲ ಮಾರುಕಟ್ಟೆಯಲ್ಲಿ ಕುಸಿತ, ಅಂಬಾನಿಗೆ 5 ಬಿಲಿಯನ್ ಡಾಲರ್ ನಷ್ಟತೈಲ ಮಾರುಕಟ್ಟೆಯಲ್ಲಿ ಕುಸಿತ, ಅಂಬಾನಿಗೆ 5 ಬಿಲಿಯನ್ ಡಾಲರ್ ನಷ್ಟ

ಲಾಭದ ಬುಕ್ಕಿಂಗ್‌ಗೆ ಮುಗಿಬಿದ್ದ ಹೂಡಿಕೆದಾರರು

ಲಾಭದ ಬುಕ್ಕಿಂಗ್‌ಗೆ ಮುಗಿಬಿದ್ದ ಹೂಡಿಕೆದಾರರು

ಹೌದು, ಟ್ರಾನ್ಸ್‌ಗ್ಲೋಬ್ ಷೇರು ಉತ್ತಮ ಹಂತ ತಲುಪಿದ ಬಳಿಕ ಹೂಡಿಕೆದಾರರು ಸ್ಟಾಕ್ ಬುಕ್ಕಿಂಗ್‌ಗೆ ಮುಂದಾದರು. ಮೈಕ್ರೋ ಕ್ಯಾಪ್ ಸ್ಟಾಕ್ ಶೇ. 2ರಷ್ಟು ಇಳಿಕೆ ಕಂಡು 228.20 ರೂ.ಗೆ ತಲುಪಿತು. ಪ್ರಸ್ತುತ ಬಿಎಸ್‌ಇನಲ್ಲಿ ಮತ್ತೊಮ್ಮೆ ಶೇ. 2ರಷ್ಟು ಇಳಿಕೆಗೊಂಡು 219.20 ರುಪಾಯಿಗೆ ಮುಟ್ಟಿದೆ.


ಬಿಎಸ್‌ಇಯಲ್ಲಿ ಸಂಸ್ಥೆಯ ಮಾರುಕಟ್ಟೆ ಕ್ಯಾಪ್ ಕಳೆದ 13 ದಿನಗಳಲ್ಲಿ 23% ನಷ್ಟವಾಗಿದೆ. ಷೇರು 50 ದಿನ, 100 ದಿನ ಮತ್ತು 200 ದಿನಗಳ ಚಲಿಸುವ ಸರಾಸರಿಗಿಂತ ಹೆಚ್ಚಿನದಾಗಿದೆ ಆದರೆ 5 ದಿನ ಮತ್ತು 20 ದಿನಗಳ ಚಲಿಸುವ ಸರಾಸರಿಗಿಂತ ಕಡಿಮೆಯಾಗಿದೆ.


ಸ್ಟಾಕ್ ಒಂದು ತಿಂಗಳಲ್ಲಿ ಶೇ. 4.34ರಷ್ಟು ಮತ್ತು ವಾರದಲ್ಲಿ ಶೇ. 11.34ರಷ್ಟು ನಷ್ಟವಾಗಿದೆ. ಅದೇ ಅವಧಿಯಲ್ಲಿ, ಸೆನ್ಸೆಕ್ಸ್ ಕ್ರಮವಾಗಿ ಶೇ. 7.42 ಮತ್ತು ಶೇ. 4.34 ರಷ್ಟು ಗಳಿಸಿತು.

ಭರ್ಜರಿ ಲಾಭಗಳಿಸಿದ ರಾಕೇಶ್ ಝಂಝನವಾಲಾ

ಭರ್ಜರಿ ಲಾಭಗಳಿಸಿದ ರಾಕೇಶ್ ಝಂಝನವಾಲಾ

ವಿಶೇಷವೆಂದರೆ, ಮಾರ್ಚ್ 2017 ಕ್ಕೆ ಕೊನೆಗೊಂಡ ಹಣಕಾಸು ವರ್ಷದಿಂದ ಆಹಾರ ಸಂಸ್ಕರಣಾ ಕಂಪನಿಯು ಶೂನ್ಯ ಮಾರಾಟವನ್ನು ದಾಖಲಿಸಿದೆ. ರಾಕೇಶ್ ಝಂಝನವಾಲಾ 100 ಸೆಷನ್‌ಗಳಿಗೆ ಈ ಸ್ಟಾಕ್‌ನೊಂದಿಗೆ ದಿನಕ್ಕೆ 2.71 ಕೋಟಿ ರೂ. ಗಳಿಸಿದ್ದಾರೆ.

ಮಾರ್ಚ್ 2019 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 0.18 ಕೋಟಿ ರೂ. ನಿವ್ವಳ ಲಾಭವನ್ನು, 2019 ರ ಹಣಕಾಸು ವರ್ಷದಲ್ಲಿ 0.19 ಕೋಟಿ ರೂ. ಹಾಗೂ ಮಾರ್ಚ್ 2018 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಂಸ್ಥೆಯು 0.25 ಕೋಟಿ ರೂ. ಆಗಿದೆ.

ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ, ಸಂಸ್ಥೆಯು ಕಳೆದ ಹಣಕಾಸು ವರ್ಷದ ಕ್ಯೂ 2 ರಲ್ಲಿ 0.04 ಕೋಟಿ ರೂ.ಗಳ ನಷ್ಟದಿಂದ 0.05 ಕೋಟಿ ರೂ. ತಲುಪಿದೆ.

ಏನಿದು ಕಂಪನಿ?

ಏನಿದು ಕಂಪನಿ?

ಟ್ರಾನ್ಸ್‌ಗ್ಲೋಬ್ ಫುಡ್ಸ್‌ ಕಂಪನಿಯು ಎನ್‌ಎಸ್‌ಇಯಲ್ಲಿ ಪಟ್ಟಿ ಮಾಡಿಲ್ಲ. ಸಂಸ್ಥೆಯು ಆಹಾರ ಸಂಸ್ಕರಣಾ ಕಂಪನಿಯಾಗಿದ್ದು, ಪೂರ್ವಸಿದ್ಧ ಹಣ್ಣುಗಳು, ತರಕಾರಿಗಳು ಮತ್ತು ಇತರ ಉತ್ಪನ್ನಗಳ ತಯಾರಕರಾಗಿದ್ದು, ರಫ್ತುದಾರನಾಗಿ ತೊಡಗಿಸಿಕೊಂಡಿದೆ. ಗುಜರಾತ್‌ನ ಬರೋಡಾದಲ್ಲಿ ನೆಲೆಗೊಂಡಿರುವ ಈ ಕಂಪನಿಯನ್ನು 1986 ರಲ್ಲಿ ಸ್ಥಾಪಿಸಲಾಯಿತು.

English summary
Transglobe Foods is one of the most profitable shares for investors in a single year. This company's share price has given investors a strong return over the past year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X