ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಕಾ ದೇಸಿ ಆ್ಯಪ್‌ ಚಿಂಗಾರಿಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್

|
Google Oneindia Kannada News

ನವದೆಹಲಿ, ಆಗಸ್ಟ್ 10: ಚೀನಾದ ಬೈಟ್‌ಡ್ಯಾನ್ಸ್‌ ಒಡೆತನದ ಟಿಕ್‌ಟಾಕ್‌ ಬ್ಯಾನ್ ಆದ ಬಳಿಕ ಭಾರತದಲ್ಲಿ ದೇಸಿ ಆ್ಯಪ್ ಚಿಂಗಾರಿ ಆ್ಯಪ್ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದರ ಬೆನ್ನಲ್ಲೇ ಚಿಂಗಾರಿ ಆ್ಯಪ್‌ಗೆ 10 ಕೋಟಿ ರೂಪಾಯಿ ಸೀಡ್ ಫಂಡಿಂಗ್ ಸಂಗ್ರಹವಾಗಿದೆ.

ದೇಶಾದ್ಯಂತ ಚೀನಾ ಆ್ಯಪ್‌ ವಿರೋಧಿ ಅಭಿಪ್ರಾಯ ಮೂಡುತ್ತಿದ್ದು ಚಿಂಗಾರಿ ಮಾದರಿಯ ದೇಶೀಯ ಆ್ಯಪ್‌ ಕಡೆಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಪರಿಣಾಮ ದೇಶೀಯ ಆ್ಯಪ್‌ ಗಳ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ಏಂಜೆಲಿಸ್ಟ್ ಇಂಡಿಯಾ, ಉತ್ಸವ್ ಸೊಮಾನಿಯಾಸ್ ಐಸೀಡ್, ವಿಲೇಜ್ ಗ್ಲೋಬಲ್, ಲಾಗ್ ಎಕ್ಸ್ ವೆಂಚರ್ಸ್, ಜಸ್ಮೀಂದರ್ ಸಿಂಗ್ ಗುಲಾಟಿ ಆಫ್ ನೌಪ್ಲೋಟ್ಸ್‌ ಚಿಂಗಾರಿಯಲ್ಲಿ ಹೂಡಿಕೆ ಮಾಡಿವೆ.

ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್

ಈ ಫಂಡಿಂಗ್ ಮೊತ್ತವನ್ನು ಹೆಚ್ಚುವರಿಯಾಗಿ ಹೊಸ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಬಳಕೆ ಮಾಡಲಾಗುತ್ತದೆ, ಈ ಮೂಲಕ ಚಿಂಗಾರಿ ಆಪ್ ನ್ನು ಭಾರತದಲ್ಲಿ ಮತ್ತಷ್ಟು ಜನರನ್ನು ತಲುಪುವಂತೆ ಮಾಡುವ ಉದ್ದೇಶವಿದೆ ಎಂದು ಸಂಸ್ಥೆ ತಿಳಿಸಿದೆ.

Desi Short Video App Chingari Raises Nearly Rs 10 Crore In Seed Funding

''ಉತ್ಪನ್ನ ಅಭಿವೃದ್ಧಿಯನ್ನು ವೇಗಗೊಳಿಸಲು, ವೇದಿಕೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಆಕರ್ಷಕವಾಗಿ ಮತ್ತು ಗ್ರಾಹಕ-ಕೇಂದ್ರೀಕರಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಈ ಹಣವನ್ನು ಬಳಸಲಾಗುವುದು'' ಎಂದು ಕಂಪನಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಚಿಂಗಾರಿ ಆ್ಯಪ್ ಪಾರದರ್ಶಕತೆ ಮತ್ತು ಬಳಕೆದಾರರ ಡೇಟಾ ಗೌಪ್ಯತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದೆ.

25 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಪ್ರತಿ ದಿನ 3 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ನಡುವೆ ಇತ್ತೀಚಿನ ವರದಿಯ ಪ್ರಕಾರ ಮೈಕ್ರೋ ಸಾಫ್ಟ್ ದೇಶೀಯ ಪ್ರಾದೇಶಿಕ ಭಾಷೆಗಳ ಸಾಮಾಜಿಕ ಜಾಲತಾಣವಾದ ಶೇರ್ ಚಾಟ್ ನಲ್ಲಿ 100 ಡಾಲರ್‌ನಷ್ಟು ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

English summary
Homegrown short video-sharing app Chingari which came into prominence as a TikTok alternative amid anti-China sentiment in the country has raised 1.3 million (around Rs 10 crore).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X