ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಮತ್ತು ಇನ್‍ವಿಸ್ತಾದಿಂದ ಡೆನಿಮ್ ಫಾರ್ ಗುಡ್’ ಪ್ರದರ್ಶನ

By Mahesh
|
Google Oneindia Kannada News

ಬೆಂಗಳೂರು, ಜೂನ್ 22: ಭಾರತದಲ್ಲಿ 1.7 ದಶಲಕ್ಷ ಅಮೆರಿಕನ್ ಡಾಲರ್ ಜವಳಿ ರೀಟೇಲ್ ಕಂಪನಿಯಾಗಿರುವ ಅರವಿಂದ್ ಲಿಮಿಟೆಡ್ ವಿಶ್ವದಲ್ಲಿ ಅತಿ ದೊಡ್ಡದಾದ ಡೆನಿಮ್ ಶ್ರೇಣಿಯ ಬಟ್ಟೆ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾಗಿರುವ ಇನ್‍ವಿಸ್ತಾ ಜೊತೆ ಸೇರಿ ಭಾರತದ ಮಾರುಕಟ್ಟೆಗೆ ವಿನೂತನವಾದ ಡೆನಿಮ್‍ಗಳನ್ನು ಬಿಡುಗಡೆ ಮಾಡಿದೆ.

ಈ ಒಪ್ಪಂದದ ಮೂಲಕ ಅರವಿಂದ್ ಲಿಮಿಟೆಡ್ ಡೆನಿಮ್ ಫಾರ್ ಗುಡ್' ಬ್ರ್ಯಾಂಡ್‍ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಇಂದು ಬಿಡುಗಡೆ ಮಾಡಿದೆ.

ವರ್ಣರಂಜಿತ ಸಮಾರಂಭದಲ್ಲಿ ಫ್ಯಾಷನ್ ಮತ್ತು ಜವಳಿ ಉದ್ಯಮದ ಗಣ್ಯರು ಮತ್ತು ಆಸಕ್ತರ ಸಮ್ಮುಖದಲ್ಲಿ ಪ್ರಾಜೆಕ್ಟ್ ಇಂಡಿಗೋ ಲೈಫ್ ಕಳೆಗಟ್ಟಿತು. ಇಂಡಿಗೋ ಇನ್‍ಸ್ಪೈರ್ಡ್ ಲೈಫ್‍ಸ್ಟೈಲ್ ಅನ್ನು ಪ್ರತಿನಿಧಿಸುವ ಡೆನಿಮ್‍ನಿಂದ ನಿಟ್‍ವರೆಗಿನ ಜವಳಿ ಉತ್ಪನ್ನಗಳ ಸಂಗ್ರಹ ಇದೆ.

Denim to drive apparel sector growth: Arvind Ltd

ಅತ್ಯುತ್ತಮವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಅರವಿಂದ್ ಮತ್ತು ಇನ್‍ವಿಸ್ತಾ ಗ್ರಾಹಕರಿಗೆ ವಿನೂತನವಾದ ಮತ್ತು ಆವಿಷ್ಕಾರಕ ಜವಳಿ ಉತ್ಪನ್ನಗಳನ್ನು ನೀಡುವುದರಲ್ಲಿ ಒಂದೇ ಉದ್ದೇಶವಿಟ್ಟುಕೊಂಡಿವೆ.

ಇನ್‍ವಿಸ್ತಾದ ಟ್ರೇಡ್‍ಮಾರ್ಕ್ ಆಗಿರುವ ಲಿಕ್ರಾ ಟಿ400 ಮತ್ತು ಕೂಲ್‍ಮ್ಯಾಕ್ಸ್ ಎಂಬ ಪರಿಸರ ಸ್ನೇಹಿ ಮತ್ತು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಪರಿಚಯಿಸಿದೆ. ಅರವಿಂದ್‍ನ ಎಲ್ಲಾ ಸ್ಟ್ರೆಚ್ ಡೆನಿಮ್‍ಗಳು ಲಿಕ್ರಾ ಹೆಸರಿನಲ್ಲಿ ಬರುತ್ತಿದ್ದು, ಕೂಲ್‍ಮ್ಯಾಕ್ಸ್ ಕೋರ್, ಕೂಲ್‍ಮ್ಯಾಕ್ಸ್ ಆಲ್ ಸೀಸನ್, ಲಿಕ್ರಾ ಡ್ಯುಯೆಲ್‍ಎಫ್‍ಎಕ್ಸ್ ಮತ್ತು ಲಿಕ್ರಾ ಬ್ಯೂಟಿ ಉತ್ಪನ್ನಗಳು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿವೆ. ಈ ಎಲ್ಲಾ ಉತ್ಪನ್ನಗಳು ವಿನೂತನವಾದ ಆರಾಮದಾಯಕ ಮತ್ತು ಬಾಳಿಕೆ ಬರುವ ಉಡುಪುಗಳಾಗಿವೆ.

ಡೆನಿಮ್‍ನಲ್ಲಿ ಹೊಸ ಕ್ರಾಂತಿ ಮಾಡಿರುವ ಅರವಿಂದ್ ಹಲವಾರು ಐಪಿ ಆಧಾರಿತ ವಿನ್ಯಾಸಗಳು ಮತ್ತು ತಂತ್ರಜ್ಞಾನಗಳನ್ನು ಭಾರತಕ್ಕೆ ಮೊದಲ ಬಾರಿಗೆ ಪರಿಚಯಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಡೆನಿಮ್ ಫಾರ್ ಗುಡ್'' ಉತ್ಪನ್ನವು ಅರವಿಂದ್‍ನ ಬೂಮ್‍ರಾಂಗ್, ಬೂಮ್‍ರಾಂಗ್ 360, ಬೂಮ್‍ರಾಂಗ್ ಬೌನ್ಸ್, ಅಝುರೈಟ್ ಮತ್ತು ಹೈಬ್ರಿಡ್ ಚಿನೋಸ್ ಪಟ್ಟಿಗೆ ಸೇರ್ಪಡೆಯಾಗಿದೆ.

Denim to drive apparel sector growth: Arvind Ltd

ಅರವಿಂದ್ ಡೆನಿಮ್ ಲ್ಯಾಬ್ (ಎಡಿಎಲ್) ವಿಶ್ವದ ಅತ್ಯಂತ ಶ್ರೇಷ್ಠವಾದ ಪ್ರಯೋಗಾಲಯವಾಗಿದೆ. ಈ ಕೇಂದ್ರದಲ್ಲಿ ಉತ್ಪನ್ನಗಳ ಪುನರ್ ಸೃಷ್ಟಿ, ನಾವೀನ್ಯತೆ, ಟ್ರೆಂಡ್ ಸರ್ವೀಸಸ್, ಪಾಲುದಾರ ಸಂಸ್ಥೆಗಳೊಂದಿಗೆ ಮಾರುಕಟ್ಟೆ ಸಂವಹನಗಳು, ವಾಶ್ ಟ್ರೆಂಡ್ ಕಲೆಕ್ಷನ್ ಸೇರಿದಂತೆ ಹತ್ತು ಹಲವಾರು ಬಗೆಯ ಅಧ್ಯಯನ, ಸಂಶೋಧನೆಗಳು ನಡೆಯುತ್ತಿರುತ್ತವೆ.

ವಾಶ್ ಟ್ರೆಂಡ್ ಕಲೆಕ್ಷನ್ ಎಡಿಎಲ್‍ನಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇಟಲಿಯ ಮಾರ್ಟೆಲ್ಲಿ ಲ್ಯಾಂಡ್ರಿಯ ಖ್ಯಾತನಾಮ ವಾಶ್ ಕನ್‍ಸಲ್ಟೆಂಟ್‍ಗಳಾದ ಗಿಯೋವನ್ನಿ ಮತ್ತು ಆ್ಯಂಡ್ರಿಯಾ ಅವರು ಅರವಿಂದ್ ಉತ್ಪನ್ನಗಳಿಗೆ ಸಲಹೆಗಾರರಾಗಿದ್ದಾರೆ.

ಅರವಿಂದ್ ಬಿಡುಗಡೆ ಮಾಡಿದ ಪ್ರಮುಖ ಡೆನಿಮ್ ಶ್ರೇಣಿಯ ಉತ್ಪನ್ನಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಈ ಉತ್ಪನ್ನಗಳು ಸುಸ್ಥಿರತೆಗೆ ಹೆಸರುವಾಸಿಯಾಗಿದ್ದು, ಪರಿಸರ ಮತ್ತು ಸಮಾಜದ ಮೇಲೆ ಹೆಚ್ಚು ಪರಿಣಾಮ ಬೀರದ ರೀತಿಯಲ್ಲಿ ಅರವಿಂದ್ ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದೆ.

ಪ್ರಶಸ್ತಿ ವಿಜೇತ ಖಾದಿ ಡೆನಿಮ್, ಇಕ್ಕತ್ ಡೆನಿಮ್, ಝೀರೋ ಡೆನಿಮ್, ನ್ಯಾಚುರಲ್ ಫೈಬರ್‍ಗಳಾದ ಉಣ್ಣೆ ಮತ್ತು ಲೈನೆನ್, ರಿನೈಸಾನ್ಸ್‍ನಂತಹ ಅರವಿಂದ್‍ನ ಹಲವಾರು ಡೆನಿಮ್ ಬ್ರ್ಯಾಂಡ್‍ಗಳು ಜನಪ್ರಿಯವಾಗಿವೆ. ಭಾರತದ ಡೆನಿಮ್ ಮಾರುಕಟ್ಟೆಗೆ ಹಲವು ವರ್ಷಗಳಿಂದ ವಿನೂತನ ಮತ್ತು ವೈವಿಧ್ಯತೆಯ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಖ್ಯಾತಿ ಅರವಿಂದ್‍ಗಿದೆ. ಇದೀಗ ಅರವಿಂದ್ ಇಂಡಿಗೋ ಆರ್ಟ್ ಸೆಂಟರ್‍ನಲ್ಲಿ ಇಂಡಿಗೋ ಇನ್‍ಸ್ಪೈರ್ಡ್ ಲೈಫ್‍ಸ್ಟೈಲ್' ಅನ್ನು ನೀಡುತ್ತಿದೆ.

ಡೆನಿಮ್ ಫಾರ್ ಗುಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅರವಿಂದ್ ಲಿಮಿಟೆಡ್‍ನ ಡೆನಿಮ್ಸ್ ವಿಭಾಗದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಮೀರ್ ಅಖ್ತರ್ ಅವರು, ಅರವಿಂದ್‍ನಲ್ಲಿ ನಾವು ನಿರಂತರವಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ನಾವು ಹೊಸ ಹೊಸ ವಿನ್ಯಾಸಗಳ ಜೊತೆಯಲ್ಲಿ ಆರಾಮದಾಯಕ ಮತ್ತು ದೀರ್ಘಬಾಳಿಕೆ ಬರುವ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಉತ್ಪನ್ನಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಪ್ರಾಜೆಕ್ಟ್ ಇಂಡಿಗೋ ಲೈಫ್ ಡೆನಿಮ್ ವಿಭಾಗದ ಒಂದು ಹೊಸ ವಿಸ್ತರಣೆಯಾಗಿದೆ. ಈ ಮೂಲಕ ಇಂಡಿಗೋ ಭಾರತದಲ್ಲಿ ಮಾಸ್ಟರ್ ಎನಿಸಿದೆ. ಇದು ಎಲ್ಲರ ನೆಚ್ಚಿನ ಉತ್ಪನ್ನವಾಗಲಿದೆ'' ಎಂದು ತಿಳಿಸಿದರು.

English summary
Arvind Denim for Good 2018 : Textiles-to-retail conglomerate Arvind Limited today projected a promising future for the apparel sector and said denim would be its driver. Arvind Ltd company produced 140 million metres of denim annually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X