ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿನಿಮಮ್ ಬ್ಯಾಲನ್ಸ್ ಇಟ್ಟುಕೊಳ್ಳದ ಗ್ರಾಹಕರಿಗೆ 5 ಸಾವಿರ ಕೋಟಿ ದಂಡ

|
Google Oneindia Kannada News

ಮುಂಬೈ, ಆಗಸ್ಟ್ 5: ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಇರಿಸದ ಗ್ರಾಹಕರಿಂದ 2017-18ನೇ ಸಾಲಿನಲ್ಲಿ ಬ್ಯಾಂಕ್ ಗಳು 5 ಸಾವಿರ ಕೋಟಿ ತನಕ ದಂಡ ವಸೂಲಿ ಮಾಡಿವೆ. ಖಾತೆಯಲ್ಲಿ ಕನಿಷ್ಠ ಮೊತ್ತ ಇರಿಸಲು ಸಾಧ್ಯವಿಲ್ಲದವರಿಗಾಗಿ ಅಂತಲೇ 30.8 ಕೋಟಿ ಮಂದಿಗೆ ಜನಧನ್ ಯೋಜನೆ ಅಡಿ ಖಾತೆ ತೆರೆದಿದ್ದರೂ ಇಷ್ಟು ಮೊತ್ತದ ದಡ ವಸೂಲಾಗಿದೆ.

2,433 ಕೋಟಿ ರುಪಾಯಿ ವಸೂಲಿ ಮಾಡುವ ಮಾಡುವ ಮೂಲಕ ಅತಿ ಹೆಚ್ಚು ದಂಡ ಮೊತ್ತ ವಸೂಲಿ ಮಾಡಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ). ಇದು ಒಟ್ಟಾರೆ ದಂಡ ಮೊತ್ತದ ಅರ್ಧಕ್ಕಿಂತ ಸ್ವಲ್ಪ ಕಡಿಮೆ. ಬಾಕಿ 30% ಮೊತ್ತವು ಮೂರು ದೊಡ್ಡ ಖಾಸಗಿ ಬ್ಯಾಂಕ್ ಗಳಿಂದ ವಸೂಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ ಡಿ ಬಡ್ಡಿ ದರ ಏರಿಕೆಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ ಡಿ ಬಡ್ಡಿ ದರ ಏರಿಕೆ

ಉಳಿತಾಯ ಖಾತೆಗಳಿಗೆ ಹಾಕಿರುವ ದಂಡ ಪ್ರಮಾಣದ ಸರಾಸರಿ ಲೆಕ್ಕ ಹಾಕುವುದಾದರೆ ಎಚ್ ಡಿಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಇದೆ. ಎಸ್ ಬಿಐಗೆ ಇರುವ ಖಾತೆದಾರರ ಸಂಖ್ಯೆ ದೊಡ್ಡದಾದ್ದರಿಂದ ಸರಾಸರಿ ಲೆಕ್ಕಾಚಾರದಲ್ಲಿಈ ಖಾಸಗಿ ಬ್ಯಾಂಕ್ ಗಳು ಮುಂದಿವೆ.

Depositors lost Rs 5000 crore in minimum balance penalties

ಕನಿಷ್ಠ ಮೊತ್ತ ಇರಿಸದ ಕಾರಣಕ್ಕೆ ದಂಡ ಹಾಕಿರುವ ಟಾಪ್ ಐದು ಬ್ಯಾಂಕ್ ಗಳು ಮತ್ತು ದಂಡದ ಮೊತ್ತ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2434 ಕೋಟಿ

ಎಚ್ ಡಿಎಫ್ ಸಿ 590 ಕೋಟಿ

ಆಕ್ಸಿಸ್ ಬ್ಯಾಂಕ್ 530 ಕೋಟಿ

ಐಸಿಐಸಿಐ ಬ್ಯಾಂಕ್ ‌317 ಕೋಟಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ 211

ಒಟ್ಟು ಮೊತ್ತ 4988 ಕೋಟಿ ರುಪಾಯಿ

English summary
Banks have collected penalties close to Rs 5,000 crore in 2017-18 from depositors for not maintaining minimum balance in their accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X